ಹೊಚ್ಚ ಹೊಸ ಹೋಂಡಾ ಆಕ್ಟಿವಾ 125 ಬಿಡುಗಡೆ : ನೀವು ತಿಳಿದುಕೊಳ್ಳಲೇ ಬೇಕಾದ ಅಂಶಗಳು.

Written By:

ಹೊಚ್ಚ ಹೊಸ ಹೋಂಡಾ ಆಕ್ಟಿವಾ 125 ಬಿಎಸ್-IV ಹೊರಸೂಸುವಿಕೆಯ ಅಂಶ ಹೊಂದಿದ್ದು, ಆಕ್ಟಿವಾ 110 ಸಿಸಿ ಆವೃತ್ತಿಯ ಯಶಸ್ಸನ್ನು ಮುಂದುವರಿಸಿಕೊಂಡು ಹೋಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಪ್ರಸ್ತುತ ಇರುವ ಎರಡು ಬಗೆಯ ಆಕ್ಟಿವಾ ಜಾಗವನ್ನು ಹೊಸ ಮೂರು ಬಗೆಯ ಆಕ್ಟಿವಾ ತುಂಬಲಿದ್ದು, ಮಧ್ಯೆಯ ಆವೃತಿಯಲ್ಲಿ ಖಾಯಂ ಆಗಿ ಬರುವ ಡ್ರಮ್ ಬ್ರೇಕ್ಸ್ ಜೊತೆ ಅಲಾಯ್ ಚಕ್ರ ಇರಿಸಲಾಗಿದ್ದು, ಉಳಿದಂತೆ ಎಲ್ಲಾ ವಿಧಗಳಲ್ಲೂ ಕಾಂಬಿ ಬ್ರೇಕಿಂಗ್ ಸಿಸ್ಟಮ್ (ಸಿಬಿಎಸ್) ಅಳವಡಿಸಲಾಗಿದೆ.

ಈ ಸ್ಕೂಟರ್ ಆಟೋ ಹೆಡ್ ಲ್ಯಾಂಪ್ ಆನ್ (AHO) ಸುರಕ್ಷತಾ ವೈಶಿಷ್ಟ್ಯವನ್ನು ಹೊಂದಿದ್ದು, ರೂ. 56.954 ಎಕ್ಸ್ ಶೋರೂಂ (ದೆಹಲಿ) ದರ ನಿಗದೀಪಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಅಂದ ಹಾಗೆ ನೂತನ ಆಕ್ಟಿವಾ 125 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 10.54 ಎನ್ಎಂ ತಿರುಗುಬಲದಲ್ಲಿ 8.52 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಸಂಸ್ಥೆಯ ಪ್ರಕಾರ ನೂತನ ಆಕ್ಟಿವಾ 125 ಸ್ಕೂಟರ್ ಪ್ರತಿ ಲೀಟರ್‌ಗೆ 60 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಗುಣಮಟ್ಟದ ಉತ್ಪನ್ನಗಳ ವಿಚಾರದಲ್ಲಿ ಈಗಾಗಲೇ ಉತ್ತಮ ಹೆಸರು ಕಾಪಾಡಿಕೊಂಡಿರುವ ಹೋಂಡಾ, ಎಎಚ್ಓ ಹೊಂದಿರುವ ಆಕ್ಟಿವಾ ಮೂಲಕ ಮಗದೊಮ್ಮೆ ಸದ್ದು ಮಾಡುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.

ಹೋಂಡಾ ಕಂಪನಿಯು ತನ್ನ ಪೇಟೆಂಟ್ ಹೊಂದಿರುವ ಕಾಂಬಿ ಬ್ರೇಕಿಂಗ್ ಸಿಸ್ಟಮ್ (ಸಿಬಿಎಸ್) ತಂತ್ರಜ್ಞಾನವನ್ನು ಈ ಹೊಸ 2017 ಆಕ್ಟಿವಾದಲ್ಲಿ ಅಳವಡಿಸಿದೆ.

ಹೋಂಡಾ ಕಂಪನಿಯ ಈ ಕಾಂಬಿ ಬ್ರೇಕಿಂಗ್ ಸಿಸ್ಟಮ್ (ಸಿಬಿಎಸ್) ತಂತ್ರಜ್ಞಾನದಿಂದಾಗಿ ಬ್ರೆಕಿಂಗ್ ವ್ಯೆವಸ್ಥೆಯನ್ನು ಸಮತೋಲನಗೊಳಿಸಿ ಬ್ರೇಕ್ ಹಾಕಿದಾಗ ದೂರ ಹೋಗಿ ನಿಲ್ಲುವ ಸಮಸ್ಯೆ ಇರುವುದಿಲ್ಲ.

ನೂತನ ಆಕ್ಟಿವಾ 125 ಸಿಸಿ ಮುಂಬಾಗದಲ್ಲಿ ಟೆಲೆಸ್ಕೋಪಿಕ್ ಸಸ್ಪೆನ್ಷನ್ ಸೌಲಭ್ಯ ಹೊಂದಿದ್ದು, ಅಗಲ ಮತ್ತು ಉದ್ದವಾದ ಸೀಟ್ ಇರಿಸಲಾಗಿರುವುದರಿಂದ ಆರಾಮದಾಯಕ ಪ್ರಯಾಣ ನಿಮ್ಮದಾಗಿರಲಿದೆ. 12" ದೊಡ್ಡ ಚಕ್ರಗಳು ಈ ಆಕ್ಟಿವಾ 125 ನಲ್ಲಿ ಇರಲಿವೆ.

ಹೊಸದಾಗಿ ಬಿಡುಗಡೆಗೊಂಡಿರುವ ಎಪ್ರಿಲಿಯಾ ಎಸ್ಆರ್ 150 ರೇಸ್ ಸ್ಕೂಟರ್‌ನ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
Honda Activa 125 launched in India. The new Honda Activa 125 is the first automatic scooter in India to feature Automatic Head Lamp On (AHO) and meet Bharat Stage-IV emission norms.
Please Wait while comments are loading...

Latest Photos