ಖರೀದಿಗೆ ಸಿದ್ಧ ಇಂಡಿಯನ್ ಸ್ಕೌಟ್ ಎಫ್‌ಟಿಆರ್ 750- ಇದರ ಬೆಲೆ ಎಷ್ಟು ಗೊತ್ತಾ?

Written By:

ಪೊಲರಿಸ್ ಅಧೀನದಲ್ಲಿರುವ ಅಮೆರಿಕಾದ ಐಕಾನಿಕ್ ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆ ಇಂಡಿಯನ್, ತನ್ನ ಬಹುನೀರಿಕ್ಷಿತ ಇಂಡಿಯನ್ ಸ್ಕೌಟ್ ಎಫ್‌ಟಿಆರ್ 750 ರೇಸ್ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಪ್ರಸ್ತುತ ಅಮೆರಿಕನ್ ಫ್ಲ್ಯಾಟ್ ಟ್ರ್ಯಾಕ್ ಸರಣಿಗಳನ್ನು ಭಾರತದಲ್ಲೇ ಸಿದ್ಧಗೊಳಿಸುತ್ತಿರುವ "ವ್ರೆಕ್ಕಿಂಗ್ ಕ್ರೂ" ಎಂಬ ತಂಡ ಈ ವಿನೂತನ ಮಾದರಿಯನ್ನು ಸಿದ್ಧಪಡಿಸಿದ್ದು, ಅತ್ಯಾಕರ್ಷಕ ಲುಕ್ ಹೊಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಬರೋಬ್ಬರಿ 33.4 ಲಕ್ಷ ರೂಪಾಯಿ ಎಂಬುದು ದೃಡವಾಗಿವೆ.

ಉನ್ನತ ಮಟ್ಟದ ಕಾರ್ಯಕ್ಷಮತೆಗಾಗಿಯೇ ಸಿದ್ಧಗೊಂಡಿರುವ ಇಂಡಿಯನ್ ಸ್ಕೌಟ್ ಎಫ್‌ಟಿಆರ್ 750 ಬೈಕ್, 750ಸಿಸಿ ವಿ-ಟ್ವಿನ್ ಎಂಜಿನ್ ಹೊಂದಿದೆ. ಜೊತೆಗೆ ಅಲ್ಟ್ರಾ ಲೈಟ್ ಸ್ಟೀಲ್ ಫ್ರೇಮ್ ಹೊಂದಿರುವ ಈ ಬೈಕ್, ಇಂಗಾಲದ ಫೈಬರ್ ಕವಚವನ್ನು ಹೊಂದಿದೆ.

ರೇಸ್ ಮಾಡೆಲ್‌ಗಳಲ್ಲೇ ಅತಿಹೆಚ್ಚು ವಿನೂತನ ತಂತ್ರಜ್ಞಾನ ಹೊಂದಿರುವ ಇಂಡಿಯನ್ ಸ್ಕೌಟ್ ಎಫ್‌ಟಿಆರ್ 750 ಬೈಕ್, ಭಾರತೀಯ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಅಭಿವೃದ್ಧಿಗೊಳಿಸಲಾಗಿದೆ.

ಹತ್ತಾರು ವಿಶೇಷತೆಗಳೊಂದಿಗೆ ಸಿದ್ಧಗೊಂಡಿರುವ ಇಂಡಿಯನ್ ಸ್ಕೌಟ್ ಎಫ್‌ಟಿಆರ್ 750 ಬೈಕ್, ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಬೇಡಿಕೆ ಸೃಷ್ಠಿಸುತ್ತಿದೆ. ಈ ಹಿನ್ನೆಲೆ ಭಾರೀ ಉತ್ಸಾಹದಲ್ಲಿ ಇಂಡಿಯನ್ ಸಂಸ್ಥೆ, ಗ್ರಾಹಕರ ಪ್ರತಿಕ್ರಿಯೆ ಎದುರು ನೋಡುತ್ತಿದೆ.

ಈ ಮೇಲೆ ಹೇಳಿದ ಹಾಗೆ ಇದೊಂದು ರೇಸ್ ಮಾಡೆಲ್‌ಗಳಲ್ಲೇ ಅತಿ ವಿಶೇಷ ಮಾದರಿಯಾಗಿದ್ದು, ಮುಂಬರುವ ಬೈಕ್ ರೇಸ್‌ಗಳಲ್ಲಿ ಇಂಡಿಯನ್ ಸ್ಕೌಟ್ ಎಫ್‌ಟಿಆರ್ 750 ಬೈಕ್ ಸದ್ದು ಮಾಡುವ ನೀರಿಕ್ಷೆಯಿದೆ.

ಇನ್ನೊಂದು ಪ್ರಮುಖ ವಿಚಾರವೇನೆಂದರೆ 2016ರಲ್ಲೇ ಇಂಡಿಯನ್ ಸ್ಕೌಟ್ ಎಫ್‌ಟಿಆರ್ 750 ಬೈಕಿನ ವಿನೂತನ ಮಾದರಿ ಸಿದ್ಧಗೊಂಡಿತ್ತು. ಆದ್ರೆ ಎಎಮ್ಎ ಪ್ಲ್ಯಾಟ್ ಟ್ರ್ಯಾಕಿಂಗ್ ರೇಸಿಂಗ್ ದಂತಕಥೆ ಜೋಕೊಪ್ ಸಾಂಟಾ ರೊಸಾ ಮಾಡಿದ ಕೆಲವು ಬದಲಾವಣೆ ತದ ಪರಿಣಾಮ, ಇದೀಗ ವಿನೂತ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಸದ್ಯದಲ್ಲೇ ಈ ಋತುವಿನ ಭಾರತೀಯ ಮೋಟಾರ್ ಸೈಕಲ್ ರೇಸಿಂಗ್ ನಡೆಯಲ್ಲಿದ್ದು, ಅದರಲ್ಲಿ ಇಂಡಿಯನ್ ಸ್ಕೌಟ್ ಎಫ್‌ಟಿಆರ್ 750 ಬೈಕ್ ಸದ್ದು ಮಾಡುವ ನೀರಿಕ್ಷೆಯಿದೆ. ಜೊತೆಗೆ ಪ್ರಶಸ್ತಿ ತವಕದಲ್ಲಿದ್ದು, ಪ್ರಸುತ್ತ ಮಾದರಿಗಳಿಗೆ ತೀವ್ರ ಸ್ಪರ್ಧೆ ಒಡ್ಡಲಿದೆ.

ಇಂಡಿಯನ್ ಸ್ಕೌಟ್ ಎಫ್‌ಟಿಆರ್ 750 ರೇಸ್ ಬೈಕ್ ಚಿತ್ರಗಳ ವೀಕ್ಷಣೆಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
The Scout FTR750 is an ultimate combination of advanced performance technology and design elements from Indian's legendary racing models of the past.
Please Wait while comments are loading...

Latest Photos