ಹಿಯರ್ #ವೀಗೋ: ಅಮೋಘ ಶೈಲಿಯಲ್ಲಿ ಬೆಂಗಳೂರಲ್ಲಿ ಹೊಸ ವರ್ಷದ ಸಂಭ್ರಮಾಚರಣೆ

Written by: Super Admin

ಹೀಗೆ, ಬೆಂಗಳೂರಿನಲ್ಲಿ ಮೊದಲ ಬಾರಿಗೆ ಟಿವಿಎಸ್ ವೆಗೋ ಮೇಲೆ ಸುತ್ತಾಡಿದ್ದೂ ಸಂಭ್ರಮ ಎಂದೆನಿಸಿದ್ದಂತೂ ಸುಳ್ಳಲ್ಲ. 2016ರ ಅಂತಿಮ ದಿನದ ಸಂಜೆ ಸೂರ್ಯನು ತನ್ನ ಪಡುವಣದ ಮನೆಯ ಕಡೆಗೆ ಹೆಜ್ಜೆ ಹಾಕುತ್ತಿದ್ದರೆ, ಇತ್ತ ನಾವು ಅಂದು ಮಧ್ಯರಾತ್ರಿ ಹೊಸ ವರ್ಷವನ್ನು ಸ್ವಾಗತಿಸುವತ್ತ ಹೆಜ್ಜೆ ಹಾಕಿದ್ದೆವು.

ಬೆಂಗಳೂರಿನಲ್ಲೇ ಹುಟ್ಟಿಬೆಳೆದು ಈಗ ಇಲ್ಲೇ ಉದ್ಯೋಗ ನಿರತರಾಗಿರುವ ಕೆಲವಾರು ಸ್ನೇಹಿತರೊಂದಿಗೆ ರಾತ್ರಿಯೂಟದ ಜತೆ ಕೊಂಚ ಹರಟೆ ಹೊಡೆದ ನಂತರ, ವೆಗೋ ತಂಡವು ಸ್ಮಾಲೀಸ್ ಎಂಬ ರಂಜನೀಯ ತಾಣಕ್ಕೆ ಸಾಗಲು ಸಜ್ಜಾಯಿತು. ಇದೊಂದು ಪುಟ್ಟದಾದ, ಆದರೆ ಸುಸಜ್ಜಿತವಾದ ಭಾರತೀಯ ರೆಸ್ಟೋರೆಂಟ್ ನ ಶಾಖೆ. ಅಲ್ಲಿ ಕೆಲವಾರು ತಿನಿಸುಗಳನ್ನು ಸವಿದ ಬಳಿಕ ಪುನಃ ಟಿವಿಎಸ್ ವೆಗೋದಲ್ಲಿ ನಮ್ಮ ನೂತನ ವರ್ಷಾಚರಣೆಗೆ ಸಿದ್ಧವಾಗಿರುವ ಜಾಗಗಳಿಗೆ ಭೇಟಿ ನೀಡುವ ನಗರ ಪ್ರದಕ್ಷಿಣೆಯನ್ನು ಮುಂದುವರಿಸಲು ನಿರ್ಧರಿಸಿದ್ದೆವು.

ನಮ್ಮ ಹಸಿದ ಹೊಟ್ಟೆಗಳನ್ನು ತಣಿಸಿದ ಬಳಿಕ, ನಮ್ಮ ವೆಗೋ ಹೊಟ್ಟೆಗೂ ಒಂದಿಷ್ಟು ಇಂಧನ ಸುರಿದು ಬೆಂಗಳೂರಿನ ನಟ್ಟ ನಡುರಾತ್ರಿಯಲ್ಲಿ ಪ್ರಜ್ವಲಿಸುತ್ತಿರುವ ಬೀದಿ ದೀಪದ ಬೆಳಕು ಚೆಲ್ಲಿದ ರಸ್ತೆಗಳ ಮೇಲೆ ಪಯಣ ಮುಂದುವರಿಸಿದೆವು. ಇಂಧನ ಕೇಂದ್ರಗಳಲ್ಲಿ ವೆಗೋಗೆ ಇಂಧನ ತುಂಬಿಸುವುದೂ ಒಂದು ಖುಷಿ. ವಾಹನದ ಹಿಂಬದಿಯಲ್ಲಿ ಫ್ಯೂಯೆಲ್ ಟ್ಯಾಂಕ್ ಮುಚ್ಚಳವಿರುವುದರಿಂದ ಸೀಟಿನಿಂದ ಕೆಳಗಿಳೆಯದೇ ವಾಹನಕ್ಕೆ ಇಂಧನ ತುಂಬಿಸಿಕೊಳ್ಳುವುದು ಒಂದು ಸಮಾಧಾೃನಕರ ಸಂಗತಿ.

ಹೇಳಿಕೇಳಿ, ಪಬ್ ರಾಜಧಾನಿಯಾಗಿರುವ ಬೆಂಗಳೂರಿನ ಕೆಲವಾರು ಮೋಜಿನ ರಸ್ತೆಗಳನ್ನು ದಾಟಿ, ಗೆಳೆಯರ ಜತೆಗೆ ಒಂದಿಷ್ಟು ಮದ್ಯದ ರುಚಿ ನೋಡಿದ ವೆಗೋ ತಂಡ, ನೂತನ ವರ್ಷಾಚರಣೆಗಾಗಿ ಜಮಾಯಿಸಿದ್ದ ಜನಸಾಗರವನ್ನು ಸೇರಲು ಸಜ್ಜಾದೆವು.

ಇದೇ ವೇಳೆ, ಅನೇಕ ಜನರು ಇನ್ನೂ ಚರ್ಚುಗಳಿಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿ ಗೋಚರಿಸಿತು. ಕ್ರಿಸ್ಮಸ್ ಮನಸ್ಥಿತಿಯಿಂದ ಅವರಿನ್ನೂ ಹೊರಬಂದಿಲ್ಲವೆನಿಸಿತು.

ನಮ್ಮ ಪಯಣದ ಮುಂದಿನ ಭಾಗವಾಗಿ, ನಮ್ಮ ತಂಡ ಬೆಂಗಳೂರಿನ ಪಬ್ ಸಂಸ್ಕೃತಿ ಕೇಂದ್ರವಾದ ಚರ್ಚ್ ಸ್ಟ್ರೀಟ್ ಗೆ ಕಾಲಿಡಲು ನಿರ್ಧರಿಸಿತು. ಆ ಕಿರಿದಾದ ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ವಾಹನಗಳು, ಅಡ್ಡಲಾಗಿ ಓಲಾಡುತ್ತಾ ಬರುತ್ತಿದ್ದ ಜನರನ್ನು ತಪ್ಪಿಸಿಕೊಂಡು ಸಾಗುವಲ್ಲಿ ಟಿವಿಎಸ್ ವೆಗೋದಲ್ಲಿನ ಅತ್ಯುತ್ತಮ ತಂತ್ರಜ್ಞಾನಗಳ ಗುಚ್ಛವು ಬಹುಮಟ್ಟಿಗೆ ಸಹಕಾರ ನೀಡಿತು.

ವೆಗೋದಲ್ಲಿನ ಈ ಲಾಂಗ್ ವ್ಹೀಲ್ ಬೇಸ್ ನ ಸಹಾಯದಿಂದಲೂ ನಾವು ಈ ಕಿಕ್ಕಿರಿದ ಜನಸಂದಣಿಯ ದಾರಿಯನ್ನು ದಾಟಿ ಮುಂದೆ ಬರಲು ಸಾಧ್ಯವಾಯಿತು. ಹೊಸ ವರ್ಷದ ಸಂಭ್ರಮಾಚರಣೆಗಾಗಿ ಸಿದ್ಧವಾಗಿದ್ದ ಮದ್ಯದಲ್ಲಿ ಮಿಂದೆದ್ದಿದ್ದ ಜನರನ್ನು ದಾಟುವುದು ಅಷ್ಟು ಸುಲಭವಾಗಿರದಿದ್ದರೂ ಅದನ್ನು ಅನಾಯಾಸವಾಗಿಸಿದ್ದು ವೆಗೋ.

2016ರ ಅಂತಿಮ ದಿನ ಮುಕ್ತಾಯವಾಗಲು ಇನ್ನೇನು ಕೆಲವೇ ಕೆಲವು ಗಂಟೆಗಳು ಬಾಕಿಯಿರುವಂತೆಯೇ, ನಗರದ ಮಧ್ಯಭಾಗವನ್ನು ಬಿಟ್ಟು ನಾವು ಇಂದಿರಾ ನಗರದ ಕಡೆಗೆ ಪಯಣಿಸಿದೆವು. ಯುವ ಜನರಿಂದ ತುಂಬಿ ತುಳುಕುತ್ತಾ ಹೊಸ ವರ್ಷದ ಸ್ವಾಗತಕ್ಕಾಗಿ ಕಾದು ಕುಳಿತಿದ್ದ ಇಂದಿರಾ ನಗರದಲ್ಲೂ ಮೋಜಿನ ತಾಣಗಳಿಗೆ ಕೊರತೆಯೇನಿಲ್ಲ. ಹಾಗಾಗಿ, ನಮ್ಮ ವೆಗೋ ತಂಡ ಅಲ್ಲಿಗೇ ಪಯಣಿಸಿತ್ತು.

ದಿನ ಬಹುಕಾಲ ನಾವು ಜಾಗೃತವಾಗ ಕಾಯುತ್ತಿದ್ದ ಆ ಘಳಿಗೆ ಬಂದೇಬಿಟ್ಟಿತು. 2017ರ ವರ್ಷ ನಮ್ಮ ಜೀವನಗಳಲ್ಲಿ ಕಾಲಿಡುತ್ತಿದ್ದಂತೆ, ಪಟಾಕಿ, ಸಿಡಿಮದ್ದುಗಳು ಆರ್ಭಟಿಸಿದವು. ಅವುಗಳ ಧೂಮದೊಂದಿಗೆ ಎಲ್ಲೆಡೆ ಬೆಳಕಿನ ಚಿತ್ತಾರ ಮೇಳೈಸಿತು. ಈ ಸಂಭ್ರಮ, ರೋಮಾಂಚನದ ಕ್ಷಣಕ್ಕಾಗಿ ಜಾತಕ ಪಕ್ಷಿಗಳಂತೆ ಕಾದು ಕುಳಿತಿದ್ದ ಯುವ ಜನತೆ ಕುಣಿದು ಕುಪ್ಪಳಿಸುತ್ತಾ ಹೊಸ ವರ್ಷವನ್ನು ಸಡಗರದಿಂದ ಸ್ವಾಗತಿಸಿತು. ಈ ಎಲ್ಲಾ ರೋಮಾಂಚಕ ಕ್ಷಣಗಳಿಗೆ ನಮ್ಮೊಂದಿಗೆ ಸಾಕ್ಷಿಯಾಗಿದ್ದು ಟಿವಿಎಸ್ ವೆಗೋ. ಈ ಸಂಭ್ರಮಾಚರಣೆಯ ಜತೆಜತೆಗೇ ಆ ಹೊತ್ತಿಗೆ ಲಭ್ಯವಾದ ಉತ್ತಮ ಊಟ ಸವಿದು, ದಣಿದಿದ್ದ ನಮಗೆ ಅತ್ಯಗತ್ಯವಾಗಿ ಬೇಕಿದ್ದ ವಿಶ್ರಾಂತಿಯನ್ನರಸಿ ಮನೆ ಕಡೆಗೆ ಹೆಜ್ಜೆ ಹಾಕಿದೆವು.

ಆದರಿದೇ ಅಂತಿಮವಾಗಿರಲಿಲ್ಲ. ವೆಗೋ ಜತೆಗಿನ ನಮ್ಮ ಇಂಥ ಸಾಹಸ ಪಯಣಕ್ಕೆ ಮುಕ್ತಾಯ ಹೇಳುವ ಮನಸ್ಸಿರಲಿಲ್ಲ. ಶೀಘ್ರದಲ್ಲೇ ಚೆನ್ನೈನಲ್ಲಿ ನಡೆಯಲಿರುವ ಪೊಂಗಲ್ ಸಡಗರವನ್ನು ಸವಿಯಲು ನಾವು ವೆಗೋದೊಂದಿಗೆ ಪಯಣ ಬೆಳೆಸಲಿದ್ದೇವೆ.

ನಮ್ಮ ಮುಂದಿನ ಸಾಹಸಗಾಥೆ ಕೈಗೊಳ್ಳುವುದನ್ನು, ನಾವು ಹಂಚಿಕೊಳ್ಳುವ ರೋಮಾಂಚಕ ಅನುಭವಗಳನ್ನು ಸವಿಯಲು, ನಮ್ಮ ಈ ಜಾಲತಾಣದ ಮೇಲೆ ನಿಗಾ ವಹಿಸಬೇಕೆಂದು ಕೋರುತ್ತೇವೆ. ಹಾಗಾಗಿ, ನಮ್ಮ ಮುಂದಿನ ಸಾಹಸದ ಹೆಸರನ್ನು #ವೀಗೋ ಚೆನ್ನೈ ಎಂದು ಹೆಸರಿಸಿದ್ದೇವೆ.

Read more on ಟಿವಿಎಸ್ tvs
Story first published: Thursday, January 5, 2017, 9:55 [IST]
English summary
Exploring the charms and delights of Bangalore while riding a TVS Wego as 2016 bids goodbye.
Please Wait while comments are loading...

Latest Photos