ಭಾರತದಲ್ಲಿ ಬಿಡುಗಡೆಗೊಂಡ ಬಲಿಷ್ಠ ಕವಾಸಕಿ ಝೆಡ್ಎಕ್ಸ್-10 ಆರ್.ಆರ್ ಬೈಕ್: ಬೆಲೆ ಮತ್ತು ವಿವರ ಇಲ್ಲಿದೆ

Written By:

ಸೂಪರ್ ಬೈಕುಗಳ ತಯಾರಕ ದೈತ್ಯ ಕವಾಸಕಿ ಕಂಪನಿ ತನ್ನ ಹೊಚ್ಚ ಹೊಸ ಕವಾಸಕಿ ಝೆಡ್ಎಕ್ಸ್-೧೦ ಆರ್.ಆರ್ ಬೈಕನ್ನು ಬಿಡುಗಡೆಗೊಳಿಸಿದ್ದು, ಈ ಬೈಕ್ ಹೆಚ್ಚು ಪ್ರಬಲವಾಗಿದ್ದು, ಎಬಿಎಸ್ ಮತ್ತು ಬಾಷ್ ಕಂಪನಿಯ ಇನೇರೀಟಲ್ ಮಾಪನ ಘಟಕ ಹೊಂದಿದೆ.

ಜಪಾನ್ ಮೂಲದ ಐಕಾನಿಕ್ ದ್ವಿಚಕ್ರ ಸಂಸ್ಥೆ ಕವಾಸಕಿ, ಭಾರತದಲ್ಲಿ ತನ್ನ ಶ್ರೇಣಿಯ ದುಬಾರಿ ಝೆಡ್ಎಕ್ಸ್-೧೦ ಆರ್.ಆರ್ ಬೈಕ್ ಅನಾವರಣಗೊಳಿಸಿದೆ. ಇದು ಶ್ರೀಮಂತ ದ್ವಿಚಕ್ರ ವಾಹನ ವಿಭಾಗದಲ್ಲಿ ಮತ್ತಷ್ಟು ಬಲವರ್ಧಿಸಿಕೊಳ್ಳಲು ಸಹಕಾರಿಯಾಗಲಿದೆ.

ಬಾಷ್ ಕಂಪನಿಯ ಇನೇರೀಟಲ್ ಮಾಪನ ಇರುವ ಈ ಬೈಕ್ ಪ್ರತಿಯೊಂದು ಬೈಕಿನ ಅಂಕಿ ಅಂಶವನ್ನು ಕ್ರೂಡೀಕರಿಸಿ ತನ್ನಲಿ ಇಟ್ಟುಕೊಳ್ಳುವುದಲ್ಲದೆ, ಚಾಲಕನಿಗೆ ಅವಶ್ಯಕತೆ ಇದ್ದಲ್ಲಿ ವರದಿ ನೀಡುತ್ತದೆ.

ಕವಾಸಕಿ ಕಂಪನಿಯ ಈ ಬೈಕ್ ಸೀಮಿತ ಆವೃತಿಯಾಗಿರುವ ಕಾರಣ ಕೇವಲ 500 ಝೆಡ್ಎಕ್ಸ್-10ಆರ್.ಆರ್ ಬೈಕುಗಳನ್ನು ಮಾತ್ರ ಉತ್ಪಾದನೆ ಮಾಡಲಾಗಿದೆ.

ಕಪ್ಪು ಬಣ್ಣದ ಝೆಡ್ಎಕ್ಸ್-೧೦ ಆರ್.ಆರ್ ಬೈಕ್ ಕೇವಲ ಒಂದು ಸೀಟ್ ಹೊಂದಿದ್ದು, ದೂರ ಪ್ರಯಾಣಕ್ಕೆ ಹೇಳಿ ಮಾಡಿಸಿದ ಬೈಕ್ ಎನ್ನಬಹುದು.

ಕಳೆದ ವರ್ಷ ಜರ್ಮನಿಯ ಕೊಲೊಗ್ನೆಯಲ್ಲಿ ನೆಡೆದ 2016 ಇಂಟರ್ ಮೊಟ್ ಮೋಟಾರ್ ಸೈಕಲ್ ಶೋದಲ್ಲಿ ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ಕವಾಸಕಿ ಅತಿ ನೂತನ ಝೆಡ್ಎಕ್ಸ್-೧೦ ಆರ್.ಆರ್ ಆವೃತ್ತಿಯನ್ನು ಅನಾವರಣಗೊಳಿಸಿತ್ತು.

ಕವಾಸಕಿ ಝೆಡ್ಎಕ್ಸ್-೧೦ ಆರ್.ಆರ್ ಬೈಕ್ ನಾಲ್ಕು ಸಿಲಿಂಡರ್ ಹೊಂದಿರುವ 998ಸಿಸಿ ಲಿಕ್ವಿಡ್ ಕೋಲ್ಡ್ ಎಂಜಿನ್ ಪಡೆದುಕೊಂಡಿದ್ದು, 113.5 ಏನ್ಎಂ ತಿರುಗುಬಲದಲ್ಲಿ 200 ರಷ್ಟು ಅಶ್ವಶಕ್ತಿ ಉತ್ಪಾದಿಸುವಷ್ಟು ಬಲಿಷ್ಠವಾಗಿದೆ.

6-ಸ್ಪೀಡ್ ಗೇರ್ ಬಾಕ್ಸ್ ಹೊಂದಿರುವ ಈ ಕವಾಸಕಿ ಝೆಡ್ಎಕ್ಸ್-೧೦ ಆರ್.ಆರ್ ಬೈಕಿನ ವೇಗ ವರ್ಧಿಸುವ ವೇಳೆ ಆಗುವ ತಿಕ್ಕಾಟ ಕಡಿಮೆಗೊಳಿಸಲು ತಳ ಮಟ್ಟದ ಡಿ.ಎಲ್.ಸಿ ಕೋಟಿಂಗ್ ನೀಡಲಾಗಿದೆ.

2017 ಕವಾಸಕಿ ನಿಂಜಾ ಝೆಡ್ ಎಕ್ಸ್-10 ಆರ್ ಆರ್ ಫೋಟೋಗಳನ್ನು ವೀಕ್ಷಿಸಿ.

English summary
The Kawasaki ZX-10RR comes equipped with ABS and Bosch inertial measurement unit (IMU) that gauges data across six axes of movement.
Please Wait while comments are loading...

Latest Photos