ಬಿಸ್-4 ಎಂಜಿನ್ ಹೊಂದಿರೋ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ ಬಿಡುಗಡೆ

ಬಿಸ್-4 ಎಂಜಿನ್ ಹೊಂದಿರುವ ಹೊಚ್ಚ ಹೊಸ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಬೆಲೆ ಮತ್ತು ವಿನ್ಯಾಸಗಳ ಮಾಹಿತಿ ಇಲ್ಲಿದೆ.

By Praveen

ಹೋಂಡಾ ಮೋಟಾರ್‌ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ವಿಭಾಗ ತನ್ನ ಹೊಸ ಆವೃತ್ತಿಯೊಂದನ್ನು ಭಾರತೀಯ ಮಾರುಕಟ್ಟೆಗೆ ಪರಿಚಯ ಮಾಡಿದೆ. ಬಿಎಸ್-4 ಎಂಜಿನ್‌ನೊಂದಿಗೆ ಅಭಿವೃದ್ಧಿ ಹೊಂದಿರುವ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ ಬೆಲೆಯೂ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.81,113 ಗಳಿಗೆ ಲಭ್ಯವಿದೆ.

ಬಿಸ್-4 ಎಂಜಿನ್ ಹೊಂದಿರೋ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ ಬಿಡುಗಡೆ

ಕೇವಲ ಬಿಎಸ್-4 ಎಂಜಿನ್ ಅಷ್ಟೇ ಅಲ್ಲದೇ ಸುಧಾರಿತ ತಂತ್ರಜ್ಞಾನ ಹೊಂದಿರುವ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್, ಮಾರುಕಟ್ಟೆಯಲ್ಲಿನ ಪ್ರಸ್ತುತ ಬೇಡಿಕೆಗಳಿಗೆ ತಕ್ಕಂತೆ ಸಿದ್ಧಗೊಂಡಿದೆ.

ಬಿಸ್-4 ಎಂಜಿನ್ ಹೊಂದಿರೋ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ ಬಿಡುಗಡೆ

ಸದ್ಯ ಬಿಡುಗಡೆಗೊಂಡಿರುವ ಹೋಂಡಾ ಹೊಸ ವಿನ್ಯಾಸ ಬೈಕ್ ಆವೃತ್ತಿ ಸಿಬಿ ಹಾರ್ನೆಟ್ 160ಆರ್ ಅಷ್ಟೇ ಅಲ್ಲದೇ ಸಿಬಿಎಸ್ ಎಂಬ ಮತ್ತೊಂದು ಉನ್ನತ ಮಟ್ಟದ ಮಾದರಿಯನ್ನು ಪರಿಚಯ ಮಾಡಲಾಗಿದೆ.

ಬಿಸ್-4 ಎಂಜಿನ್ ಹೊಂದಿರೋ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ ಬಿಡುಗಡೆ

ಸಿಬಿ ಆವೃತ್ತಿಯ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.81,113 ಗಳಿಗೆ ಲಭ್ಯವಿದ್ದು, ಅಂತೆಯೇ ಸಿಬಿ ಸ್ಟಾಂಡರ್ಡ್ ಆವೃತ್ತಿಯ ಬೆಲೆ ರೂ.85,613 ಗಳಿಗೆ ಲಭ್ಯವಿದೆ.

ಬಿಸ್-4 ಎಂಜಿನ್ ಹೊಂದಿರೋ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ ಬಿಡುಗಡೆ

ಇನ್ನು ಸಿಬಿಎಸ್ ಆವೃತ್ತಿಯಲ್ಲೇ ಮತ್ತೇರಡು ವಿಶೇಷ ಆವೃತ್ತಿಗಳನ್ನ ಪರಿಚಯ ಮಾಡಲಾಗಿದೆ. ಸಿಬಿಎಸ್ ವಿಶೇಷ ಆವೃತ್ತಿಯ ಮೊದಲ ಶ್ರೇಣಿಯ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.82.095 ಗಳಿವೆ ಲಭ್ಯವಿದೆ. ಜೊತೆಗೆ ಉನ್ನತ ಶ್ರೇಣಿಯ ಬೆಲೆ ರೂ.86,595 ಗಳಿಗೆ ಲಭ್ಯವಿದೆ.

ಬಿಸ್-4 ಎಂಜಿನ್ ಹೊಂದಿರೋ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ ಬಿಡುಗಡೆ

ವಿನೂತನ ಆವೃತ್ತಿಯಲ್ಲಿ ಎರಡು ರೀತಿಯ ಡಿಸ್ಕ್ ವ್ಯವಸ್ಥೆ ಪರಿಚಯ ಮಾಡಲಾಗಿದೆ. ಸಿಂಗಲ್ ಡಿಸ್ಕ್ ಹಾಗೂ ಡಬಲ್ ಡಿಸ್ಕ್ ವ್ಯವಸ್ಥೆಯಿದ್ದು, AHO(ಆಟೋಮೇಟಿಕ್ ಹೆಡ್‌ಲ್ಯಾಂಪ್ ಆನ್) ಅಳವಡಿಕೆ ಕೂಡಾ ಇದೆ.

ಬಿಸ್-4 ಎಂಜಿನ್ ಹೊಂದಿರೋ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ ಬಿಡುಗಡೆ

ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ ಮಾದರಿಗಳು ಪ್ರಮುಖ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ. ಸ್ಟೈಕಿಂಗ್ ಗ್ರೀನ್, ಮಾರ್ಸ್ ಆರೇಂಜ್, ಅಥ್ಲೇಟಿಕ್ ಬ್ಲೂ ಮತ್ತು ಸ್ಪೋಟ್ಸ್ ರೆಡ್ ಬಣ್ಣಗಳಲ್ಲಿ ಲಭ್ಯವಿರಲಿವೆ.

ಬಿಸ್-4 ಎಂಜಿನ್ ಹೊಂದಿರೋ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ ಬಿಡುಗಡೆ

162.71 ಸಿಸಿ ಸಾಮರ್ಥ್ಯದ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್, ಏರ್ ಕೂಲ್ಡ್ ವ್ಯವಸ್ಥೆ ಹೊಂದಿದೆ. ಜೊತೆಗೆ 15.04ಬಿಎಚ್‌ಪಿ ಮತ್ತು 14.76ಎಂಎನ್ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಬಿಸ್-4 ಎಂಜಿನ್ ಹೊಂದಿರೋ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್ ಬಿಡುಗಡೆ

12-ಲೀಟರ್ ಫ್ಯೂಲ್ ಟ್ಯಾಂಕ್ ಹೊಂದಿರುವ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೈಕ್, ಮೈಲೇಜ್ ವಿಚಾರದಲ್ಲಿ ತುಸು ದುಬಾರಿಯಾಗಲಿದೆ. ಯಾಕೇಂದ್ರೆ ಔಟ್‌ಫುಟ್ ಪವರ್ ಕಡಿಮೆಗೊಳಿಸಲಾಗಿದ್ದು, ಗ್ರಾಹಕರಿಗೆ ಇದು ಹೊರೆಯಾಗಬಹುದು. ಉಳಿದಂತೆ ಖರೀದಿಗೆ ಇದು ಅತ್ಯುತ್ತಮ ಬೈಕ್ ಎಂದು ಹೇಳಬಹುದು.

Most Read Articles

Kannada
Read more on ಹೋಂಡಾ honda
English summary
Read in Kannada about Honda has launched the 2017 CB Hornet 160R with BS-IV compliant engine and auto headlamp on (AHO) feature.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X