ಅಪನಗದೀಕರಣ ಅವಧಿಯಲ್ಲೂ ಜಗ್ಗದ ಟಿವಿಎಸ್- ಹೀರೋ ಹಿಂದಿಕ್ಕಿ 2ನೇ ಸ್ಥಾನಕ್ಕೆ ಜಿಗಿತ. .!!

Written By:

ಕಳೆದೊಂದು ವರ್ಷದಿಂದ ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟಗೊಳ್ಳುತ್ತಿರುವ ಟಿವಿಎಸ್ ಮೋಟಾರ್ ಉತ್ಪನ್ನಗಳು ಗ್ರಾಹಕರ ಮನಗೆದ್ದಿದ್ದು, ಹೀರೋ ಉತ್ಪನ್ನಗಳನ್ನು ಹಿಂದಿಕ್ಕಿದೆ. 2ನೇ ಸ್ಥಾನದಲ್ಲಿದ್ದ ಹೀರೋ ಸ್ಥಾನವನ್ನು ತನ್ನದಾಗಿಸಿಕೊಂಡಿರುವ ಟಿವಿಎಸ್, ಹೋಂಡಾ ಮಾರಾಟಕ್ಕೂ ತೀವ್ರ ಸ್ಪರ್ಧೆ ಒಡ್ಡಿದೆ.

ಬಿಸಿನೆಸ್ ಲೈನ್ ವರದಿ ಪ್ರಕಾರ ಹೀರೋ ಮೋಟೋ ಒಂದು ವರ್ಷದ ಅವಧಿಯಲ್ಲಿ 2,35,465 ಘಟಕಗಳನ್ನು ಉತ್ಪಾದಿಸಿತ್ತು. ಆದ್ರೆ ಶೇಕಡಾ 49ರಷ್ಟು ಮಾತ್ರ ಮಾರಾಟ ಮಾಡಲು ಶಕ್ತವಾಗಿದ್ದ ಹೀರೋ ಸಂಸ್ಥೆ 1,21,144
ಘಟಕಗಳನ್ನು ಮಾರಾಟ ಮಾಡಿತ್ತು. ಆದರೆ ಇದೇ ಅವಧಿಯಲ್ಲಿ 1,94,055 ಘಟಕಗಳನ್ನು ಉತ್ಪಾದಿಸಿದ್ದ ಟಿವಿಎಸ್, 1,88,609 ಘಟಕಗಳನ್ನು ಮಾರಾಟ ಮಾಡಿ ತನ್ನ ತನ್ನ ನೀರಿಕ್ಷೆಯನ್ನು ಇಮ್ಮುಡಿಗೊಳಿಸಿದೆ.

ಇನ್ನೊಂದು ಪ್ರಮುಖ ವಿಚಾರವನ್ನು ತಿಳಿಯುವುದಾದರೇ ಕಳೆದ ಆರ್ಥಿಕ ವರ್ಷದ ಅವಧಿಯಲ್ಲಿ ತನ್ನ ಉತ್ಪನ್ನಗಳನ್ನು ಗರಿಷ್ಠ ಪ್ರಮಾಣದಲ್ಲಿ ಮಾರಾಟಗೊಳಿಸಿದ್ದ ಟಿವಿಎಸ್, 6,77,172 ಘಟಕಗಳನ್ನು ಮಾರಾಟ ಮಾಡಿತ್ತು. ಇದೇ ಅವಧಿಯಲ್ಲಿ 6,58,255 ಘಟಕಗಳನ್ನು ಮಾರಾಟ ಮಾಡಿದ್ದ ಹೀರೋ, ಟಿವಿಎಸ್ ಮೋಟಾರ್‌ಗಿಂತ ಹಿಂದೆ ಬಿದ್ದಿತ್ತು.

ಈ ಬಗ್ಗೆ ಮಾತನಾಡಿರುವ ಟಿವಿಎಸ್ ಮೋಟಾರ್ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷ ಅನಿರುದ್ಧ ಹಲ್ದಾರ್, "ಅಪನಗದೀಕರಣ ಅವಧಿಯಲ್ಲೂ ನಮ್ಮ ಉತ್ಪನ್ನಗಳ ಮಾರಾಟ ಜೋರಾಗಿಯೇ ನಡೆದಿದೆ. ಇದಕ್ಕೆ ಪ್ರಮುಖ ಕಾರಣ ನಗರ ಮತ್ತು ಗ್ರಾಮೀಣ ಭಾಗದ ಜನತೆಯನ್ನು ಸೆಳೆಯುವಲ್ಲಿ ನಾವು ಕೈಕೊಂಡ ಕ್ರಮಗಳು ಯಶಸ್ವಿಯಾಗಿವೆ. ಮತ್ತು ಗ್ರಾಹಕರಿಗೆ ಹೆಚ್ಚಿನ ಸೌಲಭ್ಯಗಳನ್ನ ನೀಡಿದ ಹಿನ್ನೆಲೆಯಲ್ಲಿ ನಮ್ಮ ನೀರಿಕ್ಷೆಯನ್ನು ತಲುಪಲು ಸಾಧ್ಯವಾಯಿತು" ಎಂದಿದ್ದಾರೆ.

ಇನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಆದ ದೊಡ್ಡ ನೋಟಿನ ಅಪನಗದೀಕರಣ ವೇಳೆ ವಾಹನಗಳ ಮಾರಾಟ ಮೇಲೆ ಭಾರೀ ಋಣಾತ್ಮಕ ಪರಿಣಾಮ ಬೀರಿತ್ತು. ಆದರೂ ಈ ಅವಧಿಯಲ್ಲಿ ದೃತಿಗೆಡದ ಟಿವಿಎಸ್ ಮೋಟಾರ್, ಆರೋಗ್ಯಕರ ಸವಾಲು ಸ್ಪೀಕರಿಸಿ ಸ್ಟಾಕ್ ಆರಂಭಿಸಿತ್ತು. ನಂತರ ಹೊಸ ವರ್ಷದ ಮೊದಲ ತಿಂಗಳಲ್ಲಿ ಮಾರಾಟ ತಂತ್ರದಲ್ಲಿ ಬದಲಾವಣೆ ತರುವ ಮೂಲಕ ಹೀರೋ ಮೋಟೋ ಮಾರಾಟದ ಪ್ರಮಾಣವನ್ನೇ ಹಿಂದಿಕ್ಕಿದೆ.

ಇದೇ ವೇಳೆ ಅಪನಗದೀಕರಣಕ್ಕೆ ತತ್ತರಿಸಿದ ಹೀರೋ ಮೋಟೋ, ತದನಂತರ ಚೇತರಿಕೆ ಕಾಣಲು ಸಾಕಷ್ಟು ಶ್ರಮವಹಿಸಬೇಕಾಯಿತು. ಹೀಗಾಗಿ 5ನೇ ತ್ರೈಮಾಸಿಕ ನಂತರ ಪ್ರತಿಶತ 14ರಷ್ಟು ಪಾಲನ್ನು ಮಾತ್ರ ತನ್ನದಾಗಿಸಿಕೊಳ್ಳಲು ಸಾಧ್ಯವಾಯಿತು.

ಈ ನಡುವೆ ಮೊನ್ನೆಯಷ್ಟೇ ಬಿಡುಗಡೆಗೊಂಡಿರುವ ಟಿವಿಎಸ್ ಬಿಎಸ್-IV ಎಂಜಿನ್ ಹೊಂದಿರುವ ವಿಗೋ ಸ್ಕೂಟರ್ ಗ್ರಾಹಕರ ಮನಸೆಳೆಯುತ್ತಿದೆ. ಕೇವಲ ಎರಡು ಬಣ್ಣಗಳಲ್ಲಿ ಬಿಡುಗಡೆಯಾಗಿರುವ ವಿಗೋ ಮುಂಬರುವ ದಿನಗಳಲ್ಲಿ ಪ್ರಮುಖ ಬಣ್ಣಗಳಲ್ಲಿ ಲಭ್ಯವಿರಲಿದ್ದು, ಈಗಾಗಲೇ ಭಾರೀ ಬೇಡಿಕೆ ಹುಟ್ಟುಹಾಕಿದೆ.

ಒಟ್ಟಿನಲ್ಲಿ ಹೀರೋ ಉತ್ಪನ್ನಗಳನ್ನು ಹಿಂದಿಕ್ಕಿ ಭರ್ಜರಿ ದಾಖಲೆ ನಿರ್ಮಿಸುತ್ತಿರುವ ಟಿವಿಎಸ್ ಮೋಟಾರ್, ಈ ಬಾರಿ ಹೋಂಡಾ ಉತ್ಪನ್ನಗಳಿಗೂ ತೀವ್ರ ಸ್ಪರ್ಧೆ ಒಡ್ಡುವ ನೀರಿಕ್ಷೆಯಿದೆ.

ಬಿಡುಗಡೆಗೊಂಡಿರುವ ಹೊಚ್ಚ ಹೊಸ ಎಸ್‍ಆರ್ 150 ಎಪ್ರಿಲಿಯಾ ರೇಸ್ ಸ್ಕೂಟರ್ ಚಿತ್ರಗಳ ವೀಕ್ಷಣೆಗೆ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Click to compare, buy, and renew Car Insurance online

Buy InsuranceBuy Now

Read more on ಟಿವಿಎಸ್ tvs
Story first published: Thursday, February 23, 2017, 16:08 [IST]
English summary
Hero MotoCorp's sales nearly halved, while TVS Motor volumes sustained even after the ban on high-value currencies in India and overtook Hero to become the second largest scooter manufacturer in India.
Please Wait while comments are loading...

Latest Photos