ಫಿನಿಕ್ಸ್ ಮಾರ್ಕೆಟ್ ಸಿಟಿನಲ್ಲಿ ಜಗಮಗಿಸಿದ ಸೂಪರ್ ಬೈಕ್‌ಗಳ ಉತ್ಸವ..!!

Written By:

ಬೆಂಗಳೂರಿನ ಪ್ರಮುಖ ಶಾಪಿಂಗ್ ಮಾಲ್‌ಗಳಲ್ಲಿ ಒಂದಾಗಿರುವ ಫಿನಿಕ್ಸ್ ಮಾರ್ಕೆಟ್ ಸಿಟಿನಲ್ಲಿ ಇತ್ತೀಚೆಗೆ ಸೂಪರ್ ಬೈಕ್‌ಗಳ ಅದ್ಭುತ ಪ್ರದರ್ಶನ ನಡೆಯಿತು.

ಫಿನಿಕ್ಸ್ ಮಾರ್ಕೆಟ್ ಸಿಟಿ ಆವರಣದಲ್ಲಿ ನಡೆದ ಇಂಡಿಯನ್ ಸೂಪರ್ ಬೈಕ್‌ಗಳ ಉತ್ಸವದಲ್ಲಿ ಸುಮಾರು 500ಕ್ಕೂ ಹೆಚ್ಚು ಬೈಕ್‌ ಮಾದರಿಗಳು ಭಾಗಿಯಾಗಿದ್ದವು. 

ಸೂಪರ್ ಬೈಕ್‌ಗಳ ಮಾಲೀಕನ್ನು ಪ್ರೋತ್ಸಾಹಿಸುವ ಮತ್ತು ಮೋಟಾರ್ ರೇಸಿಂಗ್ ಅಭಿಮಾನಿಗಳನ್ನು ಹುರುದುಂಬಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಐಷಾರಾಮಿ ಬೈಕ್‌ಗಳಾದ ಹಾರ್ಲೆ ಡೇವಿಡ್‌ಸನ್ಸ್, ಟ್ರಯಂಫ್ ಬೊನೊವಿಲ್ಲೆ, ಇಂಡಿಯನ್ ಬೈಕ್, ಹೋಂಡಾ ಮತ್ತು ಬಿಎಂಡಬ್ಲ್ಯು ಸೇರಿದಂತೆ ಪ್ರಮುಖ ಮಾದರಿಗಳು ಭಾಗಿಯಾಗಿದ್ದವು.

2 ದಿನಗಳ ಕಾಲ ನಡೆದ ಬೈಕ್ ಉತ್ಸವದಲ್ಲಿ ಸುಮಾರು 500ಕ್ಕೂ ವಿವಿಧ ಮಾದರಿಗಳು ಭಾಗಿದಲ್ಲದೇ, ಮೋಟಾರ್ ರೇಸಿಂಗ್ ಬಗೆಗಿನ ಆಸಕ್ತಿಗೆ ಹೊಸ ಪರಿಕಲ್ಪನೆ ನೀಡುವಂತಿತ್ತು.

ಇದರ ಜೊತೆಗೆ ಉತ್ಸವದಲ್ಲಿ ಭಾಗಿಯಾಗಿದ್ದ ಹಲವು ಮೋಟಾರ್ ರೇಸಿಂಗ್ ಸ್ಪರ್ಧಿಗಳು, ರೇಸಿಂಗ್ ಬಗೆಗೆ ಆಸಕ್ತಿ ಹೊಂದಿರುವ ಯುವ ಸಮುದಾಯೊಂದಿಗೆ ಮಹತ್ತರ ವಿಚಾರಗಳನ್ನು ಚರ್ಚೆ ಕೂಡಾ ನಡೆಸಿದ್ದು, ವಿಶೇಷವಾಗಿತ್ತು.

ಇನ್ನು ಸೂಪರ್ ಬೈಕ್ ಉತ್ಸವದಲ್ಲಿ ಭಾಗಿಯಾಗಿದ್ದ ವಿವಿಧ ರೀತಿಯ ಬೈಕ್ ಮಾದರಿಗಳು  ನೋಡಲು ವಿವಿಧ ಕಡೆಗಳಿಂದ ಸಾವಿರಾರು ಜನ ಭಾಗಿಯಾಗಿದ್ದರು.

2012ರಿಂದಲೇ ಇಂತದೊಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿರುವ ಫಿನಿಕ್ಸ್ ಮಾರ್ಕೆಟ್ ಸಿಟಿ ಸಂಸ್ಥೆಯು, ಸೂಪರ್ ಬೈಕ್ ಬಗೆಗಿನ ಆಸಕ್ತಿಗೆ ಹೊಸ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ.

English summary
India Superbike Festival Concludes At Phoenix Marketcity in Bangalore.
Please Wait while comments are loading...

Latest Photos