ಬೈಕ್ ಖರೀದಿಗೆ ಇದು ಸುವರ್ಣಾವಕಾಶ- ಕವಾಸಕಿ ಖರೀದಿ ಮೇಲೆ ಭರ್ಜರಿ ಆಫರ್..!!

Written By:

ಕವಾಸಕಿ ಬೈಕ್ ವಿತರಕರು ER-6n ಆವೃತ್ತಿ ಮೇಲೆ ಭರ್ಜರಿ ಆಫರ್ ನೀಡುತ್ತಿದ್ದು, ಖರೀದಿ ಮೇಲೆ 1 ಲಕ್ಷ ರೂಪಾಯಿ ರಿಯಾಯ್ತಿ ದೊರೆಯಲಿದೆ. ಹೀಗಾಗಿ ಅತ್ಯುತ್ತಮ ವಿನ್ಯಾಸದ ಬೈಕ್ ಅನ್ನು ನಿಮ್ಮ ಬಜೆಟ್ ತಕ್ಕಂತೆ ಖರೀದಿ ಮಾಡಬಹುದಾಗಿದೆ.

ಮುಂಬೈ ಕವಾಸಕಿ ಬೈಕ್ ವಿತರಕರ ಪ್ರಕಾರ ಹಳೆಯ ಮಾದರಿಯ ಕವಾಸಕಿ ಬೈಕ್ ಎಕ್ಸ್‌ಜೇಂಜ್ ಮೇಲೂ ಭಾರೀ ಆಫರ್ ನೀಡುತ್ತಿದ್ದಾರೆ. ನಿಮ್ಮ ಹಳೆಯ ER-6n ಬೈಕ್ ಬದಲಾಸಿಕೊಂಡಲ್ಲಿ ರೂ.93 ಸಾವಿರ ಡಿಸ್ಕೌಂಟ್ ಸಿಗಲಿದೆ.

ಕೇವಲ ಮುಂಬೈ ಕವಾಸಕಿ ವಿತರಕರು ಮಾತ್ರ ಈ ಭರ್ಜರಿ ಆಫರ್ ನೀಡುತ್ತಿಲ್ಲ. ಬದಲಾಗಿ ಬೆಂಗಳೂರಿನಲ್ಲೂ ಭಾರೀ ಆಫರ್ ನೀಡುತ್ತಿರುವ ಬಗ್ಗೆ ನಿಮ್ಮ ಡ್ರೈವ್‌ಸ್ಪಾರ್ಕ್ ಖಚಿತ ಮಾಹಿತಿ ಪಡೆದುಕೊಂಡಿದೆ. ರೂ.30 ಸಾವಿರ ಆಫರ್ ನೀಡುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವಿತರಕರು ಗ್ರಾಹಕರನ್ನು ಸೆಳೆಯುವ ತವಕದಲ್ಲಿದ್ದಾರೆ.

649ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿರುವ ER-6n ಬೈಕ್, ಪುಣೆ ಎಕ್ಸ್‌ಶೋರಂ ಪ್ರಕಾರ 4.78ಲಕ್ಷಕ್ಕೆ ಲಭ್ಯವಿದೆ. ಆದ್ರೆ ಅತ್ಯುತ್ತಮ ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಬೈಕ್ ಅನ್ನು ಬಿಎಸ್-3 ಎಂಜಿನ್ ಹೊಂದಿರುವ ಹಿನ್ನೆಲೆ ಖರೀದಿ ಮೇಲೆ ಭಾರೀ ಆಫರ್ ನೀಡಲಾಗುತ್ತಿದೆ.

ಕೇಂದ್ರ ಸರ್ಕಾರದ ಹೊಸ ಮೋಟಾರ್ ಕಾಯ್ದೆ ಪ್ರಕಾರ ಇನ್ಮುಂದೆ ಪ್ರತಿ ಬೈಕ್ ಮಾದರಿಯೂ ಬಿಎಸ್-4 ಎಂಜಿನ್ ಹೊಂದಿರುವುದು ಕಡ್ಡಾಯವಾಗಿರಲಿದೆ. ಹೀಗಾಗಿ ಬಿಎಸ್-3 ಎಂಜಿನ್ ಮಾದರಿಗಳನ್ನು ಈಗಲೇ ಪೂರ್ಣಪ್ರಮಾಣದ ಮಾರಾಟಕ್ಕೆ ವಿತರಕರು ಭರ್ಜರಿ ಆಫರ್ ನೀಡುತ್ತಿದ್ದಾರೆ.

ಕೇಂದ್ರ ಸರ್ಕಾರದ ಹೊಸ ರೂಲ್ಸ್ ಏಪ್ರಿಲ್ 1ರಿಂದ ಜಾರಿ ಬರಲಿದೆ. ಇದರಿಂದಾಗಿ ಇನ್ಮುಂದೆ ಬಿಎಸ್-3 ಎಂಜಿನ್ ಹೊಂದಿರುವ ಬೈಕ್ ಮಾರಾಟ ಸಂಪೂರ್ಣ ಬಂದ್ ಆಗಲಿದೆ. ಸದ್ಯಕ್ಕೆ ಇರುವ ಬೈಕ್‌ಗಳನ್ನು ಹೊರತುಪಡಿಸಿ ಇನ್ಮುಂದೆ ಉತ್ಪಾದನೆ ಮತ್ತು ಮಾರಾಟಗೊಳ್ಳುವ ಬೈಕ್‌ಗಳು ಬಿಎಸ್-4 ಎಂಜಿನ್ ಹೊಂದಿರಲೇಬೇಕಿದೆ.

ಕೇವಲ ಬಿಎಸ್-3 ಎಂಜಿನ್ ಹೊಂದಿರುವ ಕವಾಸಕಿ ER-6n ಬೈಕ್ ಖರೀದಿ ಮೇಲೆ ಅಷ್ಟೇ ಅಲ್ಲದೇ ಬಿಎಸ್-4 ಎಂಜಿನ್ ಮಾದರಿಗಳಿಗೆ ಎಕ್ಸ್‌ಜೇಂಜ್‌ ಮಾಡಿಕೊಳ್ಳುವಂತೆಯೂ ಆಫರ್ ನೀಡಲಾಗುತ್ತಿದೆ. ಇದರಿಂದಾಗಿ ಬೈಕ್ ಖರೀದಿದಾರರಿಗೆ ಇದು ಸುವರ್ಣವಕಾಶ ಎಂದೇ ಹೇಳಬಹುದು.

ಒಂದು ವೇಳೆ ಬಿಎಸ್-4 ಎಂಜಿನ್ ಹೊಂದಿರುವ ಬೈಕ್ ಖರೀದಿಯ ಯೋಚನೆಯಲ್ಲಿದ್ದರೆ ಕವಾಸಕಿ ನಿಂಜಾ H2 ಕಾರ್ಬನ್ ಬೈಕ್ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

 

 

English summary
Kawasaki dealerships are offering massive discounts on the Japanese manufacturer's ER-6N naked bike.
Please Wait while comments are loading...

Latest Photos