ಒಂದಾಗಲಿವೆ ಉಬರ್ ಮತ್ತು ಹೀರೋ ಮೋಟೋಕಾರ್ಪ್: ಕ್ಯಾಬ್ ಸರ್ವಿಸ್ ರೀತಿಯಲ್ಲೇ ಬರಲಿದೆ ಬೈಕ್ ಸೇವೆಗಳು.!

ಕೆಲ ವರದಿಗಳ ಪ್ರಕಾರ ಇಷ್ಟರಲ್ಲೇ ಉಬರ್ ಮತ್ತು ಹೀರೋ ಮೋಟೋಕಾರ್ಪ್ ಕೈಜೋಡಿಸಲಿದ್ದು, ಮೆಟ್ರೋ ಪಾಲಿಟಿನ್ ನಗರಗಳಲ್ಲಿ ಕ್ಯಾಬ್ ಸೇವೆಗಳ ರೀತಿಯಲ್ಲೇ ಬೈಕ್ ಸೇವೆಗಳು ಲಭ್ಯವಾಗಲಿವೆ.

By Praveen

ಮೆಟ್ರೋ ಪಾಲಿಟಿನ್ ನಗರಗಳಲ್ಲಿ ಕ್ಯಾಬ್ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಉಬರ್ ಸಂಸ್ಥೆಯು, ಸದ್ಯದಲ್ಲೇ ಪ್ರತಿಷ್ಠಿತ ಬೈಕ್ ಉತ್ಪಾದನಾ ಸಂಸ್ಥೆ ಹೀರೋ ಮೋಟೋ ಕಾರ್ಪ್ ಕೈಜೋಡಿಸಲಿದೆ. ಈ ಬಗ್ಗೆ ಅಂತಿಮ ಹಂತದ ಮಾತುಕತೆ ನಡೆದಿದ್ದು, ಕ್ಯಾಬ್‌ಗಳ ರೀತಿಯಲ್ಲೇ ಬೈಕ್‌ಗಳ ಸೇವೆ ಶುರುವಾಗಲಿದೆ.

ಒಂದಾಗಲಿವೆ ಉಬರ್ ಮತ್ತು ಹೀರೋ ಮೋಟೋಕಾರ್ಪ್: ಕ್ಯಾಬ್ ಸರ್ವಿಸ್ ರೀತಿಯಲ್ಲೇ ಬರಲಿದೆ ಬೈಕ್ ಸೇವೆಗಳು.!

ಈಗಾಗಲೇ ಬೈಕ್ ಸೇವೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಉಬರ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿರುವ ಹೀರೋ ಮೋಟೋಕಾರ್ಪ್, ಸದ್ಯದಲ್ಲೇ ಅಂತಿಮ ತೀರ್ಮಾನ ಪ್ರಕಟಿಸಲಿದೆ. ಹೀಗಾಗಿ ಅಂದುಕೊಂಡತೆ ಆದಲ್ಲಿ ಮೆಟ್ರೋ ಪಾಲಿಟಿನ್ ನಗರಗಳಲ್ಲಿ ಉಬರ್ ಬೈಕ್‌ ಟ್ಯಾಕ್ಸಿಗಳು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಸೇವೆ ಒದಗಿಸಲು ಸಿದ್ಧವಾಗಲಿವೆ.

ಒಂದಾಗಲಿವೆ ಉಬರ್ ಮತ್ತು ಹೀರೋ ಮೋಟೋಕಾರ್ಪ್: ಕ್ಯಾಬ್ ಸರ್ವಿಸ್ ರೀತಿಯಲ್ಲೇ ಬರಲಿದೆ ಬೈಕ್ ಸೇವೆಗಳು.!

ಇನ್ನು ಮಾತುಕತೆಗೂ ಮುನ್ನವೇ ಯೋಜನೆ ಬಗ್ಗೆ ಹೀರೋ ಮೋಟೋಕಾರ್ಪ್ ಅಗತ್ಯ ತಯಾರಿ ಮಾಡಿಕೊಂಡಿದ್ದು, ಉಬರ್ ಜೊತೆಗಿನ ಮಾತುಕತೆ ಯಶಸ್ವಿಯಾಗುತ್ತಿದ್ದಂತೆ ವಿನೂತನ ಯೋಜನೆಯನ್ನು ಜಾರಿ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಒಂದಾಗಲಿವೆ ಉಬರ್ ಮತ್ತು ಹೀರೋ ಮೋಟೋಕಾರ್ಪ್: ಕ್ಯಾಬ್ ಸರ್ವಿಸ್ ರೀತಿಯಲ್ಲೇ ಬರಲಿದೆ ಬೈಕ್ ಸೇವೆಗಳು.!

ತಜ್ಞರ ಪ್ರಕಾರ ಉಬರ್ ಮತ್ತು ಹೀರೋ ಮೋಟೋ ಕಾರ್ಪ್ ನಡುವಿನ ಮಾತುಕತೆ ಯಶಸ್ವಿಯಾಗುವ ಸಾಧ್ಯತೆಗಳಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಈ ಎರಡು ಸಂಸ್ಥೆಗಳು ಅತಿದೊಡ್ಡ ಪಾಲುದಾರಿಕೆಯ ಸಂಸ್ಥೆಗಳಾಗಲಿವೆ ಎನ್ನಲಾಗಿದೆ.

ಒಂದಾಗಲಿವೆ ಉಬರ್ ಮತ್ತು ಹೀರೋ ಮೋಟೋಕಾರ್ಪ್: ಕ್ಯಾಬ್ ಸರ್ವಿಸ್ ರೀತಿಯಲ್ಲೇ ಬರಲಿದೆ ಬೈಕ್ ಸೇವೆಗಳು.!

ಅಮೆರಿಕದಲ್ಲಿ ಅತಿಹೆಚ್ಚು ಬಂಡವಾಳ ಹೂಡಿಕೆ ಮಾಡಿರುವ ಉಬರ್ ಇತ್ತೀಚಿನ ದಿನಗಳಲ್ಲಿ ಭಾರತದಲ್ಲೂ ತನ್ನ ಕ್ಯಾಬ್ ಸೇವೆಗಳ ಮೂಲಕ ಲಾಭದ ಹಾದಿಯಲ್ಲಿದೆ. ಇದರ ಜೊತೆಗೆ ಭಾರತದಲ್ಲಿ ಅತಿಹೆಚ್ಚು ಜನಪ್ರಿಯವಾಗಿರುವ ಹೀರೋಮೋಟೋ ಕಾರ್ಪ್ ಜೊತೆ ಕೈ ಜೋಡಿಸಲಿದ್ದು, ಮತ್ತಷ್ಟು ಜನಪ್ರಿಯತೆ ಪಡೆಯುವ ಸಾಧ್ಯತೆಗಳಿವೆ.

ಒಂದಾಗಲಿವೆ ಉಬರ್ ಮತ್ತು ಹೀರೋ ಮೋಟೋಕಾರ್ಪ್: ಕ್ಯಾಬ್ ಸರ್ವಿಸ್ ರೀತಿಯಲ್ಲೇ ಬರಲಿದೆ ಬೈಕ್ ಸೇವೆಗಳು.!

ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡಿರುವ ಹೀರೋ ಮೋಟೋಕಾರ್ಪ್ ಸಂಸ್ಥೆಯು, ಸದ್ಯದಲ್ಲೇ ಉಬರ್ ಸಂಸ್ಥಾಪಕ ಟ್ರಾವಿಸ್ ಕಲಾನಿಕ್ ಜೊತೆ ಅಂತಿಮ ಮಾತುಕತೆ ನಡೆಸಲಿದ್ದಾರೆ. ಈ ಬಗ್ಗೆ ಎಕಾನಮಿಕ್ ಟೈಮ್ಸ್ ಜೊತೆ ಮಾಹಿತಿ ಹಂಚಿಕೊಂಡಿರುವ ಹೀರೋ ಮೋಟೋ ಕಾರ್ಪ್ ಸಂಸ್ಥೆಯ ಸಿಇಒ ಪವನ್ ಮುಂಜಲ್, ಸದ್ಯದಲ್ಲೇ ಬೈಕ್ ಸೇವೆ ಆರಂಭಿಸುವ ತವಕದಲ್ಲಿದ್ದೇವೆ ಎಂದಿದ್ದಾರೆ.

ಒಂದಾಗಲಿವೆ ಉಬರ್ ಮತ್ತು ಹೀರೋ ಮೋಟೋಕಾರ್ಪ್: ಕ್ಯಾಬ್ ಸರ್ವಿಸ್ ರೀತಿಯಲ್ಲೇ ಬರಲಿದೆ ಬೈಕ್ ಸೇವೆಗಳು.!

ಒಟ್ಟಿನಲ್ಲಿ ಮಾತುಕತೆ ಸಫಲವಾದಲ್ಲಿ ಇನ್ಮುಂದೆ ಬೆಂಗಳೂರು ಸೇರಿದಂತೆ ಮೆಟ್ರೋ ಪಾಲಿಟಿನ್ ನಗರಗಳಲ್ಲಿ ಉಬರ್ ಬೈಕ್ ಟ್ಯಾಕ್ಸಿ ಸೇವೆಗಳು ಲಭ್ಯವಾಗಲಿದೆ. ಜೊತೆಗೆ ಉಬರ್ ಬೈಕ್ ಟ್ಯಾಕ್ಸಿ ಸೇವೆಗಳು ಆರಂಭವಾದಲ್ಲಿ ಪ್ರತಿಸ್ಪರ್ಧಿಗಳಿಗೆ ತೀವ್ರ ಸ್ವರ್ಧೆ ಒಡ್ಡಲಿದ್ದಾರೆ.

ನೀವು ಬೈಕ್ ರೇಸ್ ಪ್ರಿಯರಾಗಿದ್ದರೆ ಡಾಕರ್ ರ‍್ಯಾಲಿ ಚಿತ್ರಗಳ ವಿಕ್ಷಣೆಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Most Read Articles

Kannada
Read more on ಉಬರ್ uber
English summary
Hero MotoCorp and Uber may tie up to tap into the bike taxi segment in India. Talks are underway and here’s a report of what can be expected.
Story first published: Wednesday, March 8, 2017, 11:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X