ಆರ್‌ಟಿಆರ್ ಬ್ರಾಂಡ್ ಸ್ಥಗಿತ ಸದ್ಯಕ್ಕೆ ಇಲ್ಲ : ಟಿವಿಎಸ್

ಟಿವಿಎಸ್ ಸಂಸ್ಥೆ, ತನ್ನ ಅಪಾಚೆ ಬೈಕಿನ ಬೆಳವಣಿಗೆಯನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದ್ದು, ಯಾವುದೇ ವದಂತಿಗಳಿಗೂ ಕಿವಿಗೊಡಬೇಡಿ ಎಂದಿದೆ.

By Girish

ಟಿವಿಎಸ್ ಮೋಟಾರ್ ಕಂಪನಿ ಅಪಾಚೆ ಆರ್‌ಟಿಆರ್ ಬೈಕ್ ಸರಣಿಯನ್ನು 2006ರಲ್ಲಿ ಆರಂಭಿಸಿತು, ಇಂದು ರಸ್ತೆಯ ಮೇಲೆ ಸರಿ ಸುಮಾರು 2 ಮಿಲಿಯನ್‌ಗಿಂತ ಹೆಚ್ಚು ಅಪಾಚೆ ಬೈಕುಗಳು ಸಂಚರಿಸುತ್ತಿದ್ದು, ಈ ಸಂಖ್ಯೆ ಅಪಾಚೆ ಬೈಕಿನ ಖ್ಯಾತಿಯ ಬಗ್ಗೆ ತಿಳಿಸುತ್ತದೆ ಎನ್ನಬಹುದು.

ಆರ್‌ಟಿಆರ್ ಬ್ರಾಂಡ್ ಸ್ಥಗಿತ ಸದ್ಯಕ್ಕೆ ಇಲ್ಲ : ಟಿವಿಎಸ್

'ಆರ್‌ಟಿಆರ್'ನ ವಿಸ್ತೃತ ರೂಪ 'ರೇಸಿಂಗ್ ಥ್ರೊಟಲ್ ರೆಸ್ಪಾನ್ಸ್' ಎನ್ನುವುದೇ ಆಗಿದ್ದು, ಸದ್ಯ ಅಪಾಚೆ ಸರಣಿಯ 160, 180, 180 ಎಬಿಎಸ್ ಮತ್ತು ಇತ್ತೀಚಿಗೆ ಮಾರುಕಟ್ಟೆಗೆ ಬಿಡುಗಡೆಯಾದ 200 4ವಿ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಆರ್‌ಟಿಆರ್ ಬ್ರಾಂಡ್ ಸ್ಥಗಿತ ಸದ್ಯಕ್ಕೆ ಇಲ್ಲ : ಟಿವಿಎಸ್

ಟಿವಿಎಸ್ ಆರ್‌ಟಿಆರ್' ರೇಸಿಂಗ್ ವಿಭಾಗದಲ್ಲೂ ಬೃಹತ್ ಉಪಸ್ಥಿತಿಯನ್ನು ಹೊಂದಿದೆ ಆದರೆ ಇತ್ತೀಚಿಗೆ ಈ ಯಶಸ್ವಿ ಸರಣಿಯನ್ನು ಸ್ಥಗಿತಗೊಳಿಸಲಿದೆ ಎನ್ನುವ ಊಹಾಪೋಹ ಹರಿದಾಡಿತ್ತು.

ಆರ್‌ಟಿಆರ್ ಬ್ರಾಂಡ್ ಸ್ಥಗಿತ ಸದ್ಯಕ್ಕೆ ಇಲ್ಲ : ಟಿವಿಎಸ್

ಆದರೆ ಈ ವಿಚಾರವನ್ನು ತಳ್ಳಿಹಾಕಿರುವ ಟಿವಿಎಸ್ ಸಂಸ್ಥೆ, ತನ್ನ ಅಪಾಚೆ ಬೈಕಿನ ಬೆಳವಣಿಗೆಯನ್ನು ಮತ್ತಷ್ಟು ವಿಸ್ತರಿಸಲು ಮುಂದಾಗಿದ್ದು, ಯಾವುದೇ ವದಂತಿಗಳಿಗೂ ಕಿವಿಗೊಡಬೇಡಿ ಎಂದಿದೆ.

ಆರ್‌ಟಿಆರ್ ಬ್ರಾಂಡ್ ಸ್ಥಗಿತ ಸದ್ಯಕ್ಕೆ ಇಲ್ಲ : ಟಿವಿಎಸ್

ಟಿವಿಎಸ್ ಮೋಟಾರ್ಸ್ ಕಂಪನಿಯು ಅಪಾಚೆ ಆರ್‌ಟಿಆರ್ ಬ್ರಾಂಡ್ ಜೊತೆ ತನ್ನ ಸ್ವಂತ ಹಾದಿಯಲ್ಲಿ ಮುಂದುವರಿಸಲು ಬಯಸಿದ್ದು, ಮುಂಬರುವ ದಿನಗಳಲ್ಲಿ ಆರ್‌ಟಿಆರ್ ಬ್ರಾಂಡ್ ಅಡಿಯಲ್ಲಿ ಮತ್ತಷ್ಟು ಬೈಕ್ ಹೊರ ತರುವ ಯೋಜನೆ ಹೊಂದಿದೆ.

ಆರ್‌ಟಿಆರ್ ಬ್ರಾಂಡ್ ಸ್ಥಗಿತ ಸದ್ಯಕ್ಕೆ ಇಲ್ಲ : ಟಿವಿಎಸ್

ಟಿವಿಎಸ್ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷರಾದ ಅರುಣ್ ಸಿದ್ಧಾರ್ಥ್ ಸಂದರ್ಶನವೊಂದರಲ್ಲಿ ಈ ವಿಚಾರ ಸ್ಪಷ್ಟಪಡಿಸಿದ್ದು, ಆರ್‌ಟಿಆರ್ ಬ್ರಾಂಡ್ ತನ್ನದೇ ಆದ ಜವಾಬ್ದಾರಿಯನ್ನು ಪಡೆದಿದೆ.

ಆರ್‌ಟಿಆರ್ ಬ್ರಾಂಡ್ ಸ್ಥಗಿತ ಸದ್ಯಕ್ಕೆ ಇಲ್ಲ : ಟಿವಿಎಸ್

ಚೆನ್ನೈ ಮೂಲದ ಕಂಪನಿ ತನ್ನ ಅಪಾಚೆ ಆರ್‌ಟಿಆರ್ ಬ್ರಾಂಡ್ ಜನಪ್ರಿಯತೆಯನ್ನು ಹೆಚ್ಚಿಸುವುದರ ಜೊತೆಗೆ ಇನ್ನು ಹೆಚ್ಚು ಬ್ರಾಂಡ್ ಬೈಕುಗಳನ್ನು ಬಿಡುಗಡೆಗೊಳಿಸಲು ಯೋಜನೆ ರೂಪಿಸಿದೆ.

ಆರ್‌ಟಿಆರ್ ಬ್ರಾಂಡ್ ಸ್ಥಗಿತ ಸದ್ಯಕ್ಕೆ ಇಲ್ಲ : ಟಿವಿಎಸ್

ಬ್ರಾಂಡ್ ಮೌಲ್ಯ ಉತ್ಪನ್ನಕ್ಕಿಂತಲೂ ದೊಡ್ಡದಾಗಿದ್ದು, ಇದನ್ನು ನಿಲ್ಲಿಸುವ ಯಾವುದೇ ಪ್ರೆಶ್ನೆ ನಮ್ಮ ಮುಂದೆ ಇಲ್ಲ ಎಂದು ಸಂಸ್ಥೆ ಸ್ಪಷ್ಟ ಪಡಿಸಿದೆ.

ಆರ್‌ಟಿಆರ್ ಬ್ರಾಂಡ್ ಸ್ಥಗಿತ ಸದ್ಯಕ್ಕೆ ಇಲ್ಲ : ಟಿವಿಎಸ್

ಈ ಬ್ರಾಂಡ್ ಬೈಕುಗಳ ಮಾಸಿಕ ಸರಾಸರಿ ಮಾರಾಟವು 32,900ರಷ್ಟು ಇದ್ದು, ಕಳೆದ ಆರ್ಥಿಕ ವರ್ಷದಲ್ಲಿ 20 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಸಂಸ್ಥೆ ದೃಢಪಡಿಸಿದೆ.

Most Read Articles

Kannada
Read more on ಟಿವಿಎಸ್
English summary
Read in Kannada about TVS Motors Company wants to continue Apache RTR brand on its own path. Know more about RTR and more.
Story first published: Tuesday, June 6, 2017, 18:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X