ಬಿಡುಗಡೆಗೆ ಸಜ್ಜುಗೊಂಡ ಟಿವಿಎಸ್ ಹೊಚ್ಚ ಹೊಸ ಅಪಾಚಿ ಆರ್‌ಟಿಆರ್ 310?

ಮೊದಲ ಬಾರಿಗೆ ಸ್ಪೋಟ್ಸ್ ಆವೃತ್ತಿಯನ್ನು ಹೊರತರುತ್ತಿರುವ ಟಿವಿಎಸ್ ತನ್ನ ಹೊಚ್ಚ ಹೊಸ ಅಪಾಚಿ ಆರ್‌ಟಿಆರ್ 310 ಬೈಕ್ ಬಿಡುಗಡೆಗಡೆಗೊಳಿಸಲು ಸಜ್ಜುಗೊಳ್ಳುತ್ತಿದ್ದು, ಈ ಮಧ್ಯೆ ಹೊಸ ಆವೃತ್ತಿಯು ಸ್ಟಾಕ್ ಯಾರ್ಡ್‌ನಲ್ಲಿ ಪತ್ತೆಯಾಗಿದೆ.

Written By:

ದೇಶದ ಪ್ರತಿಷ್ಠಿತ ಬೈಕ್ ಉತ್ಪಾದನಾ ಸಂಸ್ಥೆಯಾಗಿರುವ ಟಿವಿಎಸ್, ಮೊದಲ ಬಾರಿಗೆ ಸ್ಪೋರ್ಟ್ಸ್ ಆವೃತ್ತಿಯೊಂದನ್ನು ಹೊರತರುತ್ತಿದ್ದು, ಅಪಾಚಿ ಆರ್‌ಟಿಆರ್ 310 ಬೈಕ್ ಬಿಡುಗಡೆಗೆ ಸಜ್ಜುಗೊಳ್ಳುತ್ತಿದೆ. ಈ ನಡುವೆ  ಬೈಕ್ ಮಾರಾಟಗಾರರ ಸ್ಟಾಕ್ ಯಾರ್ಡ್‌ನಲ್ಲಿ ಪತ್ತೆಯಾಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಅಪಾಚಿ ಆರ್‌ಟಿಆರ್ 310 ಬೈಕ್ ಮಾದರಿಯನ್ನು ಈ ಹಿಂದೆ 2016ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಿದ್ದ ಟಿವಿಎಸ್, ಅಕುಲಾ 310 ಬೈಕ್ ಮಾದರಿಯನ್ನು ಪರಿಚಯ ಮಾಡಿತ್ತು. ಹೀಗಾಗಿ ಸದ್ಯ ಅದೇ ಮಾದರಿ ಬಿಡುಗಡೆಗೆ ಸಜ್ಜುಗೊಳ್ಳುತ್ತಿದ್ದು, ಸ್ಟಾಕ್ ಯಾರ್ಡ್‌ನಲ್ಲಿ ಪತ್ತೆಯಾಗಿದೆ.

ಟಿವಿಎಸ್ ಸರ್ವಿಸ್ ಸ್ಟೇಷನ್‍‌ ಒಂದರಲ್ಲಿ ಹೊಸ ಮಾದರಿಯ ಅಪಾಚಿ ಆರ್‌ಟಿಆರ್ 310 ಬೈಕ್ ಕಾಣಿಸಿಕೊಂಡಿದ್ದು, ಅಂತಿಮ ವಿನ್ಯಾಸವನ್ನು ನೀಡುಲಾಗುತ್ತಿದೆ.

ಟಿವಿಎಸ್ ವಿನೂತನ ಅಪಾಚಿ ಆರ್‌ಟಿಆರ್ 310 ಬೈಕ್ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದ್ದು, ಬೈಕ್ ಪ್ರಿಯರಿಗೆ ಹೊಸ ಬೈಕ್ ವಿನ್ಯಾಸಗಳು ಗಮನಸೆಳೆಯುತ್ತಿವೆ.

ಹೊಸ ತಂತ್ರಜ್ಞಾನಗಳ ಸೌಲಭ್ಯಗಳನ್ನು ಹೊಂದಿರುವ ಅಪಾಚಿ ಆರ್‌ಟಿಆರ್ 310 ಬೈಕ್ ಪ್ರಮುಖವಾಗಿ ಮ್ಯಾಟೆ ಬ್ಲೂ ಬಣ್ಣದ ವಿನ್ಯಾಸ ಹೊಂದಿದೆ. ಜೊತೆಗೆ AHO ವ್ಯವಸ್ಥೆಯನ್ನು ಹೊಂದಿದ್ದು, ಟ್ವಿನ್ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್ ಅಳವಡಿಕೆ ಕೂಡಾ ಇದೆ.

313ಸಿಸಿ ಸಾಮರ್ಥ್ಯ ಹೊಂದಿರುವ ಅಪಾಚಿ ಆರ್‌ಟಿಆರ್ 310 ಬೈಕ್ ವಿನ್ಯಾಸಗಳು ಬಹುತೇಕ ಬಿಎಂಡಬ್ಲ್ಯು ಮೋಟಾರ್ಡ್ಸ್ ಜಿ 310 ಆರ್ ಬೈಕ್‌ ಹೊಲಿಕೆಯನ್ನೇ ಪಡೆದುಕೊಂಡಿದೆ.

ಇನ್ನು ಹೊಸ ಬೈಕಿನಲ್ಲಿ ಕ್ಲಿಪ್ ಆನ್ ಹ್ಯಾಂಡಲ್ ಬಾರ್ಸ್, ಸ್ಪೀಟ್ ಸೀಟ್ಸ್, ಡಿಸ್ಕ್ ಬ್ರೇಕ್ ಮತ್ತು ಎಬಿಎಸ್ ಸೌಲಭ್ಯ ಪಡೆದುಕೊಂಡಿದ್ದು, ಸಾಹಸಿ ಬೈಕ್ ಪ್ರಿಯರನ್ನು ಸೆಳೆಯುವಲ್ಲಿ ಯಾವುದೇ ಸಂದೇಹವಿಲ್ಲ.

ಅಪಾಚಿ ಆರ್‌ಟಿಆರ್ 310 ಬೈಕ್ ಬೆಲೆಗಳ ಕುರಿತು ಇನ್ನು ಯಾವುದೇ ರೀತಿಯ ಅಂತಿಮ ಪಟ್ಟಿ ಸಿದ್ದಗೊಂಡಿಲ್ಲ. ಆದ್ರೆ ಹೊಸ ತಂತ್ರಜ್ಞಾನಗಳ ಸೌಲಭ್ಯ ಹೊಂದಿರುವ ಹೊಸ ಬೈಕಿನ ಬೆಲೆ ರೂ. 1.50 ಲಕ್ಷದಿಂದ 1.80 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳು ನಿಮಗಾಗಿ

Click to compare, buy, and renew Car Insurance online

Buy InsuranceBuy Now

Read more on ಟಿವಿಎಸ್ tvs
Story first published: Monday, April 10, 2017, 11:53 [IST]
English summary
TVS is all set to launch its first fully faired motorcycle, the Aoache RTR 310 in India.
Please Wait while comments are loading...

Latest Photos

LIKE US ON FACEBOOK