ಅಬ್ಬಾ!! ಗುರ್‌ಗಾಂವ್‌ ಘಟಕದಲ್ಲಿ 3 ದಶಲಕ್ಷ ವಾಹನಗಳ ಉತ್ಪಾದನೆ ಮೈಲಿಗಲ್ಲು ತಲುಪಿದ 'ಸುಜುಕಿ'

Written By:

ಗುರ್‌ಗಾಂವ್‌ ಘಟಕದಲ್ಲಿ ಮೂರು ದಶಲಕ್ಷ ವಾಹನಗಳ ಉತ್ಪಾದನೆಯ ಮೈಲಿಗಳನ್ನು ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಸ್ಎಂಐಪಿಎಲ್) ತಲುಪಿದ ಸಾಧನೆಯನ್ನು ಮಾಡಿದೆ.

ಜಿಕ್ಸಾರ್ ಸರಣಿ ಮತ್ತು ಆಕ್ಸೆಸ್ 125 ಜೊತೆ ಮತ್ತಿತರ ವಾಹನಗಳ ಯಶಸ್ಸಿನ ಪರಿಣಾಮವಾಗಿ ಎಸ್ಎಂಐಪಿಎಲ್ ಮತ್ತು ಅದರ ಅಂಗ ಸಂಸ್ಥೆ ಸುಜುಕಿ ಮೋಟಾರ್ ಕಾರ್ಪೋರೇಶನ್ ಗುರ್‌ಗಾಂವ್‌ ಘಟಕದಲ್ಲಿ ಮೂರು ದಶಲಕ್ಷ ವಾಹನಗಳ ಉತ್ಪಾದನೆಯ ಮೈಲಿಗಲ್ಲನ್ನು ತಲುಪಲು ನೆರವಾಯಿತು ಎಂದು ಕಂಪನಿ ತಿಳಿಸಿದೆ.

ಉತ್ಪಾದನೆ ಜೊತೆಗೆ ನವೀನ ತಂತ್ರಜ್ಞಾನ, ಗುಣಮಟ್ಟ ಮತ್ತು ಉತ್ಪನ್ನದ ಆಧುನಿಕತೆ ಎಲ್ಲವು ಸೇರಿ ಇಷ್ಟು ದೊಡ್ಡ ಮಟ್ಟದ ಯಶಸ್ಸು ಕಾಣಲು ಸಾಧ್ಯವಾಯಿತು ಎನ್ನುವುದನ್ನು ಮರೆಯುವಂತಿಲ್ಲ.

ಉತ್ಪಾದನೆ, ಗುಣಮಟ್ಟ ಜೊತೆಗೆ ಗ್ರಾಹಕರನ್ನು ತಲುಪುವುದೂ ಕೂಡ ಉದ್ಯಮದಲ್ಲಿ ಮುಖ್ಯವಾಗಿದ್ದು, ಈ ಕೆಲಸಕ್ಕೆ ಸುಜುಕಿ ಮೋಟಾರ್ ಸೈಕಲ್ ಮೊದಲಿನಿಂದಲೂ ಪ್ರಾಮುಖ್ಯತೆ ನೀಡುತ್ತಾ ಬಂದಿದೆ.

ಭಾರತ ದೇಶದ ಮೂಲೆ ಮೂಲೆಯಲ್ಲಿ ಹೊಸ ವಿತರಣಾ ವ್ಯವಸ್ಥೆ, ಹೊರದೇಶದ ಮಾರುಕಟ್ಟೆಗೆ ಹೆಚ್ಚಿನ ಪ್ರಾಮುಖ್ಯತೆ, ವಾಹನಗಳು ರಫ್ತು ಹಾಗು ಮತ್ತಿತರ ಮಹತ್ತರ ಅಂಶಗಳನ್ನು ಸುಜುಕಿ ಮೋಟಾರ್ ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದೆ.

ಪ್ರಸ್ತುತ, ಕಂಪನಿಯು ವರ್ಷಕ್ಕೆ 5,40,000 ವಾಹನಗಳನ್ನು ಉತ್ಪಾದಿಸುವಷ್ಟು ಸಾಮರ್ಥ್ಯ ಹೊಂದಿದ್ದು, ತನ್ನ ಕಾರ್ಯದಕ್ಷತೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ಸಲುವಾಗಿ ತನ್ನ ವಾಹನ ಉತ್ಪಾದನೆಯನ್ನು ಹೆಚ್ಚಿಸಲು ಉದ್ದೇಶಿಸಿದೆ.

"ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳುವ ಸಲುವಾಗಿ ನಮ್ಮ ಕಂಪನಿಯ ನೌಕರರು, ವಿತರಕರು ಮತ್ತು ಪೂರೈಕೆದಾರರ ಹೆಚ್ಚಿನ ಮಟ್ಟದಲ್ಲಿ ಶ್ರಮಿಸಿದ್ದು, ಈ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸುತ್ತೇವೆ" ಎಂದು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸತೋಶಿ ಉಚಿದ ತಿಳಿಸಿದರು.

"ನಮ್ಮ ಸಂಸ್ಥೆಯ ವಾಹನಗಳು ಮಾರುಕಟ್ಟೆಯಾದ್ಯಂತ ಗುಣಮಟ್ಟ ಮತ್ತು ಸೇವೆಯ ಮೂಲಕ ತೀವ್ರ ಜನಪ್ರಿಯತೆ ಗಳಿಸಿದ್ದು, ನಾವು ಕಳೆದ ಕೆಲವು ವರ್ಷಗಳಿಂದ ಕ್ಷಿಪ್ರಗತಿಯ ಬೆಳವಣಿಗೆಗೆ ಸಾಕ್ಷಿಯಾಗಿದೆ, ಮಾರುಕಟ್ಟೆಯಲ್ಲಿ ನಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ಭರವಸೆ ಹೊಂದಿದ್ದೇವೆ" ಎಂದು ತಿಳಿಸಿದರು.

Read more on ಸುಜುಕಿ suzuki
English summary
Read in Kannada about Suzuki Motorcycles India rolls out Third millionth vehicle. Get more details about Suzuki Motorcycles India achievements, company plant, successful vehicles and more.
Please Wait while comments are loading...

Latest Photos