ಫಾರ್ಮುಲಾ 1 ಮೊದಲ ಚಾಂಪಿ‌ಯನ್ ಇನ್ನು ನೆನಪು ಮಾತ್ರ..!!

ವಿಶ್ವದ ಮೊದಲ ಫಾರ್ಮುಲಾ 1 ಚಾಂಪಿಯನ್ ಜಾನ್ ಸುರ್ಟ್ಸ್ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದ ಜಾನ್ ಅವರು, ತಮ್ಮ 83ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

Written By:

1960ರ ದಶಕದಲ್ಲಿ ಫಾರ್ಮುಲಾ 1 ಮತ್ತು ಮೋಟಾರ್ ಸೈಕಲ್ ರೇಸ್ ಎರಡು ವಿಭಾಗದಲ್ಲೂ ಹೆಸರು ಮಾಡಿದ್ದ ಜಾನ್ ಸುರ್ಟ್ಸ್, ಹತ್ತು ಹಲವು ಸಾಧನೆಗಳಿಂದಾಗಿ ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದಿದ್ದರು. ಆದ್ರೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಜಾನ್ ಲಂಡನ್‌ನಲ್ಲಿ ನಿಧನರಾಗಿದ್ದಾರೆ.

1964ರಲ್ಲಿ ಮೊದಲ ಬಾರಿಗೆ ಫಾರ್ಮುಲಾ 1 ಮತ್ತು ಮೋಟಾರ್ ಸೈಕಲ್ ಗ್ರ್ಯಾಂಡ್ ಫ್ರಿಕ್ಸ್‌ನಲ್ಲಿ ಚಾಂಪಿಯನ್‌ಶಿಪ್ ಪಡೆದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆ ಜಾನ್ ಸುರ್ಟ್ಸ್ ಅವರಿಗೆ ಸಲ್ಲುತ್ತದೆ.

ಇದಲ್ಲದೇ 1956, 1958, 1959 ಮತ್ತು 1960 ರಲ್ಲಿ ನಾಲ್ಕು ಬಾರಿ ಚಾಂಪಿಯನ್‌ಶಿಪ್ ಆಗಿ ಹೊರಹೊಮ್ಮಿದ್ದ ಜಾನ್, ಆಗಿನ ಕಾಲದಲ್ಲೇ 500ಸಿಸಿ ಸಾಮರ್ಥ್ಯದ ಮೋಟಾರ್ ಸೈಕಲ್ ರೇಸ್‌ನಲ್ಲೂ ದಾಖಲೆ ಮಾಡಿದ್ದರು.

ಆದ್ರೆ ಕಳೆದ ನಾಲ್ಕು-ಐದು ವರ್ಷಗಳಿಂದ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ ಜಾನ್, ನಿನ್ನೆಯಷ್ಟೇ ಲಂಡನ್‌ನಲ್ಲಿರುವ ಸೇಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಿಧರಾಗಿದ್ದಾರೆ. ಈ ಬಗ್ಗೆ ಜಾನ್ ಸುರ್ಟ್ಸ್ ಕುಟುಂಬಸ್ಥರು ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಜಾನ್ ನಿಧನಕ್ಕೆ ಕಂಬಿನಿ ಮಿಡಿದಿದ್ದಾರೆ.

ಮೋಟಾರ್ ರೇಸ್ ದಂತಕಥೆ ಜಾನ್ ಸುರ್ಟ್ಸ್ ಸಾವಿಗೆ ಜಗತ್ತಿನ ಹಲವು ಗಣ್ಯರು ಸಂತಾಪ ಸೂಚಿಸಿದ್ದು, ಅವರ ಸಾಧನೆ ಲಕ್ಷಾಂತರ ಕ್ರಿಡಾಭಿಮಾನಿಗಳಿಗೆ ಸ್ಪೂರ್ತಿ ತುಂಬಿದ್ದು ಸುಳ್ಳಲ್ಲ.

1970ರ ದಶಕದಲ್ಲಿ ತಮ್ಮದೇ F1 ತಂಡ ರಚಿಸಿದ್ದ ಜಾನ್ ಸುರ್ಟ್ಸ್, ಬ್ರಿಟಿಷ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದರು. ಆದ್ರೆ 2009 ರಲ್ಲಿ ಅವರ ಮಗ ಹೆನ್ರಿ F1 ತರಬೇತಿ ಸಂದರ್ಭದಲ್ಲಿ ದುರಂತವಾಗಿ ಸಾವನ್ನಪ್ಪಿದ್ದು, ಜಾನ್ ಅವರಿಗೆ ಭಾರೀ ಅಘಾತ ಉಂಟು ಮಾಡಿತ್ತು.

ಮಗನ ಸಾವಿನ ಸುದ್ಧಿಯಿಂದ ಆಘಾತಕ್ಕೆ ಒಳಗಾಗಿದ್ದ ಜಾನ್ ಸುರ್ಟ್ಸ್, ತದನಂತರ ದಿನಗಳಲ್ಲಿ ಹೆನ್ರಿ ಸುರ್ಟ್ಸ್ ಫೌಂಡೇಶನ್ ಹುಟ್ಟುಹಾಕಿದ್ದರು. ಈ ಮೂಲಕ ಬಡಜನರಿಗೆ ಸಹಾಯ ಮಾಡುತ್ತಿದ್ದ ಜಾನ್, ಮಗನ ಅಗಲಿಕೆಯ ನೋವನ್ನು ಮರೆಯಲು ಯತ್ನಿಸಿದ್ದರು.

2009 ಮತ್ತು 2016ರಲ್ಲಿ ಸಿಬಿಇ ಪ್ರಶಸ್ತಿ ಪಡೆದಿದ್ದ ಜಾನ್, ಬ್ರಿಟಿಷ್ ಸರ್ಕಾರದ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಜಾನ್ ಅವರ ಅಕಾಲಿಕ ಮರಣಕ್ಕೆ ಅವರ ಕೋಟ್ಯಾಂತರ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದು, ಫಾರ್ಮುಲ್ 1 ಮೊದಲ ಚಾಂಪಿಯನ್ ಇನ್ನು ನೆನೆಪು ಮಾತ್ರ.

ಸೂಪರ್ ಸ್ಪೋರ್ಟ್ಸ್ ಬೈಕ್‌ಗಳಲ್ಲಿ ಒಂದಾಗಿರುವ ಕವಾಸಕಿ ನಿಂಜಾ H2 ಕಾರ್ಬನ್ ಚಿತ್ರಗಳಿಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Click to compare, buy, and renew Car Insurance online

Buy InsuranceBuy Now

English summary
Surtees is considered as one of motorsport's greatest competitors of all time.
Please Wait while comments are loading...

Latest Photos

LIKE US ON FACEBOOK