ಹಿಯರ್#ವೀ ಗೋ: ಬೆಂಗಳೂರಿನಲ್ಲಿ ರಾತ್ರಿಯ ಹೊರಸಂಚಾರ ಹಾಗೂ ಹೊಸ ವರ್ಷದ ಸಂಭ್ರಮಾಚರಣೆ

Written by: Super Admin

ಕೊಚಿನ್ ನಲ್ಲಿ ನಾವು ಮಾಡಿದ ಸಾಹಸಗಾಥೆಗಳ ನೆನಪುಗಳಿನ್ನೂ ಮನಸ್ಸಿನಲ್ಲಿ ಹಸಿಯಾಗಿರುವಾಗಲೇ ನಾವು ನಮಗೆ ಚಿರಪರಿಚಿತವಾದ ನಗರವೊಂದರ , ಸ್ಪಷ್ಟ ಅರಿವಿದ್ದರೂ ಸ್ಮೃತಿಪಟಲಕ್ಕೆ ಅಜ್ಞಾತವಾಗಿರುವ ಬೀದಿಗಳಲ್ಲಿ ಸಂಚರಿಸುವ ಮತ್ತೊಂದು ಸಾಹಸಕ್ಕೆ ಅಣಿಯಾಗಿದ್ದೆವು. ಬೆಂಗಳೂರಿಗೆ ಸುಸ್ವಾಗತ. ಮಾಹಿತಿ ತಂತ್ರಜ್ಞಾನದ ಸ್ವರ್ಗ, ದೇಶದ ಪಬ್ ಸಂಸ್ಕೃತಿಯ ರಾಜಧಾನಿ, ಖರೀದಿಗಾಗಲೀ, ಹಸಿವು ತಣಿಸುವ ತಾಣಗಳಿಗಾಗಲೀ ಯಾವುದೇ ಕುಂದು-ಕೊರತೆಯಿಲ್ಲದ ಊರು ಬೆಂಗಳೂರು. ಹಾಗೆಯೇ, ಡ್ರೈವ್ ಸ್ಪಾರ್ಕ್ ಗೂ ನೆಚ್ಚಿನ ತವರು.

ಬೇಡಿದ್ದನ್ನು ನೀಡುವ ಕಾಮಧೇನುವಿನಂಥ ಈ ನಗರ ಹೊಸ ವರ್ಷದ ಹೊಸ್ತಿಲಲ್ಲಿ ತನ್ನೊಡಲಲ್ಲಿ ಅದೇನನ್ನು ಬಚ್ಚಿಟ್ಟುಕೊಂಡಿದೆಯೊ ಎಂಬ ಕುತೂಹಲ ನನ್ನನ್ನು ಕಾಡದಿರಲಿಲ್ಲ. ಅದನ್ನರಿಯಲು ರಾತ್ರಿ ವೇಳೆ ಸುತ್ತುಹಾಕಲು ನಿರ್ಧರಿಸಿದ್ದ ನಾವು ನಮ್ಮ ಪಯಣದ ಸಂಗಾತಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದು # ವೆಗೋ ವನ್ನು.

ನಮಗೆ ತಿಳಿದಿರುವಂತೆ, ಈ ಬೆಂಗಳೂರು ಮಹಾನಗರವು 1500ರ ಮಧ್ಯಭಾಗದಲ್ಲಿ ನಿರ್ಮಾಣವಾಯಿತು. ವಿಜಯ ನಗರ ಸಾಮ್ರಾಜ್ಯದ ಅರಸರಿಗೆ ಸಾಮಂತ ರಾಜನಾಗಿದ್ದ 1ನೇ ಕೆಂಪೇಗೌಡ ಈ ನಗರವನ್ನು ನಿರ್ಮಾಣ ಮಾಡಿದ. ಇಲ್ಲಿಯೇ ತನ್ನ ವಾಸ್ತವ್ಯಕ್ಕಾಗಿ ಆತ 1537ರಲ್ಲಿ ಮಣ್ಣಿನ ಇಟ್ಟಿಗೆಗಳಿಂದ ಕಟ್ಟಲಾದ ಅರಮನೆಯನ್ನು ನಿರ್ಮಿಸಿದ. ಇದೇ ಇಂದು ಈ ಬೆಂಗಳೂರು ನಗರದ ಕೇಂದ್ರಬಿಂದುವಾಗಿದೆ.

ಶಿಥಿಲಗೊಂಡಿರುವ ಕೆಂಪೇಗೌಡನ ಈ ವಾಸಸ್ಥಾನ ಸೇರಿದಂತೆ, ಟಿಪ್ಪೂ ಸುಲ್ತಾನನ ಬೇಸಿಗೆ ಅರಮನೆಯು, ಕ್ಷಿಪ್ರವಾಗಿ ಬೆಳೆಯುತ್ತಿರುವ ಈ ಮಹಾನಗರಿಯಲ್ಲಿ ಗತವೈಭವದ ಮೂಕ ಸಾಕ್ಷಿಗಳಂತಿವೆ. ಕೆಂಪೇಗೌಡ ಅಥವಾ ಟಿಪ್ಪು ಸುಲ್ತಾನ ಈಗ ಈ ನಗರಕ್ಕೆ ಭೇಟಿ ನೀಡಿದರೆ ಬೆಂಗಳೂರು ಬದಲಾಗಿರುವ ಪರಿಯನ್ನು ಕಂಡು ಚಕಿತಗೊಳ್ಳುವುದಂತೂ ಖಂಡಿತ.

ಬೆಂಗಳೂರಿನ ಮತ್ತೊಂದು ಖ್ಯಾತಿವೆತ್ತ ಸ್ಥಳವೆಂದರೆ ಅದು ಬೆಂಗಳೂರು ಅರಮನೆ. ಮಹಾನಗರಿಯ ಈ ಆಧುನಿಕ ಬದುಕಿನಲ್ಲೂ ನಗರದ ಅವಿಭಾಜ್ಯ ಅಂಗವಾಗಿರುವ ಈ ಅರಮನೆ 1944ರಲ್ಲಿ ನಿರ್ಮಾಣವಾದಾಗ ತಾನು ಹೊಂದಿದ್ದ ಕಳೆಯನ್ನೇ ಇಂದಿಗೂ ಹೊಂದಿರುವುದು ವಿಶೇಷ.

ಇದೇ ಅರಮನೆಯು 2007ರಲ್ಲಿ ಬೆಂಗಳೂರು ಹಿಂದೆಂದೂ ಕಂಡಿರದ ಸಂಗೀತ ರಸದೌತಣದ ಆತಿಥ್ಯ ವಹಿಸಿತ್ತು. ಬ್ರಿಟನ್ ನ ಐರನ್ ಮೇಯ್ಡನ್ ತಂಡವು ಈ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದು ಇಲ್ಲಿನ ಸ್ಮರಣೀಯ ಕಾರ್ಯಕ್ರಮ.

ಈ ರಾಜಧಾನಿ ನಗರದ ನಗರೀಕರು, ತಮ್ಮ ಕಾರ್ಯಕಲಾಪಗಳಿಗಾಗಿ ನಗರದ ಉದ್ದಗಲಕ್ಕೂ ಹರಡಿಕೊಂಡಿರುವ ರಸ್ತೆಗಳಲ್ಲಿ ತಮ್ಮ ವಾಹನಗಳ ಮೇಲೆ ಅಡ್ಡಾಡುತ್ತಾರೆ. ವಾಹನಗಳ ದಟ್ಟಣೆಯಿಂದ ಕೂಡಿರುವ ಈ ರಸ್ತೆಗಳಲ್ಲಿ ದಿನಂಪ್ರತಿ ತಮ್ಮ ಕೆಲಸಗಳಿಗಾಗಿ ಜನರು ಓಡಾಡುವುದು ಇಲ್ಲಿ ನಿತ್ಯದರ್ಶನ.

ಇಂಥ ವಾಹನ ದಟ್ಟಣೆಗಳಿಂದಾಗುವ ಟ್ರಾಫಿಕ್ ಜಾಮ್ ಕಿರಿಕಿರಿಯು ಟಿವಿಎಸ್ ವೆಗೋಗೆ ಒಂದಿನಿತೂ ತಟ್ಟದು. ಎಂಥದ್ದೇ ದಟ್ಟಣೆಯಿರಲಿ ಸುಲಭವಾಗಿ ಸಾಗುವ, ವಾಹನಗಳ ನಡುವಿನ ಕಿಷ್ಕಿಂಧೆಯಂಥ ಜಾಗದಲ್ಲೂ ನುಸುಳುವ ಇದರ ಛಾತಿ ಇದಕ್ಕೇ ಸಾಟಿ. ಇದಕ್ಕಾಗಿ ಇದರಲ್ಲಿ ಕಾರ್ಯ ನಿರ್ವಹಿಸುವ ವಿಶಿಷ್ಠವಾದ ಪೆಗ್ಗಿ ಇಂಜಿನ್ ಗೆ ಧನ್ಯವಾದ ಹೇಳಲೇಬೇಕು.

2016ರ ವರ್ಷವು ಮುಗಿಯಲು ಇನ್ನೊಂದೇ ದಿನ ಬಾಕಿಯಿರುವಾಗ ಡ್ರೈವ್ ಸ್ಪಾರ್ಕ್ ತಂಡವು, ಈ ನಗರದ ಪ್ರದಕ್ಷಿಣೆಗೆ ಸಿದ್ಧವಾಯಿತು. ನಿರಾತಂಕವಾಗಿ ಈ ಮಹಾನಗರಿಯಲ್ಲಿ ಸುತ್ತಾಡಿ, ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧವಾಗಿರುವ ಜಾಲಗಳನ್ನು ಜಾಲಾಡಿ, ಅಂತಿಮವಾಗಿ, ನೂತನ ವರ್ಷಾಚರಣೆಗೆ ನಿಗದಿಯಾಗಿದ್ದ ಜಾಗಕ್ಕೆ ಆಗಮಿಸಲು ನಿರ್ಧರಿಸಲಾಯಿತು.

ಹಾಗೆ ಆರಂಭಗೊಂಡ ನಮ್ಮ ಪಯಣದಲ್ಲಿ ನಾವು ಭೇಟಿ ನೀಡಲು ಉದ್ದೇಶಿಸಿದ್ದ ಮೊದಲ ಜಾಗ ಸೆಂಟ್ರಲ್ ಮಾಲ್. ಯಾವಾಗಲೂ ಯುವ ಜನರಿಂದ ತುಂಬಿ ತುಳುಕುವ, ಆ ಮೂಲಕ ಆಧುನಿಕ ಬೆಂಗಳೂರನ್ನು ವ್ಯಾಖ್ಯಾನಿಸುವ ಈ ಮಾಲ್ ಗೆ ಆಗಮಿಸಿದ ಟಿವಿಎಸ್ ವೆಗೋ ವಾಹನ ಅರೆಕ್ಷಣದಲ್ಲೇ ಎಲ್ಲರ ಕಣ್ಣುಕುಕ್ಕಿತು. ಇದರ ಆಕರ್ಷಣೀಯ ಬಣ್ಣಗಳಿಗೆ ಒಂದು ಧನ್ಯವಾದ ಹೇಳಲೇಬೇಕೆನಿಸಿತು.

ಅದಾದ ನಂತರ, ನಮ್ಮ ಪಯಣ ಸಾಗಿದ್ದು ಜನರಿಂದ ಕಿಕ್ಕಿರಿದಿರುವ ಕಮರ್ಷಿಯಲ್ ಸ್ಟ್ರೀಟ್ ಕಡೆಗೆ. ಅಡಿಗಡಿಗೂ ಅಡೆತಡೆಗಳು, ಅಡ್ಡಲಾಗಿ ಬರುವ ಜನ, ವಾಹನಗಳು, ನಿಂತು, ನಿಂತು ಸಾಗುವ, ನಮ್ಮ ಚಾಲನಾ ಕಲೆಗೆ ಸವಾಲಾಗಿರುವ ಈ ರಸ್ತೆಯಲ್ಲಿ ನಿಜಕ್ಕೂ ನಮಗೆ ನೆರವಾಗಿದ್ದು ಟಿವಿಎಸ್ ವೆಗೋದಲ್ಲಿರುವ ನಿಖರವಾದ ಬ್ರೇಕಿಂಗ್ ವ್ಯವಸ್ಥೆ

ಟಿವಿಎಸ್ ವೆಗೋ ಮೇಲೆ ಕುಳಿತು ಹೀಗೇ ಮೈಲಿಗಟ್ಟಲೆ ಸುತ್ತಾಡಿದ ನಂತರ ಹತ್ತಾರು ಶಾಪಿಂಗ್ ಮಾಲ್ ಗಳನ್ನು ಹತ್ತಿಳಿಯುವ ಮೂಲಕ ನಮ್ಮಲ್ಲಿದ್ದ ಶಾಪಿಂಗ್ ದಾಹ ಕ್ರಮೇಣ ತಣಿಯುತ್ತಾ ಸಾಗಿತು.

ಆದರೆ, ಈ ಸುದೀರ್ಘ ಪಯಣವನ್ನು ಹಿತಕರವಾಗಿಸಿದ್ದು ಟಿವಿಎಸ್ ವೆಗೋದಲ್ಲಿರುವ ಬಾಡಿ ಬ್ಯಾಲನ್ಸ್ ತಂತ್ರಜ್ಞಾನ. ವಾಹನದ ಮುಂಭಾಗದಲ್ಲಿರುವ ಹೆವಿ ಡ್ಯೂಟಿ ಟೆಲಿಸ್ಕೋಪಿಕ್ ಸಸ್ಪೆಷ್ಷನ್ ಹಾಗೂ ನೈಟ್ರೋಜೆನ್ ಚಾರ್ಜಿಂಗ್ ಆಧಾರಿತ ಹಿಂಬದಿಯ ಮೋನೋ ಶಾಕ್ ಪರಿಕರವು ರಸ್ತೆಗಳಲ್ಲಿನ ಉಬ್ಬು ತಗ್ಗುಗಳ ಪರಿಣಾಮಗಳು ಸವಾರನಿಗೆ ಉಂಟು ಮಾಡುವ ಕಿರಿಕಿರಿಯನ್ನು ತಪ್ಪಿಸುತ್ತವೆ.

ಅಂತಿಮವಾಗಿ, ನಮ್ಮ ಪಯಣದ ಅಂತಿಮ ನಿಲ್ದಾಣವಾಗಿ ಆರಿಸಿಕೊಂಡಿದ್ದ ಬ್ರಿಗೇಡ್ ರೋಡಿಗೆ ನಾವು ಬಂದಿಳಿದೆವು. ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದ ಈ ಬೀದಿಯು ಪ್ರತಿವರ್ಷದ ಕೊನೆಯ ದಿನದಂತೆ ಈ ಬಾರಿಯೂ ನವವಧುವಿನಂತೆ ವೈಭವಯುತವಾಗಿ ಅಲಂಕೃತಗೊಂಡಿತ್ತು. ಈ ರಸ್ತೆ ಸಿಂಗಾರವನ್ನು ನೋಡಲು ಸೇರಿದ್ದ ಜನಸ್ತೋಮವನ್ನು ನೋಡಿದರೆ, ಇಡೀ ಬೆಂಗಳೂರು ನಗರವೇ ಇಲ್ಲಿ ಜಮಾಯಿಸಿದಂತಿತ್ತು.

ಈ ವೈಭವಯುತ ಬೀದಿಯಿಂದಲೇ ನಗರದ ಉಳಿದೆಲ್ಲಾ ಬೀದಿಗಳೂ ಟಿಸಿಲೊಡೆದಿವೆ ಎಂಬಂತೆ ಭಾಸವಾಗುತ್ತಿತ್ತು. ಇದಕ್ಕೆ ಕಾರಣ, ವೈಭವಯುತವಾಗಿ ಇಲ್ಲಿ ಅಲಂಕೃತಗೊಂಡಿದ್ದ ಶಾಪ್ ಗಳು, ರೆಸ್ಟೋರೆಂಟ್ ಗಳು, ಪಬ್ ಗಳು. ಹಗಲು ಮುಗಿಯುತ್ತಾ ಬಂದಂತೆ ನಾವು ನಮ್ಮ ಖರೀದಿಗಳನ್ನು ಒಪ್ಪವಾಗಿ ಜೋಡಿಸಿಟ್ಟುಕೊಂಡ ನಾವು, ಸಂಭ್ರಮದ, ಮೆರುಗಿನ ಹೊಸ ವರ್ಷಾಚರಣೆಯಲ್ಲಿ ವಿದ್ಯುಕ್ತವಾಗಿ ಪಾಲ್ಗೊಳ್ಳಲು ಸಜ್ಜಾದೆವು.

Read more on ಟಿವಿಎಸ್ tvs
English summary
Exploring the charms and delights of Bangalore as the year comes to an end on a TVS Wego. Here #Wego exploring Bangalore on New Year's Eve.
Please Wait while comments are loading...

Latest Photos