ಬಿಡುಗಡೆಗೊಂಡಿದೆ ಹೊಚ್ಚ ಹೊಸ ಹೋಂಡಾ ಏವಿಯೇಟರ್- ಬೆಲೆ ಕೇವಲ 52 ಸಾವಿರ ಮಾತ್ರ..!!

ಬಿಎಸ್-IV ಹಾಗೂ ಎಹೆಚ್‌ಓ ತಂತ್ರಜ್ಞಾನಗೊಂದಿಗೆ ಸಿದ್ಧಗೊಂಡಿರುವ ಹೊಚ್ಚ ಹೊಸ ಹೋಂಡಾ ಏವಿಯೇಟರ್ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದೆ.

Written By:

ಹೋಂಡಾ ಬಹು ನೀರಿಕ್ಷಿತ ಹೊಚ್ಚ ಹೊಸ ಏವಿಯೇಟರ್ ಸ್ಕೂಟರ್ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ವಿನೂತನ ಸ್ಕೂಟರ್ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 52,077ಗಳಿಗೆ ಲಭ್ಯವಿದೆ.

ಹೊಂಡಾ ಏವಿಯೇಟರ್ ಪ್ರಸ್ತುತ ಮಾದರಿಯೂ ಬಿಎಸ್-IV ಎಂಜಿನ್ ಹಾಗೂ ಎಹೆಚ್‌ಓ( ಆಟೋಮೆಟಿಕ್ ಹೆಡ್‌ಲ್ಯಾಂಪ್ ಆನ್) ವ್ಯವಸ್ಥೆ ಹೊಂದಿದೆ. ಅಲ್ಲದೇ ಹೊಸ ವಿನ್ಯಾಸಗಳಿಂದ ಸಿದ್ಧಗೊಂಡಿದ್ದು, ಯುವ ಸಮುದಾಯವನ್ನು ಸೆಳೆಯಲು ಸಿದ್ಧಗೊಂಡಿದೆ.

ಏಪ್ರಿಲ್ 1 ರಿಂದ ಕೇಂದ್ರ ಸರ್ಕಾರ ಕಟ್ಟುನಿಟ್ಟಾಗಿ ಜಾರಿ ತರಲು ಉದ್ದೇಶಿಸಿರುವ ಬಿಎಸ್-IV ಎಂಜಿನ್ ಹಾಗೂ AHO(ಆಟೋಮೆಟಿಕ್ ಹೆಡ್‌ಲ್ಯಾಂಪ್ ಆನ್) ವ್ಯವಸ್ಥೆಗಳನ್ನು ಹೊಸ ಮಾದರಿಯಲ್ಲಿ ಅಳವಡಿಸಲಾಗಿದೆ. ಹೀಗಾಗಿ ಇವು ಪರಿಸರ ಸ್ನೇಹಿ ಬೈಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಭಾರೀ ಪ್ರಮಾಣದ ಮಾರಾಟ ನೀರಿಕ್ಷೆಯಿದೆ.

ವಿವಿಧ ಬಣ್ಣಗಳಲ್ಲಿ ಮಿಂಚುತ್ತಿರುವ ಹೋಂಡಾ ಏವಿಯೇಟರ್ ಹೊಸ ಮಾದರಿಗಳು ಒಟ್ಟು ನಾಲ್ಕು ಬಣ್ಣಗಳಲ್ಲಿ ಲಭ್ಯವಿವೆ. ಪರ್ಲ್ ಇಗ್ನಿಸ್ ಬ್ಲ್ಯಾಕ್, ಮ್ಯಾಟ್ ಸೆಲೆನಿ ಸಿಲ್ವರ್ ಮೆಟಾಲಿಕ್, ರೆಬಲ್ ರೆಡ್ ಮೆಟಾಲಿಕ್ ಮತ್ತು ಪರ್ಲ್ ಅಮ್ಯಾಜಿಂಗ್ ವೈಟ್ ಬಣ್ಣಗಳಲ್ಲಿ ಲಭ್ಯವಾಗಲಿವೆ.

109-ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿರುವ ವಿನೂತನ ಹೋಂಡಾ ಏವಿಯೇಟರ್ , ಸ್ಕೂಟರ್ ವಿಭಾಗದಲ್ಲೇ ಅತಿಹೆಚ್ಚು 8-ಬಿಎಚ್‌ಪಿ ಮತ್ತು 8.94-ಎನ್‌ಎಂ ಟಾರ್ಕ್ ಉತ್ಪಾದಿಸುತ್ತೆ. ಹೀಗಾಗಿ ಮೈಲೇಜ್ ವಿಚಾರದಲ್ಲಿ ಯಾವುದೇ ಚಿಂತೆ ಬೇಡ.

ಟ್ಯೂಬ್‌ಲೇಸ್ ಟೈರ್ ಹೊಂದಿರುವ ಹೋಂಡಾ ಏವಿಯೇಟರ್ ಸ್ಕೂಟರ್ ಮುಂಭಾಗದಲ್ಲಿ 90/90-12 ಹಾಗೂ ಹಿಂಭಾಗದಲ್ಲಿ 90/100-10 ಟೈರ್ ಲೇಸ್ ಟ್ಯೂಬ್ ಹೊಂದಿದೆ. ಇದರಿಂದ ಅರಾಮದಾಯಕ ಸ್ಕೂಟರ್ ಚಾಲನೆಗೆ ಸಹಕಾರಿಯಾಗಲಿದೆ.

ಹೊರ ಭಾಗದಲ್ಲಿ ಹೊಸ ಲುಕ್ ಹೊಂದಿರುವ ಹೋಂಡಾ ಏವಿಯೇಟರ್‌ನಲ್ಲಿ ಹತ್ತಾರು ವಿಶೇಷತೆಗಳಿವೆ. ಮುಂಭಾಗದಲ್ಲಿ ಡಿಸ್‌ಬ್ರೇಕ್ ವ್ಯವಸ್ಥೆಯಿದ್ದು, ಸೀಟು ಕೆಳಭಾಗದಲ್ಲಿ ಮೊಬೈಲ್ ಚಾರ್ಜಿಂಗ್ ಕೂಡಾ ಮಾಡಿಕೊಳ್ಳಬಹುದಾಗಿದೆ. ಜೊತೆಗೆ 5 ಸ್ಪೋಕ್ ಅಲ್ಹಾಯ್ ವೀಲ್ಹ್‌ಗಳನ್ನು ಹೊಂದಿದೆ.

ಹೋಂಡಾ ಏವಿಯೇಟರ್ ಸ್ಕೂಟರ್ ವಿಭಾಗದಲ್ಲಿ ವಿವಿಧ ಮಾದರಿಗಳನ್ನು ಪರಿಚಯಿಸಲಾಗಿದೆ. ಹೀಗಾಗಿ ಪ್ರಾರಂಭಿಕ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 52,007 ಗಳಿದ್ದು, ಅಲಾಯ್ ವೀಲ್ಹ್ ವ್ಯವಸ್ಥೆ ಹೊಂದಿರುವ ಮಾದರಿಯೂ ರೂ. 54,022 ಗಳಿಗೆ ಲಭ್ಯವಿದೆ. ಜೊತೆಗೆ ಡಿಸ್ಕ್ ಬ್ರೇಕ್ ಹೊಂದಿರುವ ಮಾದರಿಯೂ ರೂ. 56.454 ಗಳಿಗೆ ಸಿಗಲಿದೆ.

ಎಪ್ರಿಲಿಯಾ ರೇಸ್ ಎಸ್ಆರ್ 150 ಸ್ಕೂಟರ್ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಫೋಟೋ ಗ್ಯಾಲರಿಯನ್ನು ಕ್ಲಿಕ್ ಮಾಡಿ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ

Click to compare, buy, and renew Car Insurance online

Buy InsuranceBuy Now

Read more on ಹೋಂಡಾ honda
Story first published: Friday, March 24, 2017, 12:18 [IST]
English summary
Honda has updated the Aviator with BS4 and Automatic Headlamp On (AHO) and is now available with a selection of five variants.
Please Wait while comments are loading...

Latest Photos

LIKE US ON FACEBOOK