ಪರೀಕ್ಷಾರ್ಥ ಸಂದರ್ಭದಲ್ಲಿ ಕಾಣಿಸಿಕೊಂಡ ವಿನೂತನ ಕೆಟಿಎಂ 790 ಡ್ಯೂಕ್..!!

Written By:

ಆಸ್ಟ್ರಿಯನ್ ಪ್ರಮುಖ ದ್ವಿಚಕ್ರ ವಾಹನಗಳ ಉತ್ಪಾದನಾ ಸಂಸ್ಥೆ ಕೆಟಿಎಂ, 2017ರ ಮತ್ತೊಂದು ವಿನೂತನ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ. ಇದೇ ವರ್ಷಾಂತ್ಯಕ್ಕೆ ಡ್ಯೂಕ್ 790 ಗ್ರಾಹಕರ ಕೈ ಸೇರುವ ಸಾಧ್ಯತೆಗಳಿದ್ದು, ಪರೀಕ್ಷಾರ್ಥ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನಸೆಳೆದಿದೆ.

ನೂತನ ಮಾದರಿಯ ಕೆಟಿಎಂ 390 ಡ್ಯೂಕ್ ಮತ್ತು 200 ಡ್ಯೂಕ್ ಬಿಡುಗಡೆಯಾಗಿದ್ದು, ಇದೀಗ 790 ಡ್ಯೂಕ್ ಬಿಡುಗಡೆಗೆ ಸಜ್ಜುಗೊಂಡಿದೆ. ಹೀಗಾಗಿ ಭಾರತೀಯ ರಸ್ತೆಗಳಿಗೆ ಅನುಗುಣವಾಗಿ ಸಿದ್ಧಗೊಂಡಿರುವ ನೂತನ ಮಾದರಿಯನ್ನು ಟೆಸ್ಟಿಂಗ್ ನಡೆಸಲಾಗಿದ್ದು, ಹಲವು ವಿನೂತನ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.

ಕೆಟಿಎಂ 790 ಡ್ಯೂಕ್ ಅನ್ನು ಪರೀಕ್ಷಾರ್ಥ ವೇಳೆ ಸೆರೆ ಹಿಡಿದಿರುವುದರಿಂದ ಹೊಸ ಆವೃತ್ತಿ ಬಗೆಗಿನ ಕುತೂಹಲತಕ್ಕೆ ತೆರೆಬಿದ್ದಿದೆ. ಸೆರೆಸಿಕ್ಕಿರುವ ಚಿತ್ರಗಳ ಪ್ರಕಾರ ಡ್ಯೂಕ್ 790 ಹೊಸ ವೈಶಿಷ್ಟ್ಯತೆಗಳೊಂದಿಗೆ ಸಿದ್ಧಗೊಂಡಿದ್ದು, ಈ ವರ್ಷವೇ ಗ್ರಾಹಕರ ಕೈ ಸೇರುವ ಸಾಧ್ಯತೆಗಳಿವೆ.

ಸದ್ಯದ ಮಾಹಿತಿ ಪ್ರಕಾರ 2017ರ ಕೆಟಿಎಂ 790 ಡ್ಯೂಕ್‌ ಪ್ರಸ್ತತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿ ಹೊಂದಿದ್ದು, 2 ಮಾದರಿಯಲ್ಲಿ ಬಿಡುಗಡೆಗೊಳಿಸಲು ಯೋಜಿಸಲಾಗಿದೆ. ಒಂದು ಬೇಸಿಕ್ 790 ಡ್ಯೂಕ್ ಮತ್ತು 790 ಡ್ಯೂಕ್ ಆರ್ ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆ ಹೊಂದಲಾಗಿದೆ.

ಹೊಸ ಲುಕ್‌ನೊಂದಿಗೆ ಬಿಡುಗಡೆಗೆ ಕಾಯ್ದಿರುವ ಕೆಟಿಎಂ 790 ಡ್ಯೂಕ್ ವಿನ್ಯಾಸ ಗಮನಸೆಳೆಯುತ್ತಿವೆ. ಸೀಟುಗಳು ಮತ್ತು ಇಂಧನ ಟ್ಯಾಂಕ್ ವಿನ್ಯಾಸದಲ್ಲಿ ಮಾರ್ಪಾಡು ತರಲಾಗಿದ್ದು, ಹಿಂಬದಿ ಸೀಟಿನ ವಿನ್ಯಾಸ ಅದ್ಭುತವಾಗಿದೆ. ಇದಲ್ಲದೇ ನೂತನ ಮಾದರಿಯ 790 ಡ್ಯೂಕ್‌ನಲ್ಲಿ ಸ್ಫೋರ್ಟ್ಸ್ ಆವೃತ್ತಿಯ ಹೆಡ್‌ಲ್ಯಾಂಪ್ ವ್ಯವಸ್ಥೆ ಹೊಂದಿದೆ.

ಕೆಟಿಎಂ 790 ಡ್ಯೂಕ್ ಹೊಸ ಆವೃತ್ತಿ ಮುಂದಿನ ವರ್ಷ EICMA ಮೋಟಾರ್ ಸೈಕಲ್ ಶೋನಲ್ಲಿ ಭಾಗಿಯಾಗುವ ಸಾಧ್ಯತೆಗಳಿದ್ದು, ಈಗಾಗಲೇ ಬಿಡುಗಡೆಗೂ ಸಿದ್ಧತೆಯಲ್ಲಿದೆ.

ಇದಕ್ಕೂ ಮುನ್ನ ಬಿಡುಗಡೆಗೆ ಕಾಯ್ದಿರುವ 690 ಡ್ಯೂಕ್ ಮಾದರಿಯ ಹೋಲಿಕೆಯನ್ನೆ 790 ಡ್ಯೂಕ್ ಮಾದರಿಯಲ್ಲಿ ಸೇರಿಸಲಾಗಿದೆ ಎನ್ನಲಾಗುತ್ತಿದ್ದು, ಬಿಡುಗಡೆ ನಂತರವಷ್ಟೇ ನಿಜಾಂಶ ಬಯಲಾಗಲಿದೆ.

ಒಂದು ವೇಳೆ ಡ್ಯೂಕ್ 790 ಇಷ್ಟವಾಗದೇ ಹೋದಲ್ಲಿ 690 ಡ್ಯೂಕ್ ಮಾದರಿಯ ಬೈಕ್ ಚಿತ್ರಗಳ ವೀಕ್ಷಣೆಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

English summary
The KTM 790 Duke has been spied in production-ready guise ahead of its launch later this year.
Please Wait while comments are loading...

Latest Photos