ಭಾರತದಲ್ಲಿ ಧೂಳೆಬ್ಬಿಸಿದ 2017ರ ಕೆಟಿಎಂ ಡ್ಯೂಕ್ 390- ಇಲ್ಲಿದೆ ನೋಡಿ ಬಿಡುಗಡೆಯ ಕಂಪ್ಲೀಟ್ ಡಿಟೈಲ್ಸ್..!

Written By:

ಬಿಡುಗಡೆಗೂ ಮುನ್ನ ಭಾರತ ಹಾಗೂ ಕೆಲವು ಆಯ್ದ ರಾಷ್ಟ್ರಗಳಲ್ಲಿ ಟೆಸ್ಟಿಂಗ್ ನಡೆಸಿದ್ದ ಕೆಟಿಎಂ ಡ್ಯೂಕ್ 390 ವಿನೂತನ ಮಾದರಿಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಹಳೆಯ ಮಾದರಿಗಿಂತಲೂ ವಿಭಿನ್ನವಾಗಿರುವ ಹೊಸ ಆವೃತ್ತಿಯು ಮತ್ತೆ ಸಾಹಿಸಿ ಬೈಕ್ ಪ್ರಿಯರ ಮನಸೆಳೆಯಲು ಸಜ್ಜಾಗಿದೆ.

ಬಿಡುಗಡೆಯಾಗಿರುವ 2017ರ ಕೆಟಿಎಂ ಡ್ಯೂಕ್ 390 ವಿನ್ಯಾಸವು ಅದ್ಭುತವಾಗಿದೆ. ಬೈಕ್ ಉಪಕರಣಗಳು ಮತ್ತು ಕೆಲವು ಯಾಂತ್ರಿಕ ನವೀಕರಣಗಳನ್ನು ಗಮನಾರ್ಹ ಬದಲಾವಣೆ ತರಲಾಗಿದೆ.

2017ರ ಕೆಟಿಎಂ ಡ್ಯೂಕ್ 390:
ಬೆಲೆ: ರೂ. 2,25,730 ಮಾತ್ರ(ದೆಹಲಿ ಎಕ್ಸ್‌ಶೋರಂ)

ಕೆಟಿಎಂ ಡ್ಯೂಕ್ 390 ವಿನ್ಯಾಸ:
ಹೊಸ ವಿನ್ಯಾಸದೊಂದಿದೆ ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ 2017ರ ಕೆಟಿಎಂ ಡ್ಯೂಕ್, ಈ ಹಿಂದಿನ ಆವೃತ್ತಿಗಿಂತಲೂ ಅತ್ಯುತ್ತಮವಾಗಿದೆ. ಹೊಸ ಡ್ಯೂಕ್ 390 ಪ್ರಮುಖ ವೈಶಿಷ್ಟ್ಯವೆಂದರೆ ಸೈಡ್ ಮೌಟೆಂಡ್ ಎಕ್ಸಾಸ್ಟ್ ಮಾದರಿಯನ್ನು ಪೂರ್ತಿ ವಿನ್ಯಾಸಗೊಳಿಸಲಾಗಿದ್ದು, ಹೊಸ ಲುಕ್ ಕೊಡಲಾಗಿದೆ.

ಇನ್ನು ಹೆಡ್‌ಲೈಟ್ ವಿನ್ಯಾಸದಲ್ಲೂ ಸಾಕಷ್ಟು ಬದಲಾವಣೆ ತರಲಾಗಿದೆ. ಜೊತೆಗೆ ಹಗಲುವೇಳೆಯ ಬೆಳಕಿನ ವ್ಯವಸ್ಥೆಯನ್ನು ಹೊಂದಿರುವ ನೂತನ ಮಾದರಿಯೂ ಈ ಹಿಂದಿನ 1290 ಸೂಪರ್ ಡ್ಯೂಕ್ ನೆನಪಿಸುತ್ತೆ.

ಡ್ಯೂಕ್ 390 ಎಂಜಿನ್ ಸಾಮರ್ಥ್ಯ:
373ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಡ್ಯೂಕ್ 390 ಮಾದರಿಯು 44ಬಿಎಚ್‌ಪಿ ಮತ್ತು 35ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತೆ. ಈ ಹಿಂದಿನ ಮಾದರಿಯನ್ನೇ ಹೊಲುವ ನೂತನ ಆವೃತ್ತಿಯು 6 ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆಯನ್ನು ಹೊಂದಿದೆ.

ನೂತನ ಮಾದರಿ ಮುಂಭಾಗದ ವೈಶಿಷ್ಟ್ಯತೆಗಳು ಕೂಡ ಗಮನಸೆಳೆಯುತ್ತಿದ್ದು, ಟಿಎಫ್‌ಟಿ ವಿದ್ಯುನ್‌ಮಾನ ಡಿಸ್‌ಫೈ ಹೊಂದಿದೆ. ಇದರ ಜೊತೆಗೆ 300ಎಂಎಂ ದೊಡ್ಡದಾದ ಡಿಸ್ಕ್ ಬ್ರೇಕ್ ಹೊಂದಿದ್ದು, ಹಿಂಭಾಗದಲ್ಲಿ ಡಬ್ಲ್ಯು‌ಪಿ ಮೋನೋ ಶಾರ್ಕ್ ವ್ಯವಸ್ಥೆಯಿದೆ. ಎಬಿಎಸ್ ಜೊತೆ ಡ್ಯುಯಲ್ ಡಿಸ್ಕ್ ವ್ಯವಸ್ಥೆ ಇರಿಸಲಾಗಿದ್ದು, ಸ್ಲಿಫ್ ಕ್ಲಚ್ ಮತ್ತು ಮೆಟ್‌ಜೆಲರ್ ಟೈರ್ ಬಳಕೆ ಮಾಡಲಾಗಿದೆ.

ಡ್ಯೂಕ್ 390 ಪ್ರತಿಸ್ಪರ್ಧಿಗಳು:
ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಡ್ಯೂಕ್ 390, ಬೆನೆಲ್ಲಿ ಟಿಎನ್‌ಟಿ300, ಬಜಾಜ್ ಡೋಮಿನಾರ್ 400 ಮತ್ತು ಮಹೀಂದ್ರಾ ಮೋಜೋ ಬೈಕ್‌ಗಳಿಗೆ ತೀವ್ರ ಪ್ರತಿಸ್ಪರ್ಧಿಯಾಗಲಿದೆ.

ನೂತನ ಡ್ಯೂಕ್ 390 ಮಾದರಿಗಳ ಫೋಟೋ ವೀಕ್ಷಣೆಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Click to compare, buy, and renew Car Insurance online

Buy InsuranceBuy Now

Story first published: Friday, February 24, 2017, 14:43 [IST]
English summary
2017 KTM Duke 390 model launched in India. The much-awaited all new KTM 390 Duke has received major upgrades from design, specifications, and more.
Please Wait while comments are loading...

Latest Photos