ಕೈಗೆಟುಕುವ ದರದಲ್ಲಿ ಹೊಚ್ಚ ಹೊಸ ಹೋಂಡಾ ಸಿಬಿ ಶೈನ್ ರಿಲೀಸ್

ನೂತನವಾಗಿ ಬಿಡುಗಡೆಯಾಗಿರುವ ಹೋಂಡಾ ಸಿಬಿ ಶೈನ್ ಆರಂಭಿಕ ಬೆಲೆ ರೂ.55,799

Written By:

ನೂತನ ಮಾರ್ಪಾಡುಗಳೊಂದಿಗೆ ಹೋಂಡಾ ಸಿಬಿ ಶೈನ್ ಭಾರತದಲ್ಲಿ ಬಿಡುಗಡೆಗೊಂಡಿದೆ. ಆರಂಭಿಕ ಬೆಲೆ ರೂ. 55,799ಗಳಿಗೆ (ದೆಹಲಿ ಎಕ್ಸ್‌ಶೋರಂ) ಲಭ್ಯವಿದ್ದು, ಬಿಎಸ್-IV ಇಂಜಿನ್ ಮತ್ತು ಆಟೋಮೆಟಿಕ್ ಹೆಡ್‌ಲೈಟ್ ಸಿಬಿ ಶೈನ್‍ನ ಪ್ರಮುಖಾಂಶ.

ಭಾರತದಲ್ಲಿ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಠಿತ ಹೋಂಡಾ ಕಂಪನಿ ನೂತನ ಶೈನ್ ಬೈಕ್ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಹಿಂದಿನ ಆವೃತ್ತಿಗಳಿಂತಲೂ ಹೆಚ್ಚು ಪರಿಷ್ಕರಣೆ ಹೊಂದಿರುವ ಸಿಬಿ ಶೈನ್ ಬಿಡುಗಡೆಗೊಂಡಿದ್ದು,ಆರಂಭಿಕ ಬೆಲೆ ರೂ.55,799 (ದೆಹಲಿ ಎಕ್ಸ್ ಶೋರೂಂ) ಗಳಿಗೆ ಲಭ್ಯವಿದೆ. ಮಧ್ಯಮ ವರ್ಗದವರಿಗೆ ಬೈಕ್ ಖರೀದಿಸಲು ಹೆಚ್ಚು ಅನುಕೂಲರಕವಾಗಿದ್ದು, ಮೈಲೆಜ್ ವಿಚಾರದಲ್ಲೂ ಹೋಂಡಾ ಸಿಬಿ ಶೈನ್ ಭಾರೀ ನಿರೀಕ್ಷೆ ಹುಟ್ಟಿಸಿದೆ.

ಹೊಸದಾಗಿ ಬಿಡುಗಡೆಯಾಗಿರುವ ಹೋಂಡಾ ಸಿಬಿ ಶೈನ್, ಹಿಂದಿನ ಆವೃತ್ತಿಗಳಿಂತಲೂ ಹೆಚ್ಚಿನ ಆಕರ್ಷಣೆ ಹೊಂದಿದೆ. ವಿನ್ಯಾಸ ಹಾಗೂ ಬಣ್ಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು ಮಹತ್ತರ ಬದಲಾವಣೆಗಳನ್ನು ತರಲಾಗಿದೆ. ಕಪ್ಪು, ಮಪಲ್ ಬ್ರೌನ್ ಮೆಟಾಲಿಕ್, ಜನನ ಗ್ರೇ ಮೆಟಾಲಿಕ್, ರೆಬೆಲ್ ರೆಡ್, ಸ್ಪೋರ್ಟ್ ರೆಡ್, ಪರ್ಲ್ ಅಮೇಜಿಂಗ್ ವೈಟ್ ಮತ್ತು ಅಥ್ಲೆಟಿಕ್ ಬ್ಲೂ ಮೆಟಾಲಿಕ್ ಬಣ್ಣಗಳಲ್ಲಿ ಹೋಂಡಾ ಸಿಬಿ ಶೈನ್ ಮಾರುಕಟ್ಟೆ ಪ್ರವೇಶಿಸಿದೆ.

ನೂತನ ಪರಿಷ್ಕಣೆಯೊಂದಿಗೆ ಬಿಡುಗಡೆಗೊಂಡಿರುವ ಹೋಂಡಾ ಸಿಬಿ ಶೈನ್ 124.73 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿದೆ. 10.16 ಬಿಎಚ್‌ಪಿ ಹಾಗೂ 10.30ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದ್ದು,4 ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.

ವಿನೂತನ ವೈಶಿಷ್ಠತೆಗಳೊಂದಿಗೆ ಬಿಡುಗಡೆಗೊಂಡಿರುವ ಹೋಂಡಾ ಸಿಬಿ ಶೈನ್ ಟ್ಯೂಬ್ ರಹಿತ ಟೈರ್‌ಗಳನ್ನು ಹೊಂದಿದೆ. ಅಲ್ಲದೇ ಡ್ರಮ್ ಬ್ರೇಕ್ ಅಳವಡಿಸಲಾಗಿದ್ದು, ಮುಂಭಾಗದಲ್ಲಿ 240ಎಂಎಂ ಡಿಸ್ಕ್ ಬ್ರೇಕ್ ಆವೃತ್ತಿಯಲ್ಲೂ ಲಭ್ಯವಿದ್ದು, ವಾಹನ ಸವಾರರಿಗೆ ಹೆಚ್ಚಿನ ಸುರಕ್ಷತೆ ನೀಡಲಿದೆ.

ಸಿಬಿ ಶೈನ್ ಹೊಸ ಆವೃತ್ತಿಯಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ಬೈಕ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಪ್ರೋಕ್‌ಗಳನ್ನು ಜೋಡಿಸಲಾಗಿದ್ದು,10.3 ಲೀಟರ್ ಇಂಧನ ಸಾಮರ್ಥ್ಯದ ಟ್ಯಾಂಕ್ ಅಳವಡಿಸವಾಗಿದೆ. ಅಲ್ಲದೇ 157 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಇದ್ದು,ಬೈಕ್‌ನ ಔಟ್ ಲುಕ್‌ ಹೆಚ್ಚಿಸಿದೆ.

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರೋ ಹೋಂಡಾ ಸಿಬಿ ಶೈನ್ ಬೆಲೆ ಮಧ್ಯವರ್ಗದವರಿಗೆ ಕೈಗೆಟುಕುವ ದರದಲ್ಲಿದೆ.ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕ ಬೆಲೆ ರೂ.55,799 ರಿಂದ ರೂ.58,125ಕ್ಕೆ ಲಭ್ಯವಿದೆ ಎಂದು ಕಂಪನಿ ಹೇಳಿಕೊಂಡಿದೆ.

ಒಟ್ಟಾರೆ ಸ್ವರ್ಧಾತ್ಮಕ ಬೆಲೆಗಳಿಗೆ ಹೋಲಿಸಿದರೆ ಹೋಂಡಾ ಸಿಬಿ ಶೈನ್ ಬೆಲೆ ಹೆಚ್ಚು ಹೊರೆಯಾಗುವುದಿಲ್ಲ. ಆದ್ದರಿಂದ ಸಿಬಿ ಶೈನ್ ಬೈಕ್ ಖರೀದಿಗೆ ಅತ್ಯುತ್ತಮ ಎನಿಸದೆ ಇರಲಾರದು.

ವಾಹನ ಪ್ರಿಯರೇ 250ಸಿಸಿ ಸಾಮರ್ಥ್ಯದ ಬೈಕ್‌ ಖರೀದಿಯ ಉತ್ಸಾಹದಲ್ಲಿದ್ದೀರಾ? ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರೋ ಯಮಹಾ FZ25 ಬೈಕ್ ವೈಶಿಷ್ಠತೆಗಳನ್ನು ತಿಳಿಯಲು ಈ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Click to compare, buy, and renew Car Insurance online

Buy InsuranceBuy Now

Story first published: Tuesday, February 7, 2017, 18:27 [IST]
English summary
Honda CB Shine BS-IV launched in India.
Please Wait while comments are loading...

Latest Photos