ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಎಫ್ಐ ಬೈಕ್ ಬಿಡುಗಡೆ- ಬೆಲೆ ಮತ್ತು ವಿನ್ಯಾಸಗಳ ವಿವರ ಇಲ್ಲಿದೆ..!!

Written By:

ಹೊಸ ಹೊಸ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿಗೊಂಡಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ವಿನೂತನ ಆವೃತ್ತಿ ಎಫ್ಐ ಬೈಕ್ ಭಾರತದಲ್ಲಿ ಬಿಡುಗಡೆಯಾಗಿದೆ. ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.1,60,500ಗಳಿಗೆ ಲಭ್ಯವಿದೆ.

ಹೊಸ ಮಾದರಿಯ ಬಿಎಸ್-4 ಎಂಜಿನ್ ಜೊತೆ ಅಭಿವೃದ್ಧಿ ಹೊಂದಿರುವ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಎಫ್ಐ ವಿನೂತನ ಆವೃತ್ತಿಯೂ, ಈಗಾಗಲೇ ದೇಶದ ಪ್ರಮುಖ ನಗರಗಳಲ್ಲಿ ಲಭ್ಯವಿದೆ.

ಯಾವ ನಗರದಲ್ಲಿ ಎಷ್ಟು ಬೆಲೆ?
ನವದೆಹಲಿ-     ರೂ. 1,60,500
ಮುಂಬೈ-       ರೂ.1,70,000
ಬೆಂಗಳೂರು -   ರೂ.1,63,000
ಕೋಲ್ಕತ್ತಾ -    ರೂ.1,65,771
ಚೆನ್ನೈ -         ರೂ.1,63,156
ಹೈದ್ರಾಬಾದ್-   ರೂ.1,62,572

ಗ್ರಾಹಕರ ಆದ್ಯತೆ ಮೇರೆಗೆ ವಿನೂತನ ಆವೃತ್ತಿಯನ್ನು ಪೂರೈಕೆ ಮಾಡುತ್ತಿರುವ ರಾಯಲ್ ಎನ್‌ಫೀಲ್ಡ್ ಬೈಕ್ ಮಾರಾಟಗಾರರು 5 ಸಾವಿರ ಮುಂಗಡದೊಂದಿಗೆ ಬುಕಿಂಗ್ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಆಸಕ್ತರು ಬುಕಿಂಗ್ ಮಾಡಬಹುದಾಗಿದೆ.

ಎಂಜಿನ್ ಸಾಮರ್ಥ್ಯ
411 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿರುವ ಎಫ್ಐ ಆವೃತ್ತಿಯು ಫ್ಯೂಲ್ ಇಜೆಕ್ಟೆಡ್ ವ್ಯವಸ್ಥೆ ಹೊಂದಿದೆ. ಜೊತೆಗೆ 24.5 ಬಿಎಚ್‌ಪಿ ಮತ್ತು 32ಎನ್ಎಂ ಟಾರ್ಕ್ ಉತ್ಪಾದಿಸುವ ಶಕ್ತಿ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಅಳವಡಿಕೆ ಇದೆ.

ಈ ಹಿಂದಿನ ಬಿಎಸ್-3 ಆವೃತ್ತಿಯಲ್ಲಿನ ಹಲವು ವಿನ್ಯಾಸಗಳನ್ನು ಹೊಸ ಮಾದರಿಯಲ್ಲೂ ಮುಂದುವರಿಸಲಾಗಿದ್ದು, ಆಪ್-ರೋಡಿಂಗ್ ಪ್ರಿಯರಿಗೆ ಇದು ಹೇಳಿಮಾಡಿಸಿದ ಬೈಕ್.

ಮಾರುಕಟ್ಟೆಗೆ ಲಗ್ಗೆಯಿಟ್ಟ 2017ರ ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ ಬೈಕ್ ಚಿತ್ರಗಳನ್ನು ವೀಕ್ಷಿಸಲು ಕೆಳಗಿನ ಫೋಟೋ ಗ್ಯಾಲರಿ ಕ್ಲಿಕ್ ಮಾಡಿ.

Story first published: Friday, April 7, 2017, 20:04 [IST]
English summary
Royal Enfield Himalayan launched in India. The BS IV compliant Himalayan sports a fuel injected engine.
Please Wait while comments are loading...

Latest Photos