ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಡುಕಾಟಿ ಮೊನಾಸ್ಟರ್ 797 ಬೈಕ್

Written By:

ಈ ಹಿಂದೆ ಇಟಲಿಯ ಮಿಲಾನ್ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡಿದ್ದ ಡುಕಾಟಿ ಹೊಸ ಬೈಕ್ ಆವೃತ್ತಿ ಮೊನಾಸ್ಟರ್ 797 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಬೆಲೆ ಮತ್ತು ವೈಶಿಷ್ಟ್ಯತೆಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಸೂಪರ್ ಬೈಕ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಡುಕಾಟಿ, ತನ್ನ ಹೊಚ್ಚ ಹೊಸ ಬೈಕ್ ಮಾದರಿ ಮೊನಾಸ್ಟರ್ 797 ಬಿಡುಗಡೆಗೊಳಿದೆ. ಹೊಸ ಬೈಕ್ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 7.77 ಲಕ್ಷಕ್ಕೆ ಲಭ್ಯವಿರಲಿದೆ.

ಎಂಜಿನ್ ಸಾಮರ್ಥ್ಯ

803ಸಿಸಿ ಸಾಮರ್ಥ್ಯದ ಏರ್ ಕೂಲ್ಡ್ ಎಲ್-ಟ್ವಿನ್ ಎಂಜಿನ್ ಹೊಂದಿರುವ ಡುಕಾಟಿ ಮೊನಾಸ್ಟರ್ 797 ಬೈಕ್, 74ಬಿಎಚ್‌ಪಿ ಮತ್ತು 68.6ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ಮೊನಾಸ್ಟರ್ 797 ಅತ್ಯಾಕರ್ಷಕ ಹೊರ ವಿನ್ಯಾಸ ಹೊಂದಿದ್ದು, ವೇಗದ ಬೈಕ್ ಸವಾರರಿಗೆ ಅನುಕೂಲಕರವಾಗುವಂತೆ ಹತ್ತಾರು ಸುರಕ್ಷಾ ವಿನ್ಯಾಸಗಳನ್ನು ಕೈಗೊಳ್ಳಲಾಗಿದೆ.

ಡುಕಾಟಿ ಹೊರ ವಿನ್ಯಾಸದಲ್ಲಿ ಸ್ಪಾರ್ ಸ್ವಿಂಗ್ ಆರ್ಮ್ ಜೊತೆ ಉಕ್ಕಿನ ಫ್ರೇಮ್ ನೀಡಲಾಗಿದ್ದು, ಹಿಂಭಾಗ ಮತ್ತು ಮುಂಭಾಗದ ಎರಡು ಚಕ್ರಗಳಿಗೂ ಡಿಸ್ಕ್ ಬ್ರೇಕ್ ವ್ಯವಸ್ಥೆ ಅಳವಡಿಸಲಾಗಿದೆ.

ವಿಶೇಷ ಚಕ್ರಗಳನ್ನು ಹೊಂದಿರುವ ಮೊನಾಸ್ಟರ್ 797 ಬೈಕ್, ಎಲ್‌ಇಡಿ ಡಿಆರ್‌ಎಲ್ಎಸ್ ಮತ್ತು ಎಲ್‌ಇಡಿ ಟೈಲ್ ಲ್ಯಾಂಪ್ ಹೊಂದಿದೆ.

ರೆಡ್, ಸ್ಟಾರ್ ವೈಟ್ ಸಿಲ್ಕ್ ಮತ್ತು ಬ್ಲ್ಯಾಕ್ ಮೂರು ಪ್ರಮುಖ ಬಣ್ಣಗಳಲ್ಲಿ ಡುಕಾಟಿ ಮೊನಾಸ್ಟರ್ 797 ಬೈಕ್ ಖರೀದಿಗೆ ಲಭ್ಯವಿದೆ.

ಈಗಾಗಲೇ ಭಾರತೀಯ ಮಾರುಕಟ್ಟೆ ಸದ್ದು ಮಾಡುತ್ತಿರುವ ಟ್ರಯಂಪ್ ಸ್ಟ್ರೀಟ್ ಟ್ರಿಪ್ಲಲ್ ಮತ್ತು ಎಪ್ರಿಲಿಯಾ ಶಿವೆರ್ 900 ಬೈಕ್‌ಗಳಿಗೆ ಡುಕಾಟಿ ಮೊನಾಸ್ಟರ್ 797 ತೀವ್ರ ಸ್ಪರ್ಧೆ ನೀಡುವ ನೀರಿಕ್ಷೆಯಲ್ಲಿದೆ.

Read more on ಡುಕಾಟಿ ducati
English summary
Read in Kannada about Ducati Monster 797 Launched In India.
Please Wait while comments are loading...

Latest Photos