ಬಿಡುಗಡೆಗೊಂಡ ಹೊಚ್ಚ ಹೊಸ "ಸೂಪರ್ ಸ್ಪ್ಲೆಂಡರ್ ಐ3ಎಸ್"

ಭಾರತೀಯ ನಾಗರೀಕರ ನೆಚ್ಚಿನ ಬೈಕ್ ಸ್ಪ್ಲೆಂಡರ್ ಮತ್ತೆ ದೇಶದ ಜನರ ಮನ ಗೆಲ್ಲಲು ಹೊಸ ಅವತಾರದಲ್ಲಿ ಬರುತ್ತಿದೆ.

By Girish

ಹೀರೋ ಮೋಟೊಕಾರ್ಪ್ ಕಂಪನಿಯ ಈಗ ನೂತನ ಮಾದರಿಯ ಸೂಪರ್ ಸ್ಪ್ಲೆಂಡರ್ ಐ3ಎಸ್ ತಂತ್ರಜ್ಞಾನ ಹೊಂದಿರುವ ಬೈಕನ್ನು ಹೊರತಂದಿದ್ದು, ಈ ಮೂಲಕ ಮಾರಾಟವನ್ನು ಇನ್ನಷ್ಟು ಉತ್ತೇಜಿಸುವ ನಿರೀಕ್ಷೆಯಲ್ಲಿದೆ.

ಬಿಡುಗಡೆಗೊಂಡ ಹೊಚ್ಚ ಹೊಸ

ಸ್ಪ್ಲೆಂಡರ್ ದೇಶದ ಜನರ ವಿಶ್ವಾಸಗಳಿಸಿದ ಬೈಕ್ ಗಳಲ್ಲಿ ಮೊದಲ ಸ್ಥಾನದಲ್ಲಿ ಮುಂದುವರೆದಿದೆ, ಹಾಗು ಅತ್ಯಂತ ಯಶಸ್ವಿ ಮಾದರಿಗಳಲ್ಲಿ ಒಂದಾಗಿದೆ. ಈ ನಿಟ್ಟಿನಲ್ಲಿ ಸೂಪರ್ ಸ್ಪ್ಲೆಂಡರ್ ಹೆಚ್ಚಿನ ಸಂಖ್ಯೆಯ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಬಿಡುಗಡೆಗೊಂಡ ಹೊಚ್ಚ ಹೊಸ

ಇನ್ನು ಐ3ಎಸ್ ತಂತ್ರಜ್ಞಾನ ಹೊಂದಿರುವ ಬೈಕಿನ ಹೊಸ ಮುಖ್ಯ ಲಕ್ಷಣಗಳ ಬಗ್ಗೆ ಹೇಳುವುದಾದರೆ, 1,995 ಎಂಎಂ ಉದ್ದವಿರುವ ಬೈಕ್ ಇದಾಗಿದೆ, 735 ಎಂಎಂ ಅಗಲವಿದ್ದು, 1095 ಎಂಎಂ ಎತ್ತರ ಹೊಂದಿದೆ.

ಬಿಡುಗಡೆಗೊಂಡ ಹೊಚ್ಚ ಹೊಸ

ಈ ಮೊದಲು ತಾನು ಪೇಟೆಂಟ್ ಪಡೆದಿರುವ ಐ3ಎಸ್ ತಂತ್ರಜ್ಞಾನ ಹೊಂದಿರುವ ಫ್ಯಾಶನ್ ಪ್ರೊ ಬೈಕ್ ಅನ್ನು ಬಿಡುಗಡೆಗೊಳಿಸಿತ್ತು.

ಬಿಡುಗಡೆಗೊಂಡ ಹೊಚ್ಚ ಹೊಸ

ಈ ಬೈಕ್ ಎಲ್ಲಾ ಬೈಕುಗಳಂತೆ ಅನ್ಕೊಂಡ್ರಾ ? ಖಂಡಿತ ಅಲ್ಲ, ಈ ಬೈಕಿನಲ್ಲಿ ಐ3ಎಸ್ ತಂತ್ರಜ್ಞಾನ ಅಳವಡಿಸಲಾಗಿದ್ದು, ನಿಂತಿರುವ ಸಮಯದಲ್ಲಿ ಈ ಬೈಕ್ ಐದು ಸೆಕೆಂಡ್ಸ್ ಗಿಂತ ಹೆಚ್ಚು ಹೊತ್ತು ಚಲನೆಯ ಸ್ಥಿತಿಯಲ್ಲಿದ್ದರೆ ಗಾಡಿಯು ತಂತಾನೆ ನಿಷ್ಕ್ರಿಯಗೊಳ್ಳುತ್ತದೆ, ನೀವು ಕ್ಲಚ್ ಲಿವರ್ ಎಳೆದ ತಕ್ಷಣ ಮತ್ತೆ ಚಾಲನಾ ಸ್ಥಿತಿಗೆ ಮರಳುತ್ತದೆ.

ಬಿಡುಗಡೆಗೊಂಡ ಹೊಚ್ಚ ಹೊಸ

ಸೂಪರ್ ಸ್ಪ್ಲೆಂಡರ್ ಬೈಕ್ ಬಿಎಸ್ಐವಿ ಕಂಪ್ಲೈಂಟ್ ಹೊಂದಿದೆಯೇ ಇಲ್ಲವೇ ಎನ್ನುವ ವಿಚಾರ ಇನ್ನು ತಿಳಿದುಬಂದಿಲ್ಲ.

ಮತ್ತೆ ಬಂದಿದೆ ಭಾರತದ ಯಶಸ್ವಿ ಬೈಕ್

ಈ ಬೈಕ್, ಬ್ಲಾಕ್ ವಿಥ್ ಎಲೆಕ್ಟ್ರಿಕ್ ಪರ್ಪಲ್, ಕ್ಯಾಂಡಿ ಬ್ಲಾಸಿಂಗ್ ರೆಡ್, ಗ್ರ್ಯಾಫೈಟ್ ಕಪ್ಪು, ವೈಬ್ರೆಂಟ್ ನೀಲಿ ಮತ್ತು ಬ್ಲಾಕ್ ವಿಥ್ ಫೈರಿ ರೆಡ್ ಎಂಬ ಹೊಚ್ಚ ಹೊಸ ಬಣ್ಣಗಳಲ್ಲಿ ಲಭ್ಯವಿದೆ.

ಮತ್ತೆ ಬಂದಿದೆ ಭಾರತದ ಯಶಸ್ವಿ ಬೈಕ್

ಹೊಸ ಐ3ಎಸ್ ತಂತ್ರಜ್ಞಾನ ಹೊಂದಿರುವ ಸೂಪರ್ ಸ್ಪ್ಲೆಂಡರ್ ಸುಮಾರು 121 ಕೆ.ಜಿ ಭಾರವಿದ್ದು, 124.7ಸಿಸಿ ಯ ಏರ್-ಕೂಲ್ಡ್ ಎಂಜಿನ್ ಹೊಂದಿದೆ. ಹಾಗೆಯೇ ಫೋರ್ ಸ್ಪೀಡ್ ಗೇರ್ ಬಾಕ್ಸ್ ಸಹ ಪಡೆದುಕೊಳ್ಳಲಿರುವ ಈ ಬೈಕ್ 10.35 ಎನ್ಎಂ ತಿರುಗುಬಲದಲ್ಲಿ 9 ಅಶ್ವಶಕ್ತಿಯನ್ನು ಉತ್ಪಾದಿಸಲಿರುವ ಈ ಬೈಕ್ ನಿಮಗೆ ರೂ. 55,275 ಗೆ ಸಿಗಲಿದೆ.

ಬಜಾಜ್ ಕಂಪನಿಯ ಡೊಮಿನರ್ 400 ಬೈಕಿನ ಫೋಟೋಗಳನ್ನು ವೀಕ್ಷಿಸಿ.

Most Read Articles

Kannada
English summary
The 2017 Hero Super Splendor i3S measures 1,995 mm in length, 735 mm in width and 1,095 mm in height.
Story first published: Wednesday, February 15, 2017, 13:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X