ದ್ವಿಚಕ್ರ ವಾಹನ ಮಾರಾಟದಲ್ಲಿ ಚೀನಾ ದೇಶವನ್ನು ಹಿಂದಿಕ್ಕಿದ ಭಾರತ

Written By:

ಭಾರತ ದೇಶವು, ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇ ರೀತಿಯ ಛಾಪು ಮೂಡಿಸಿದ್ದು, ದ್ವಿಚಕ್ರ ವಾಹನ ಮಾರಾಟ ಕ್ಷೇತ್ರದಲ್ಲಿ ಕೂಡ ಹೊಸ ಮೈಲಿಗಳನ್ನು ತಲುಪಿದೆ.

ಇತ್ತೀಚಿನ ವರದಿ ಪ್ರಕಾರ ಭಾರತ ದೇಶವು 2016-17 ಸಾಲಿನಲ್ಲಿ ಸರಿ ಸುಮಾರು 17 ದಶಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದು, ಚೀನಾ ದೇಶವನ್ನು ಹಿಂದಿಕ್ಕುವ ಮೂಲಕ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಪ್ರತಿಷ್ಠಿತ ವಾಹನ ವರದಿ ತಯಾರಿಸುವ ಸಂಸ್ಥೆಯಾದ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಎಸ್ಐಎಎಂ)ಈ ವರದಿ ನೀಡಿದೆ.

ಸದ್ಯ 16.8 ಮಿಲಿಯನ್ ದ್ವಿಚಕ್ರ ವಾಹನಗಳು ಮಾರಾಟಗೊಳ್ಳುವ ಮೂಲಕ ಚೀನಾ ದೇಶ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದು, ವಿಶ್ವದ ನಂ 1 ಸ್ಥಾನದಿಂದ ಕೆಳಗಿಳಿದಿದೆ.

ಭಾರತದಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಪ್ರಸಕ್ತ ಸಾಲಿನಲ್ಲಿ 17 ಮಿಲಿಯನ್ ಇದ್ದು, ಹೆಚ್ಚು ಕಡಿಮೆ 5 ಮಿಲಿಯನ್ ವಾಹನಗಳನ್ನು ಹೆಚ್ಚಿಗೆ ಮಾರಾಟ ಮಾಡುವ ಮೂಲಕ ಭಾರತ ಮೊದಲ ಸ್ಥಾನಕ್ಕೆ ತಲುಪಿದೆ.

ಭಾರತದಲ್ಲಿ ಮಾರಾಟವಾದ ಸುಮಾರು 17 ಮಿಲಿಯನ್ ದ್ವಿಚಕ್ರ ವಾಹನಗಳಲ್ಲಿ 100 - 100 ಸಿಸಿ ವಾಹನಗಳ ಸಂಖ್ಯೆ 6.5 ಮಿಲಿಯನ್ ಎಂದು ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (ಎಸ್ಐಎಎಂ) ವರದಿ ನೀಡಿದೆ.

ಅನೇಕ ನಗರ ಪ್ರದೇಶಗಳಲ್ಲಿ ಮೋಟಾರ್ಸೈಕಲ್ ನಿಷೇಧದ ಕಾರಣ ಇತ್ತೀಚಿನ ವರ್ಷಗಳಲ್ಲಿ ಚೀನಾದ ದೇಶೀಯ ಮೋಟಾರು ಸೈಕಲ್ ಮಾರುಕಟ್ಟೆಯು ಕ್ಷೀಣಿಸುತ್ತಿದೆ.

ಚೀನಾ ದೇಶದ ಕೆಲವು ಪ್ರಮುಖ ನಗರಗಳಲ್ಲಿ ಮೋಟಾರ್ ಸೈಕಲ್ ನಿಷೇಧ ಮಾಡಿರುವ ಕಾರಣ ದ್ವಿಚಕ್ರ ವಾಹನ ಮಾರುಕಟ್ಟೆ ಕ್ಷೀಣಿಸಿದೆ ಎನ್ನಲಾಗಿದೆ.

2010ರಲ್ಲಿ ದ್ವಿಚಕ್ರ ವಾಹನ ಮಾರಾಟ 27 ಮಿಲಿಯನ್ ತಲುಪಿತ್ತು, ತದನಂತರ ನೆಡೆದ ಬೆಳವಣಿಗೆಗಳಲ್ಲಿ ದ್ವಿಚಕ್ರ ವಾಹನ ಮಾರಾಟ ಕ್ಷೀಣಿಸುತ್ತಾ ಬಂದಿದೆ.

ಕಳೆದ 4 ವರ್ಷಗಳಿಂದ ದ್ವಿಚಕ್ರ ವಾಹನ ಮಾರಾಟ ಗಣನೀಯವಾಗಿ ಇಳಿಕೆ ಕಂಡಿದ್ದು, ಇದರಿಂದಾಗಿ ದ್ವಿಚಕ್ರ ತಯಾರಕ ಸಂಸ್ಥೆಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇದಕ್ಕೆ ತದ್ವಿರುದ್ಧವೆಂಬಂತೆ ಕಳೆದ ನಾಲ್ಕು ವರ್ಷಗಳಿಂದ ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆ ಹೆಚ್ಚಾಗುತ್ತಲೇ ಇದೆ ಎಂಬುದನ್ನು ನಾವಿಲ್ಲಿ ಗಮನಿಸಬಹುದಾಗಿದೆ.

2011-12ರಲ್ಲಿ ಕೇವಲ 13 ದಶಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದ ಭಾರತ, 2014-15ರಲ್ಲಿ 16 ದಶಲಕ್ಷಕ್ಕೆ ಏರಿಕೆ ಕಂಡಿತ್ತು.

English summary
Read in Kannada about India becomes world's largest two wheeler market. Know more about Indian two wheeler market, numbers and much more
Please Wait while comments are loading...

Latest Photos