ದುಬಾರಿ ಬೈಕ್ ಖರೀದಿ ಇನ್ನು ಅಷ್ಟು ಸುಲಭವಲ್ಲ- ಬೃಹತ್ ಆದಾಯಕ್ಕೆ ಕೈ ಹಾಕಿದ ಸಿಎಂ ಸಿದ್ದರಾಮಯ್ಯ..!!

Written By:

ಬೃಹತ್ ಗಾತ್ರದ ಬಜೆಟ್ ಮಾಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಹೊಸ ಹೊಸ ಮಾರ್ಗಗಳ ಮೂಲಕ ಸಂಪನ್ಮೂಲ ಕ್ರೂಢೀಕರಣಕ್ಕೆ ಪ್ಲ್ಯಾನ್ ಮಾಡಿದ್ದು, ದುಬಾರಿ ಬೈಕ್‌ಗಳ ಖರೀದಿ ಮೇಲೆ ಭಾರೀ ಪ್ರಮಾಣದ ತೆರಿಗೆ ವಿಧಿಸಲು ನಿರ್ಧರಿಸಿದ್ದಾರೆ. ಇದರಿಂದ ಸರ್ಕಾರಕ್ಕೆ ಭಾರೀ ಪ್ರಮಾಣದ ಆದಾಯ ಬರಲಿದ್ದು, ದುಬಾರಿ ಬೈಕ್ ಪ್ರಿಯರಿಗೆ ಸರ್ಕಾರ ಶಾಕ್ ನೀಡಿದೆ.

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಹೆಚ್ಚುತ್ತಿರುವ ದ್ವಿಚಕ್ರ ವಾಹನಗಳ ಖರೀದಿಗೆ ಬ್ರೇಕ್ ಹಾಕುಲು ಮುಂದಾಗಿರುವ ರಾಜ್ಯ ಸರ್ಕಾರ ಪ್ರಸ್ತುತ ತೆರಿಗೆ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. 1 ಲಕ್ಷ ರೂಪಾಯಿ ಮೇಲ್ಪಟ್ಟ ಬೈಕ್ ಖರೀದಿ ಮೇಲೆ ಶೇ.12 ರಿಂದ ಶೇ.18ರವರೆಗೆ ತೆರಿಗೆ ಪಾವತಿಸಬೇಕಿದ್ದು, ಈ ಮೂಲಕ ಸರ್ಕಾರ ಭಾರೀ ಪ್ರಮಾಣದ ಆದಾಯ ನೀರಿಕ್ಷೆ ಮಾಡಿದೆ.

ಈ ಹಿಂದೇ ಇದ್ದ ಶೇ.12ರಷ್ಟು ತೆರಿಗೆಯನ್ನು ಇದೀಗ ಶೇ.18ಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಹೆಚ್ಚುವರಿಯಾಗಿ ಶೇ.6ರಷ್ಟು ತೆರಿಗೆ ಪಾವತಿ ಮಾಡಬೇಕಿದ್ದು, ದುಬಾರಿ ಬೈಕ್‌ಗಳ ಖರೀದಿ ಭರಾಟೆಗೆ ಬ್ರೇಕ್ ಹಾಕಲಾಗಿದೆ.

ಅಂಕಿಅಂಶಗಳ ಪ್ರಕಾರ ಕಳೆದ ಒಂದು ವರ್ಷದ ಅವಧಿಯಲ್ಲಿ 1.27 ಕೋಟಿ ದ್ವಿಚಕ್ರ ವಾಹನಗಳು ರಾಜ್ಯದಲ್ಲಿ ಮಾರಾಟಗೊಂಡಿದ್ದು, ದಿನದಿನಕ್ಕೆ ದಿನಕ್ಕೆ ಖರೀದಿ ಸಂಖ್ಯೆ ಹೆಚ್ಚುತ್ತಲೆ ಇದೆ. ಇದನ್ನು ಮನಗಂಡಿರುವ ರಾಜ್ಯ ಸರ್ಕಾರ, ಬೈಕ್ ಖರೀದಿಗೆ ಬ್ರೇಕ್ ಹಾಕುವುದಲ್ಲದೇ ಅದರಿಂದಲೇ ಆದಾಯ ಸಂಗ್ರಹಿಸುವ ಗುರಿ ಹೊಂದಿದೆ.

ದುಬಾರಿ ಬೈಕ್‌ಗಳ ನೋಂದಣಿಯಿಂದಲೇ ಸದ್ಯ ಪ್ರತಿವರ್ಷ ರಾಜ್ಯ ಸರ್ಕಾರಕ್ಕೆ 45 ರಿಂದ 50ಕೋಟಿ ಆದಾಯವಿದ್ದು, ಇದನ್ನು 60 ಕೋಟಿಗೆ ಹೆಚ್ಚಿಸುವ ಗುರಿಹೊಂದಿದೆ. ಹೀಗಾಗಿ ಬೈಕ್ ಖರೀದಿಗೂ ಮುನ್ನ ಯೋಚನೆ ಮಾಡಲೇಬೇಕಿದೆ.

ಹೊಸ ನಿಯಮದ ಅನ್ವಯ ಹೇಗೆ ಎಂದು ತಿಳಿಯುವುದಾದರೇ ಒಂದು ಹೊಚ್ಚ ಹೊಸ ಎನ್‌ಫೀಲ್ಡ್ ಬೈಕ್ ಬೆಲೆ ಸರಾಸರಿ ಬೆಲೆ ರೂ. 1.23 ಲಕ್ಷ ಇದೆ ಎಂದಾದರೇ ಅದನ್ನು ಖರೀದಿಸಲು ಹೆಚ್ಚುವರಿಗಾಗಿ 22 ಸಾವಿರ ರೂಪಾಯಿ ಪಾವತಿ ಮಾಡಬೇಕಾಗುತ್ತೆ.

ಹೊಸ ತೆರಿಗೆ ನೀತಿಯಿಂದ ಕೆಲವು ಬೈಕ್‌ ಉತ್ಪಾದಕರಿಗೆ ಭಾರೀ ಹಿನ್ನಡೆಯಾಗುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಹೆಚ್ಚು ಮಾರಾಟಗೊಳ್ಳುವ ರಾಯಲ್ ಎನ್‌ಫೀಲ್ಡ್ ಮತ್ತು ಕೆಟಿಎಂ ಬೈಕ್ ಖರೀದಿ ಮೇಲೆ ವ್ಯತರಿಕ್ತ ಪರಿಣಾಮ ಬಿಳಬಹುದು ಎನ್ನಲಾಗಿದೆ.

ಬಜೆಟ್ ಮಂಡನೆ ವೇಳೆ ಹೊಸ ತೆರಿಗೆ ಪದ್ದತಿ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯನವರು, ರೂ. 1 ಲಕ್ಷಕ್ಕಿಂತ ಹೆಚ್ಚು ಬೆಲೆ ಬಾಳುವ ಬೈಕ್‌ಗಳಿಗೆ ಮಾತ್ರ ಈ ತೆರಿಗೆ ಅನ್ವಯವಾಗಲಿದ್ದು, ಲಕ್ಷಕ್ಕಿಂತ ಕಡಿಮೆ ಬೈಕ್‌ಗಳ ನೋಂದಣಿಗೆ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲವೆಂದಿದ್ದಾರೆ.

ಸರ್ಕಾರದ ಹೊಸ ನಿಯಮದಿಂದ ದುಬಾರಿ ಬೈಕ್‌ಗಳ ಖರೀದಿ ತಗ್ಗುವ ಸಾಧ್ಯತೆಗಳಿದ್ದು, ಲಕ್ಷಕ್ಕಿಂತ ಕಡಿಮೆ ಬೆಲೆಯ ಬೈಕ್‌ಗಳ ಖರೀದಿ ದ್ವಿಗುಣಗೊಳ್ಳಲಿದೆ. ಹೊಸ ನಿಯಮವನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಿರುವ ಕೆಲವು ಬೈಕ್ ಉತ್ಪಾದನಾ ಸಂಸ್ಥೆಗಳು ಲಕ್ಷಕ್ಕಿಂತ ಕಡಿಮೆ ಉತ್ಪಾದನೆಗೆ ಹೊಸ ಹೊಸ ಯೋಜನೆ ರೂಪಿಸುತ್ತಿವೆ.

ದುಬಾರಿ ಬೈಕ್‌ಗಳ ಖರೀದಿಗೆ ಕಡಿವಾಣ ಹಾಕಲು ಸರ್ಕಾರ ಜಾರಿಗೆ ತಂದಿರುವ ನೂತನ ತೆರಿಗೆ ನೀತಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುವುದೋ ಗೊತ್ತಿಲ್ಲ. ಆದ್ರೆ ಬೃಹತ್ ಪ್ರಮಾಣದಲ್ಲಿ ಆದಾಯ ಹರಿದುಬರಲಿದ್ದು, ದುಬಾರಿ ಬೈಕ್ ಪ್ರಿಯರಿಗೆ ಸರ್ಕಾರದ ಹೊಸ ನಿಯಮ ಶಾಕ್ ನೀಡಿದ್ದು ಮಾತ್ರ ಸುಳ್ಳಲ್ಲ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ:

2017ರ ಕವಾಸಕಿ ನಿಂಜಾ ಝೆಡ್ ಎಕ್ಸ್-10 ಆರ್ ಆರ್ ಫೋಟೋಗಳನ್ನು ವೀಕ್ಷಿಸಿ.

 

Click to compare, buy, and renew Car Insurance online

Buy InsuranceBuy Now

Read more on ಬಜೆಟ್ budget
Story first published: Friday, March 17, 2017, 17:38 [IST]
English summary
The government says the Motor Vehicle Tax on two wheelers hasn’t been increased since 2010 and the hike expected to return an additional Rs 60 crore in revenue.
Please Wait while comments are loading...

Latest Photos