ಬಹುನಿರೀಕ್ಷಿತ 'ಹೋಂಡಾ ಡಿಯೊ' ಬಿಎಸ್ IV ಕಂಪ್ಲೇಂಟ್ ಎಂಜಿನ್ ಸ್ಕೂಟರ್ ಬಿಡುಗಡೆ: ಬೆಲೆ ಮತ್ತು ವಿವರ ಇಲ್ಲಿದೆ

ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಹೋಂಡಾ ಬಿಎಸ್ IV ಕಂಪ್ಲೇಂಟ್ ಎಂಜಿನ್ ಮತ್ತು ಸ್ವಯಂಚಾಲಿತ ಹೆಡ್ ಲ್ಯಾಂಪ್ ಆನ್ (ಎಓಎಚ್) ಹೊಂದಿರುವ ಡಿಯೊ ಫೇಸ್‌‌ಲಿಫ್ಟ್ ಸ್ಕೂಟರ್ ಬಿಡುಗಡೆಗೊಳಿಸಿದೆ

Written By:

ದೇಶದ ಎರಡನೇ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮೆಟೆಡ್ (ಎಚ್‌ಎಂಎಸ್ಐ) ಸಂಸ್ಥೆಯ ಹೆಮ್ಮೆಯ ಕೂಸು ಡಿಯೊ ಫೇಸ್‌‌ಲಿಫ್ಟ್ ಸ್ಕೂಟರ್ ಮರು ಬಿಡುಗಡೆಗೊಂಡಿದೆ.

ಈ ಹೆಚ್ಚಿನ ತಂತ್ರಜ್ಞಾನ ಹೊಂದಿರುವ ಫೇಸ್ ಲಿಫ್ಟ್ ಸ್ಕೂಟರ್ ನೀರಿಕ್ಷೆಯಂತೆ ಬಿಎಸ್ IV ಕಂಪ್ಲೇಂಟ್ ಎಂಜಿನ್ ಹೊಂದಿದ್ದು, ಭಾರತ ಸರ್ಕಾರದ ನಿಯಮದಂತೆ ಸ್ವಯಂಚಾಲಿತ ಹೆಡ್ ಲೈಟ್ ಆಯ್ಕೆ ಹೊಂದಿದೆ.

ಸದ್ಯ ಬಿಡುಗಡೆಯಾಗಿರುವ ಸ್ವಯಂಚಾಲಿತ ಹೆಡ್ ಲ್ಯಾಂಪ್ ಆನ್ (ಎಓಎಚ್) ವಿಶೇಷತೆ ಹೊಂದಿರುವ ಹೋಂಡಾ ಕಂಪನಿಯ ಡಿಯೊ ಸ್ಕೂಟರ್ ಹೆಚ್ಚಿನ ಗ್ರಾಫಿಕ್ಸ್ ಪಡೆದುಕೊಂಡಿದೆ.

ಹಿಂದಿನ ಆವೃತಿಗಿಂತ ಹೆಚ್ಚು ಅಂದಗೊಂಡು ಮತ್ತು ತಾಜಾತನದೊಂದಿಗೆ ಹೋಂಡಾ ಡಿಯೊ ಬಿಡುಗಡೆಗೊಂಡಿದೆ.

ಹೊಸ ತಂತ್ರಜ್ಞಾನದೊಂದಿಗೆ ಮತ್ತು ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಂಡಿರುವ ಈ ಡಿಯೊ ಸ್ಕೂಟರ್ ರೂ. 49,132 ( ಎಕ್ಸ್ ಷೋರೂಂ ದೆಹಲಿ) ನಿಗದಿಪಡಿಸಲಾಗಿದೆ.

ಸ್ವಯಂಚಾಲಿತ ಹೆಡ್ ಲ್ಯಾಂಪ್ ಆನ್ (ಎಓಎಚ್) ವಿಶೇಷತೆ ಹೊಂದಿರುವ ಹೋಂಡಾ ಕಂಪನಿಯ ಡಿಯೊ ಸ್ಕೂಟರ್ ಪರ್ಲ್ ಸ್ಪೋರ್ಟ್ಸ್ ಹಳದಿ, ವಿಬ್ರಾಂಟ್ ಆರೆಂಜ್, ಸ್ಪೋರ್ಟ್ಸ್ ರೆಡ್, ಮಟ್ಟೆ ಆಕ್ಸಿಸ್ ಗ್ರೇ ಮೆಟಾಲಿಕ್ ಮತ್ತು ಕ್ಯಾಂಡಿ ಜಸ್ಸಿ ಬ್ಲೂ ಎಂಬ ಐದು ವಿವಿಧ ಬಣ್ಣಗಳಲ್ಲಿ ಬಿಡುಗಡೆಗೊಂಡಿದೆ.

ಈ ಹೊಚ್ಚ ಹೊಸ ಸ್ಕೂಟರ್ 109.19 ಸಿಸಿ ಏರ್ ಕೋಲ್ಡ್ ಎಂಜಿನ್ ಹೊಂದಿದ್ದು, 8.77 ತಿರುಗುಬಲದಲ್ಲಿ 8 ಅಶ್ವಶಕ್ತಿ ಉತ್ಪಾದಿಸಲಿದೆ.

ನಾಲ್ಕು ಸ್ಟ್ರೋಕ್ ಎಂಜಿನ್ ಹೊಂದಿರುವ ಡಿಯೊ ಸ್ಕೂಟರ್ ವಿ-ಮ್ಯಾಟಿಕ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದೆ.

ಸ್ಪೋರ್ಟ್ಸ್ ಲುಕ್ ಹೊಂದಿರುವ ಈ ಡಿಯೊ ಎರಡು ವಿಶೇಷ ಬಣ್ಣಗಳೊಂದಿಗೆ ಮುಂಭಾಗದಲ್ಲಿ ಗ್ರಾಫಿಕ್ಸ್ ಹೊಂದಿದ್ದು, ಯುವ ಮನಸ್ಸುಗಳಿಗೆ ನೆಚ್ಚಿನ ಸ್ಕೂಟರ್ ಆಗುವ ಎಲ್ಲಾ ಲಕ್ಷಣಗಳನ್ನು ಈ ಡಿಯೊ ಹೊಂದಿದೆ.

ಈ ಸ್ಕೂಟರ್‌ 103 ಕೆಜಿ ತೂಕ ಹೊಂದಿದ್ದು, ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಹೋಂಡಾ ಆಕ್ಟಿವಾದಲ್ಲಿ ಇದ್ದಂತಹ ಎಲ್ಲಾ ಗುಣ ವಿಶೇಷತೆಗಳ ಜೊತೆ ಹೆಚ್ಚು ಫ್ಯಾನ್ಸಿ ಅಂಶಗಳನ್ನು ಒಳಗೊಂಡು ಬರುತ್ತಿರುವ ಈ ಸ್ಕೂಟರ್ ಕಾಂಬಿ ಬ್ರೆಕಿಂಗ್ ಸಿಸ್ಟಮ್ ಪಡೆದುಕೊಂಡಿದೆ.

ಟ್ಯೂಬ್ ಇಲ್ಲದೆ ಇರುವ ಟೈಯರ್ ಹೊಂದಿರುವ ಸ್ಕೂಟರ್ ಇದಾಗಿದ್ದು, ಕೊಂಚ ದೊಡ್ಡದಾದ 5.3 ಲೀಟರ್ ಪೆಟ್ರೋಲ್ ಟ್ಯಾಂಕ್ ಹೊಂದಿರುವ ಸ್ಕೂಟರ್ ಇದಾಗಿದೆ.

ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಈ ಸ್ಕೂಟರ್ ಯುವ ಜನತೆಯನ್ನು ಉದ್ದೇಶದಲ್ಲಿಟ್ಟುಕೊಂಡು ರೂಪಿಸಲಾಗಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಹಗಲು ಹೊತ್ತು ಬೆಳೆಗುವ ಹೊಚ್ಚ ಹೊಸ ಎಲ್ಎಡಿ ದೀಪಗಳನ್ನು ಹೊಂದಿರುವ ಈ ಹೊಸ ಫೇಸ್‌ಲಿಫ್ಟ್ ಸ್ಕೂಟರಿಗೆ ಜನತೆ ಹೇಗೆ ಪ್ರತಿಕ್ರಿಯೆ ನೀಡಲಿದೆ ಇನ್ನಷ್ಟೇ ತಿಳಿಯಬೇಕಿದೆ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ

Click to compare, buy, and renew Car Insurance online

Buy InsuranceBuy Now

Read more on ಹೋಂಡಾ honda
English summary
Honda Motorcycle and Scooter India (HMSI) has launched the 2017 Dio with new BS-IV compliant engine.
Please Wait while comments are loading...

Latest Photos

LIKE US ON FACEBOOK