ಕೇವಲ ಮೂರೇ ವಾರಗಳಲ್ಲಿ 1,000 ಹೋಂಡಾ WR-V ಕಾರುಗಳು ಬುಕ್ ಆದ್ವು !!

Written By:

ಮೂರು ವಾರಗಳ ಹಿಂದೆಯಷ್ಟೇ ಬುಕ್ ಮಾಡಲು ಅನುವು ಮಾಡಿಕೊಟ್ಟಿದ್ದ ಹೋಂಡಾ ಡಬ್ಲ್ಯೂಆರ್-ವಿ ಕಾರು 1,000 ಬುಕ್ ಆಗುವ ಮೂಲಕ ಹೊಸ ಧಾಖಲೆ ನಿರ್ಮಿಸಿದೆ.

ಕೇವಲ ಎರಡು ದಿನಗಳ ಹಿಂದೆ ಬಿಡುಗಡೆಗೊಂಡು ಅತ್ಯಮೋಘವಾಗಿ ಬಿಸಿ ಕಜ್ಜಾಯದಂತೆ ಮಾರಾಟವಾಗುತ್ತಿರುವ ಹೋಂಡಾ ಡಬ್ಲ್ಯೂಆರ್-ವಿ ಕಾರಿನ 1,000 ಬುಕಿಂಗ್ ಪೂರ್ಣಗೊಳಿಸುವ ಮೂಲಕ ಯಶಸ್ವಿ ಕಾರುಗಳ ಪಟ್ಟಿಗೆ ಸೇರ್ಪಡೆಗೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಅದ್ಭುತ ಹೊರ ವಿನ್ಯಾಸ ಹೊಂದಿರುವ ಹೋಂಡಾ ಡಬ್ಲ್ಯೂಆರ್-ವಿ ಮಾದರಿಯ ಕಾರು, ಮಾರುತಿ ಸುಜುಕಿ ಕಂಪನಿಯ ಬ್ರೀಝ ಮತ್ತು ಫೋರ್ಡ್ ಕಂಪನಿಯ ಇಕೊಸ್ಪೋರ್ಟ್ ಕಾರಿನೊಂದಿಗೆ ಸ್ಪರ್ದಿಸಲಿದೆ.

ಕೇವಲ ಮೂರು ವಾರಗಳಲ್ಲಿ ಹೋಂಡಾ ಕಂಪನಿಯ ಈ ಕಾರು ಒಂದು ಸಾವಿರ ಬುಕ್ ಆಗುವ ಮೂಲಕ ಕಂಪನಿಗೆ ಹೆಚ್ಚಿನ ಮಟ್ಟದ ಬಲ ಬಂದಂತಾಗಿದೆ.

ಹೊಚ್ಚ ಹೊಸ ಹೋಂಡಾ ಡಬ್ಲ್ಯೂಆರ್-ವಿ ಕಾರು ಡಬ್ಲ್ಯೂಆರ್-ವಿ ಕಾರು, ಎಸ್, ಎಸ್(ಡೀಸೆಲ್), ವಿಎಕ್ಸ್ , ವಿ ಎಕ್ಸ್(ಡೀಸೆಲ್) ಎಂಬ ನಾಲ್ಕು ವಿವಿಧ ಆವೃತಿಗಳಲ್ಲಿ ಬಿಡುಗೆಡೆಗೊಂಡಿದೆ.

ಹೋಂಡಾ ಕಂಪನಿಯ ಜಾಝಿ ಕಾರು ಮತ್ತು ಸಿಟಿ ಕಾರಿನ ಮಾದರಿಯಲ್ಲಿಯೇ ಈ ಡಬ್ಲ್ಯೂಆರ್-ವಿ ಹೊಂದಿರುವ ಕಾರು ಹೊರಬಂದಿದ್ದು, ಹೆಚ್ಚಿನ ಮಟ್ಟದ ಕ್ರೀಡಾ ಬಳಕೆಯ ವಾಹನದ ಅಂಶಗಳನ್ನು ಒಳಗೊಂಡಿದೆ. ಈ ಎರಡು ಕಾರುಗಳಿಗೆ ಹೋಲಿಸಿದರೆ ಹೋಂಡಾ ಡಬ್ಲ್ಯೂಆರ್-ವಿ ಕಾರು ಹೆಚ್ಚು ಎತ್ತರವಾಗಿದ್ದು, ಅಗಲವಾದ ಕಾರು ಎನ್ನಿಸಿಕೊಂಡಿದೆ.

ಒಂದು ಸಾವಿರ ಬುಕಿಂಗ್ ಮೈಲಿಗಳನ್ನು ತಲುಪಿರುವ ಹೋಂಡಾ ಡಬ್ಲ್ಯೂಆರ್-ವಿ ಕಾರು ಎಲ್‌ಇಡಿ ಡಿಆರ್‌ಎಸ್ ಹೆಡ್‌ಲ್ಯಾಂಪ್ ವ್ಯವಸ್ಥೆ ಹೊಂದಿದ್ದು, 16-ಇಂಚಿನ ಅಲಾಯ್ ಚಕ್ರಗಳನ್ನು ಪಡೆದುಕೊಂಡಿದೆ.

ಇನ್ನು ಒಳವಿನ್ಯಾಸ ಬಗ್ಗೆ ಹೇಳುವುದಾದರೇ 7-ಇಂಚಿನ್ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್‌ಪ್ಲೈ ಮತ್ತು ನೆವಿಗೆಶನ್ ಹೊಂದಿದೆ. ವೈ-ಫೈ, 1.5 ಜಿಬಿ ಇಂಟರನಲ್ ಮೆಮೊರಿ, ಬ್ಲೂಟೂತ್ ಕನೆಕ್ಟಿವಿಟಿ, ಒಂದು HDMI ಪೋರ್ಟ್, ಎರಡು USB ಸ್ಲಾಟ್ ಮತ್ತು ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ವ್ಯವಸ್ಥೆಗಳಿವೆ.

ಹೋಂಡಾ ಡಬ್ಲ್ಯೂಆರ್-ವಿ ಕಾರಿನ ಬೆಲೆ (ಎಕ್ಸ್ ಷೋ ರೂಂ ದೆಹಲಿ)

ಎಸ್ ಆವೃತಿ - ರೂ.7.75 ಲಕ್ಷ
ಎಸ್ ಡೀಸೆಲ್ - ರೂ.8.79 ಲಕ್ಷ
ವಿಎಕ್ಸ್ - ರೂ.8.99 ಲಕ್ಷ
ವಿಎಕ್ಸ್‌ ಡೀಸೆಲ್ - ರೂ. 9.99 ಲಕ್ಷ

 

ಹೋಂಡಾ ಕಂಪನಿಯ ಹೋಂಡಾ ಡಬ್ಲ್ಯೂಆರ್-ವಿ ಕಾರು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಪ್ರತಿ ಲೀಟರ್‌ಗೆ 17.5 ಕಿಲೋ ಮೀಟರ್ ಮೈಲೇಜ್ ನೀಡಲಿದೆ.

ಇನ್ನು, 1.5-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಂಡಿರುವ ಹೋಂಡಾ ಡಬ್ಲ್ಯೂಆರ್-ವಿ ಕಾರು ಪ್ರತಿಲೀಟರ್‌ಗೆ 25.5 ಕಿ.ಲೋ ಮೈಲೇಜ್ ನೀಡಲಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ...

ದುಬೈ ಪೊಲೀಸರ ಈ ಪ್ಲ್ಯಾನ್ ಇಂಡಿಯಾದಲ್ಲೂ ವರ್ಕೌಟ್ ಆಗುತ್ತಾ..?

 

ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಚಿತ್ರಗಳು ನಿಮಗಾಗಿ....

ಟಾಟಾ ಟಿಗೋರ್

ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ ರಾಡ್ 750

ಬಲೆನೊ ಆರ್ ಎಸ್

Click to compare, buy, and renew Car Insurance online

Buy InsuranceBuy Now

Read more on ಹೋಂಡಾ honda
English summary
Honda WR-V will compete with Maruti Suzuki Brezza and Ford EcoSport and is the most fuel-efficient crossover in India.
Please Wait while comments are loading...

Latest Photos