ಯುವಕರ ನೆಚ್ಚಿನ ಅಪಾಚಿ RTR 180 ಮತ್ತು 160 ಬೈಕುಗಳು ಭಾರತದಲ್ಲಿ ಬಿಡುಗಡೆ

Written By:

ಟಿವಿಎಸ್ ಮೋಟಾರ್ ಕಂಪೆನಿ ಬಿಎಸ್-IV ಕಂಪ್ಲೇಂಟ್ ಎಂಜಿನ್ ಹೊಂದಿರುವ ಅಪಾಚಿ ಆರ್‌ಟಿಆರ್ 180 ಮತ್ತು ಆರ್‌ಟಿಆರ್ 160 ಬೈಕುಗಳನ್ನು ಬಿಡುಗಡೆಗೊಳಿಸಿದೆ.

ಪರಿಷ್ಕರಿತ ಬಿಎಸ್-IV ಹೊರಸೂಸುವಿಕೆ ಪ್ರಮಾಣ ಹೊಂದಿರುವ ಅಪಾಚಿ ಆರ್‌ಟಿಆರ್ 180 ಮತ್ತು ಆರ್‌ಟಿಆರ್ 160 ಬೈಕುಗಳನ್ನು ಟಿವಿಎಸ್ ಮೋಟಾರ್ ಕಂಪೆನಿ ಅನಾವರಣಗೊಳಿಸಿದೆ.

ಸದ್ಯ ಬಿಡುಗಡೆಗೊಂಡಿರುವ ಯುವಕರ ನೆಚ್ಚಿನ ಈ ಬೈಕ್ ಬಿಎಸ್-IV ಎಂಜಿನ್ ಪಡೆದುಕೊಂಡಿದ್ದು, ಸ್ವಯಂಚಾಲಿತ ಹೆಡ್ ಲ್ಯಾಂಪ್ ಹೊಂದಿದೆ.

ಅಪಾಚಿ ಆರ್‌ಟಿಆರ್ 180

ಅಪಾಚಿ ಆರ್‌ಟಿಆರ್ 180 ಬೈಕ್ 177.4 ಸಿಸಿ ಬಿಎಸ್-IV ಕಂಪ್ಲೇಂಟ್ ಎಂಜಿನ್ 15.5 ಎನ್ಎಂ ತಿರುಗುಬಲದಲ್ಲಿ 17 ಅಶ್ವಶಕ್ತಿ ಉತ್ಪಾದಿಸಲಿದೆ.

 

 

ಟಿವಿಎಸ್ ಕಂಪನಿಯ ಆರ್‌ಟಿಆರ್ 180 ಬೈಕ್ ಬಿಳಿ, ಕಪ್ಪು, ಮ್ಯಾಟ್ ಗ್ರೇ, ಮ್ಯಾಟ್ ನೀಲಿ ಮತ್ತು ಮ್ಯಾಟ್ ಬ್ಲಾಕ್ ಬಣ್ಣಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ. ಟಿವಿಎಸ್ ಕಂಪನಿಯ ಆರ್‌ಟಿಆರ್ 180 ಬೈಕ್ ಡುಯಲ್ ಚಾನೆಲ್ ಎಬಿಎಸ್ ರೂಪಾಂತರದೊಂದಿಗೆ ಬಿಡುಗಡೆಗೊಂಡಿದೆ.

ಅಪಾಚಿ ಆರ್‌ಟಿಆರ್ 160

ಅಪಾಚಿ ಆರ್‌ಟಿಆರ್ 160 ಬೈಕ್ 159.7 ಸಿಸಿ ಬಿಎಸ್-IV ಕಂಪ್ಲೇಂಟ್ ಎಂಜಿನ್ 13.1 ಎನ್ಎಂ ತಿರುಗುಬಲದಲ್ಲಿ 15 ಅಶ್ವಶಕ್ತಿ ಉತ್ಪಾದಿಸಲಿದೆ.

 

 

ಈ ಅಪಾಚಿ ಆರ್‌ಟಿಆರ್ 160 ವೈಟ್, ಬ್ಲಾಕ್, ಗ್ರೇ, ರೆಡ್, ಹಳದಿ ಮತ್ತು ಮ್ಯಾಟ್ ಬ್ಲೂ ಎಂಬ ಬಣ್ಣಗಳಲ್ಲಿ ಗ್ರಾಹಕರಿಗೆ ಪರಿಚಿತವಾಗುತ್ತಿದೆ.

ಹೊಚ್ಚ ಹೊಸ ಅಪಾಚಿ ಆರ್‌ಟಿಆರ್ 160 ಬೈಕಿನ ಬೆಲೆ ರೂ. 75,089 ಸಾವಿರ(ಎಕ್ಸ್ ಷೋ ರೂಂ ದೆಹಲಿ) ಹಾಗು ಅಪಾಚಿ ಆರ್‌ಟಿಆರ್ 180 ಬೈಕಿನ ಬೆಲೆ ರೂ. 80,019 ಸಾವಿರ(ಎಕ್ಸ್ ಷೋ ರೂಂ ದೆಹಲಿ) ನಿಗದಿಪಡಿಸಲಾಗಿದೆ.

ಆರ್‌ಟಿಆರ್ 180 ಮತ್ತು ಆರ್‌ಟಿಆರ್ 160 ಎಂಬ ಎರಡು ಬೈಕುಗಳ ಬಿಡುಗಡೆಯೊಂದಿಗೆ ಟಿವಿಎಸ್ ಕಂಪನಿಯು ತನ್ನ ಎಲ್ಲಾ ಸರಣಿಯಲ್ಲೂ ಸುಪ್ರೀಂ ಕೋರ್ಟ್ ಆದೇಶದಂತೆ ಬಿಎಸ್-IV ಎಂಜಿನ್ ಅಳವಡಿಕೆ ಪೂರ್ಣಗೊಳಿಸಿದೆ ಎನ್ನಬಹುದಾಗಿದೆ.

Read more on ಟಿವಿಎಸ್ tvs
Story first published: Thursday, April 13, 2017, 18:51 [IST]
English summary
Read in Kannada about TVS Apache RTR 180 and 160 with BS-IV engine launched in India. Get more details TVS Apache RTR 180 and 160 bike's price, mileage, specifications and more.
Please Wait while comments are loading...

Latest Photos