ಬಂದೆ ಬಿಡ್ತು ಹೊಸ ಸಿಬಿ ಶೈನ್ ಎಸ್ ಪಿ; ಬೈಕಿನ ವಿವರ ಇಲ್ಲಿದೆ

ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು ಬಿಎಸ್-IV ಕಂಪ್ಲೇಂಟ್ ಇಂಜಿನ್ ಹೊಂದಿರುವ ತನ್ನ ಹೊಸ ಸಿಬಿ ಶೈನ್ ಎಸ್ ಪಿ ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸಿದೆ.

Written By:

ಈ ದ್ವಿಚಕ್ರ ವಾಹನವು ಆಟೋ ಹೆಡ್ ಲ್ಯಾಂಪ್ ಆನ್ (ಎಎಚ್ಓ) ತಂತ್ರಜ್ಞಾನ ಹೊಂದಿದ್ದು, ಗಂಟೆಗೆ ಸರಾಸರಿ 93 ಕಿಲೋಮೀಟರ್ ಕ್ರಮಿಸಬಹುದಾದ ಸಾಮರ್ಥ್ಯ ಹೊಂದಿರುವ ಬೈಕ್ ಮೊದಲಿಗಿಂತಲೂ ಅಂದಗೊಂಡು ನಿಮ್ಮ ಮನೆ ಸೇರಲಿದೆ.

ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್ (ಸಿಬಿಎಸ್) ತಂತ್ರಜ್ಞಾನದೊಂದಿಗೆ ಬಿಡುಗಡೆಗೊಂಡಿರುವ ಬೈಕ್ ನಲ್ಲಿ ಹೊಸ ಲೊಯರ್ ರೋಲಿಂಗ್ ನಿರೋಧ ಶಕ್ತಿ ಹೊಂದಿರುವ ಟೈಯರ್ ಬಳಸಲಾಗಿದೆ. ಮಾನ್ಯುಯಲ್ ವೆರಿಯೆಂಟ್ ಬೆಲೆ 63,173 ಮತ್ತು ಡೀಲಕ್ಸ್ ಬೈಕ್ ನ ಬೆಲೆ 65,174 (ಬಜಾಜ್ ಎಕ್ಸ್ ಶೋ ರೂಂ ದೆಹಲಿ) ನಿಗದಿಪಡಿಸಲಾಗಿದೆ.

ಇಂಜಿನ್ ವಿಭಾಗದಲ್ಲಿ ಹೊಸತನ್ನು ತರುವ ನಿಟ್ಟಿನಲ್ಲಿ ಧಾಪುಗಾಲು ಇಟ್ಟಿರುವ ಹೋಂಡಾ, ಹೊಸ ಸಿಬಿ ಶೈನ್ ಎಸ್ ಪಿ, ದ್ವಿಚಕ್ರ ವಾಹನದಲ್ಲಿ ಬಿಎಸ್-IV ಇಂಜಿನ್ ಪರಿಚಯ ಮಾಡಿದೆ.

ಈ ದ್ವಿಚಕ್ರ ವಾಹನವು ಬಿಎಸ್-IV ಮಾಲಿನ್ಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ಇಂಜಿನ್ ಹೊಂದಿದೆ. 5-ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ ಶ್ರೇಷ್ಠ ಬೈಕ್ ಜೊತೆಗೆ ಟ್ಯೂಬ್ ರಹಿತ ಟೈರ್‌ಗಳನ್ನು ಪಡೆದುಕೊಂಡಿದೆ.

ನೂತನ ಮಾರ್ಪಾಡುಗಳೊಂದಿಗೆ ಹೋಂಡಾ ಸಿಬಿ ಶೈನ್ ಭಾರತದಲ್ಲಿ ಬಿಡುಗಡೆಗೊಂಡಿದ್ದು, ಜನರು ಹೆಚ್ಚು ಒಲವು ತೋರಿಸಿದರೆ, ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾದ ಜಪಾನ್ ಮೂಲದ ಹೋಂಡಾಗೆ ಇನ್ನಷ್ಟು ಹುಮ್ಮಸ್ಸು ತುಂಬುವುದಂತೂ ಗ್ಯಾರಂಟಿ.

2017 ಸಿಬಿ ಶೈನ್ ಎಸ್.ಪಿ ಸಿಂಗಲ್ ಸಿಲಿಂಡರ್ ಇಂಜಿನ್ ಹೊಂದಿರುವ 124.73 ಸಿಸಿ ಬೈಕ್ ಆಗಿದ್ದು, 10.30 ಎನ್ಎಂ ತಿರುಗುಬಲದಲ್ಲಿ 10.16 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಈ ಬೈಕ್ ಡಿಜಿಟಲ್ ಸಾಧನ ಕ್ಲಸ್ಟರ್ ಮತ್ತು ಅನಲಾಗ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಬೈಕ್ ಎಂಬುದು ನಿಮ್ಮ ಗಮನದಲ್ಲಿ ಇರಲಿ ಓದುಗರೇ.

ಹೊಸ ಸಿಬಿ ಶೈನ್ ಎಸ್ ಪಿ ಹೆಚ್ಚು ಗ್ರಾಫಿಕ್ಸ್ ಹೊಂದಿದ ಹೊಸ ಅವತಾರದಲ್ಲಿ ಬಂದಿದೆ. ಕಪ್ಪು, ಅಥ್ಲೆಟಿಕ್ ಬ್ಲೂ ಮೆಟಾಲಿಕ್, ಪರ್ಲ್ ಅಮೇಜಿಂಗ್ ವೈಟ್, ಇಂಪೀರಿಯಲ್ ರೆಡ್ ಮೆಟಾಲಿಕ್ , ಪರ್ಲ್ ವೈಟ್ ಅಮೇಜಿಂಗ್, ಪರ್ಲ್ ಸೈರಿನ್ ನೀಲಿ ಮತ್ತು ಗೀನಿ ಮೆಟಾಲಿಕ್ ಎಂಬ ಐದು ಹೊಸ ಬಣ್ಣಗಳಲ್ಲಿ ನಿಮಗೆ ಬೇಕಾದ ಬಣ್ಣ ಆರಿಸಿಕೊಳ್ಳಬಹುದಾಗಿದೆ.

ಹಿಂದಿನ ಆವೃತ್ತಿಗಳಿಂತಲೂ ಹೆಚ್ಚು ಪರಿಷ್ಕರಣೆ ಹೊಂದಿರುವ ಸಿಬಿ ಶೈನ್ ಎಸ್ ಪಿ, ಗಂಟೆಗೆ ಸರಾಸರಿ 93 ಕಿಲೋಮೀಟರ್ ಕ್ರಮಿಸಬಹುದಾದ ಸಾಮರ್ಥ್ಯ ಹೊಂದಿರುವ ಬೈಕ್ ಇದಾಗಿದ್ದು, ಮೈಲೆಜ್ ವಿಚಾರದಲ್ಲೂ ಭಾರೀ ನಿರೀಕ್ಷೆ ಹುಟ್ಟಿಸಿದೆ.

ಎಪ್ರಿಲಿಯಾ ಎಸ್ಆರ್ 150 ರೇಸ್ ಸ್ಕೂಟರ್‌ನ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Click to compare, buy, and renew Car Insurance online

Buy InsuranceBuy Now

Read more on ಹೋಂಡಾ honda
Story first published: Friday, February 10, 2017, 14:09 [IST]
English summary
Honda Motorcycle and Scooter India Pvt Ltd has launched the 2017 CB Shine SP with BS-IV compliant engine. Prices start at Rs 60,674 ex-showroom (Delhi).
Please Wait while comments are loading...

Latest Photos