ಹಂಕ್ ಮತ್ತು ಎಕ್ಸ್‌ಟ್ರೀಮ್ ಬೈಕುಗಳನ್ನು ತನ್ನ ವೆಬ್‌ಸೈಟ್‌ನಿಂದ ಕೈಬಿಟ್ಟ ಹೀರೊ

Written By:

ವಿಶ್ವಾಸನೀಯ ವಾಹನ ತಯಾರಕ ಹೀರೋ ಮೊಟೊ ಕಾರ್ಪ್ ಇಂಡಿಯಾ ಸಂಸ್ಥೆ ತನ್ನ ವೆಬ್‌ಸೈಟ್‌ನಿಂದ ಹಂಕ್ ಮತ್ತು ಎಕ್ಸ್‌ಟ್ರೀಮ್ ಬೈಕುಗಳನ್ನು ತೆಗೆದುಹಾಕಿದೆ.

ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೊ ಮೊಟೊ ಕಾರ್ಪ್ ಇಂಡಿಯಾ ಕಂಪನಿ ತನ್ನ ವೆಬ್‌ಸೈಟ್ ಪಟ್ಟಿಯಲ್ಲಿ ಇದ್ದ ಹಂಕ್ ಮತ್ತು ಎಕ್ಸ್‌ಟ್ರೀಮ್ ಬೈಕುಗಳನ್ನು ತೆಗೆದುಹಾಕಿದ್ದು, ಈ ಜಾಗಕ್ಕೆ ಸದ್ಯದರಲ್ಲಿಯೇ ಹೊಸ ಬೈಕುಗಳನ್ನು ಸೇರ್ಪಡೆಗೊಳಿಸಲಿದೆ ಎನ್ನಲಾಗಿದೆ.

ನವೀನ ಮಾದರಿಯ ಬೈಕುಗಳ ತಯಾರಿಕೆಯಲ್ಲಿ ತೊಡಗಿಕೊಂಡಿರುವ ಹೀರೊ ಕಂಪನಿ, ಈ ವರ್ಷ ಅಥವಾ ಮುಂದಿನ ವರ್ಷ ಹೊಸ ರೀತಿಯ ವಿನ್ಯಾಸ ಪಡೆದ ದ್ವಿಚಕ್ರ ಬಿಡುಗಡೆ ಮಾಡಲಿದೆ.

ಹೀರೊ ಮೊಟೊ ಕಾರ್ಪ್ ತನ್ನ ಉತ್ಪನ್ನಗಳ ಲೈನ್‌ಅಪ್ ಸಂಪೂರ್ಣ ಅಪ್ಡೇಟ್ ಮಾಡುತ್ತಿದ್ದು, ಕಳೆದ ಬಾರಿ ಎಚ್ಎಫ್ ಡಾನ್ ಮತ್ತು ಸ್ಪ್ಲೆಂಡರ್ ಐಸ್ಮಾರ್ಟ್ ಬೈಕುಗಳನ್ನು ತನ್ನ ಮಾರಾಟ ಪಟ್ಟಿ ಇಂದ ಕೈಬಿಟ್ಟಿತ್ತು.

ಹಂಕ್ ಮತ್ತು ಎಕ್ಸ್‌ಟ್ರೀಮ್ ಬೈಕುಗಳನ್ನು ವೆಬ್‌ಸೈಟ್‌ನಿಂದ ತೆಗೆದುಹಾಕುವ ಮೂಲಕ ಹೀರೊ ಕಂಪನಿಯು ತನ್ನ 150ಸಿಸಿ ವಿಭಾಗದಲ್ಲಿ ಅದರ ಬಂಡವಾಳವನ್ನು ಕಡಿಮೆಗೊಳಿಸಿದೆ.

ಇತ್ತೀಚೆಗಷ್ಟೇ ಹೀರೊ ಮೊಟೊಕಾರ್ಪ್ ಅಚಿವೆರ್ ಮತ್ತು ಎಕ್ಸ್‌ಟ್ರೀಮ್ ಸ್ಪೋರ್ಟ್ಸ್ ಬೈಕುಗಳನ್ನು ಬಿಡುಗಡೆ ಮೂಲಕ 150ಸಿಸಿ ವಿಭಾಗದಲ್ಲಿ ಹೆಚ್ಚು ತೊಡಗಿಸಿಕೊಂಡಿತ್ತು.

150 ವಿಭಾಗದಲ್ಲಿ ಐ3ಎಸ್ ತಂತ್ರಜ್ಞಾನ ಹೊಂದಿದ ಭಾರತದ ಮೊದಲ ಮೋಟಾರ್ ಸೈಕಲ್ ಎಂಬ ಖ್ಯಾತಿಗೆ ಹೀರೊ ಅಚೀವರ್ ಪಾತ್ರವಾಗಿತ್ತು.

ಹೀರೊ ಅಚೀವರ್ ಬೈಕ್ 149.1ಸಿಸಿ ಸಿಲಿಂಡರ್ ಎಂಜಿನ್ ಹೊಂದಿದೆ ಮತ್ತು 12.8 ಎನ್ಎಂ ತಿರುಗುಬಲದಲ್ಲಿ 13.4 ಅಶ್ವಶಕ್ತಿ ಉತ್ಪಾದಿಸುತ್ತದೆ.

ಇನ್ನು, ಹೀರೊ ಎಕ್ಟ್ರೀಮ್ ಸ್ಪೋರ್ಟ್ಸ್ ಬೈಕ್ ಸ್ಪೋರ್ಟಿ ಲುಕ್ ಹೊಂದಿದ್ದು, 149.1 ಸಿಸಿ ಸಿಲಿಂಡರ್ ಎಂಜಿನ್ ಇರಿಸಲಾಗಿದೆ. ಈ ಬೈಕ್ 13.5 ಏನ್ಎಂ ತಿರುಗುಬಲದಲ್ಲಿ 15.6 ರಷ್ಟು ಅಶ್ವಶಕ್ತಿ ಉತ್ಪಾದಿಸಲಿದೆ.

English summary
werfwer
Please Wait while comments are loading...

Latest Photos