ಪೊಂಗಲ್‌ಗೂ ಮೊದಲು ತಮಿಳುನಾಡು ವಿಹರಿಸಿದ ವಿಗೋ

By Super Admin

ಭಾರತದ ವಿವಿಧ ಪ್ರಾಂತ್ಯಗಳ ಸೊಗಡಿನ ಹಬ್ಬಗಳನ್ನು ಟಿವಿಎಸ್ ವೆಗೋದಲ್ಲಿ ಸಂಚರಿಸಿ ಸವಿದ ಮೇಲೆ, ಬೆಳೆಯ ಸುಗ್ಗಿಯ ಸಂಕೇತವಾದ ಪೊಂಗಲ್ ಹಬ್ಬವನ್ನು ಸವಿಯಲು ಆ ಸಂಭ್ರಮಾಚರಣೆಯ ತವರೂರಾದ ತಮಿಳುನಾಡಿಗೆ ನಾವು ಪಯಣಿಸಿದೆವು.

ಪೊಂಗಲ್‌ಗೂ ಮೊದಲು ತಮಿಳುನಾಡು ವಿಹರಿಸಿದ ವಿಗೋ

ನಮ್ಮ ಈ ಪಯಣದಲ್ಲಿ ತಮಿಳುನಾಡಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಿರಿವಂತಿಕೆ, ಕಲೆ, ಶಿಲ್ಪಕಲೆಯ ತವರೂರಾದ ತಂಜಾವೂರು ನಮ್ಮ ಆಯ್ಕೆಯ ಮೊದಲ ತಾಣವಾಗಿತ್ತು.

ಪೊಂಗಲ್‌ಗೂ ಮೊದಲು ತಮಿಳುನಾಡು ವಿಹರಿಸಿದ ವಿಗೋ

ಇಡೀ ತಮಿಳುನಾಡಿನ ಅನ್ನದ ಬಟ್ಟಲು ಎಂದೇ ಖ್ಯಾತವಾಗಿರುವ ತಂಜಾವೂರನ್ನು ಅರಿಯಲು ಟಿವಿಎಸ್ ವೆಗೋ ಮೇಲೆ ಸವಾರಿ ಮಾಡುತ್ತಾ ಅಲ್ಲಿನ ರಸ್ತೆಗಳಲ್ಲಿ ಓಡಾಡಿ ಆ ಊರನ ಸೌಂದರ್ಯ ಸವಿಯಲು, ಆ ಊರನ್ನು ಮತ್ತೆ ಆವಿಷ್ಕರಿಸಲು ನಿರ್ಧರಿಸಿದೆವು.

ಅಂತೆಯೇ, ನಮ್ಮ ಪಯಣ ಜನನಿಬಿತ ರಸ್ತೆಗಳ ಮೂಲಕವೇ ಆರಂಭಗೊಂಡಿತು. ಈ ರಸ್ತೆಗಳಲ್ಲಿ ಹಾದು ಹೋಗುವುದು ವೆಗೋ ಮೇಲಿದ್ದ ನಮಗೆ ಕಷ್ಟವಾಗಲೇ ಇಲ್ಲ. ಜನರಿಂದ ತುಂಬಿ ತುಳುಕುತ್ತಿದ್ದ ರಸ್ತೆಗಳನ್ನು ದಾಟುತ್ತಾ ಸಾಗಿದ ನಾವು ಕೆಲ ನಿಮಿಷಗಳಲ್ಲೇ 'ತಂಜಾಯ್ ಪೆರಿಯಾ ಕೊವಿಲ್' ಎಂದೇ ಖ್ಯಾತವಾಗಿರುವ ಬೃಹದೀಶ್ವರರ್ ದೇಗುಲವನ್ನು ತಲುಪಿದೆವು.

ಪೊಂಗಲ್‌ಗೂ ಮೊದಲು ತಮಿಳುನಾಡು ವಿಹರಿಸಿದ ವಿಗೋ

ಕ್ರಿ. ಶ. 10ನೇ ಶತಮಾನದಲ್ಲಿ ಚೋಳ ಅರಸರಿಂದ ನಿರ್ಮಿಸಲ್ಪಟ್ಟ ಈ ದೇಗುಲ ಭಾರತದಲ್ಲಿರುವ ಅತಿ ದೊಡ್ಡ ದೇಗುಲಗಳಲ್ಲೊಂದು. ಮಾತ್ರವಲ್ಲ, ಯುನೆಸ್ಕೋದ ವಿಶ್ವ ಪಾರಂಪರಿಕ ಪಟ್ಟಿಯಲ್ಲೂ ಸ್ಥಾನ ಗಳಿಸಿದೆ. ಇದರ ಸರ್ವೋಚ್ಛ ಭಾಗವಾದ 'ಕುಂಭಂ' ಈ ದೇಗುಲದ ವಾಸ್ತುಶಿಲ್ಪದ ವಿಶಿಷ್ಟ ಭಾಗವಾಗಿದ್ದು ಇದು ಸುಮಾರು 80 ಟನ್ ಗಳಷ್ಟು ತೂಕ ಹೊಂದಿದೆ.

ಪೊಂಗಲ್‌ಗೂ ಮೊದಲು ತಮಿಳುನಾಡು ವಿಹರಿಸಿದ ವಿಗೋ

ಕೃಷಿ ಚಟುವಟಿಕೆ ತಂಜಾವೂರಿನ ಜೀವಾಳ ಹಾಗೂ ಆರ್ಥಿಕತೆಯ ಪ್ರಮುಖ ಆಧಾರ. ಹಾಗಾಗಿ, ಸುಗ್ಗಿ ಹಬ್ಬವೆಂದೇ ಖ್ಯಾತಿಯಾಗಿರುವ ಪೊಂಗಲ್, ಈ ಭಾಗದ ರೈತನ ಅತ್ಯಂತ ಸಂಭ್ರಮದ ಹಬ್ಬ. ಹಾಗಾಗಿಯೇ, ಅಂದು ಅಲ್ಲಿನ ಎಲ್ಲಾ ರೈತರೂ ಉತ್ತಮ ಫಸಲು ಕರುಣಿಸಿದ ದೇವರಿಗೆ ಕೃತಜ್ಞತೆ ಸಲ್ಲಿಸುವ ಪೂಜಾ ಕೈಂಕರ್ಯ ಗಳಿಗಾಗಿ ಸಿದ್ಧತೆ ನಡೆಸುತ್ತಿದ್ದರು. ಇಲ್ಲಿನ ಈ ಸಂಭ್ರಮಾಚರಣೆಯ ತಮಿಳುನಾಡಿನ ಪರಂಪರೆ, ಸಂಸ್ಕೃತಿಗಳ ಧ್ಯೋತಕವಾಗಿದೆ.

ಪೊಂಗಲ್‌ಗೂ ಮೊದಲು ತಮಿಳುನಾಡು ವಿಹರಿಸಿದ ವಿಗೋ

ಅಂದಹಾಗೆ, ಈ ಹಬ್ಬ ಇಲ್ಲಿ ನಾಲ್ಕು ದಿನಗಳ ಮಟ್ಟಿಗೆ ಆಚರಿಸಲ್ಪಡುತ್ತದೆ. ಇದನ್ನು ಬಣ್ಣಿಸಲು ಪದಗಳು ಸಾಲುವುದಿಲ್ಲ. ಈ ಹಬ್ಬದ ಸಿದ್ಧತೆ ಕೆಲ ದಿನಗಳ ಮುಂಚೆಯೇ ಆರಂಭವಾಗಿರುತ್ತದೆ. ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವ ಯಾರಿಗಾದರೂ, ತಮಿಳುನಾಡು ಸಂಸ್ಕೃತಿಯು ಸಂಪೂರ್ಣವಾಗಿ ಅರ್ಥವಾಗಿಬಿಡುತ್ತದೆ.

ಪೊಂಗಲ್‌ಗೂ ಮೊದಲು ತಮಿಳುನಾಡು ವಿಹರಿಸಿದ ವಿಗೋ

ಈ ಹಬ್ಬಕ್ಕಾಗಿನ ತಯಾರಿಯೇ ವಿಶೇಷವಾಗಿರುತ್ತದೆ. ಪೂರ್ವಸಿದ್ಧತೆಯ ಹಿನ್ನೆಲೆಯಲ್ಲಿ, ಎಲ್ಲರ ಮನೆಗಳೂ ಸುಣ್ಣ, ಬಣ್ಣಗಳಿಂದ ಹೊಚ್ಚ ಹೊಸತರಂತೆ ಅಲಂಕೃತಗೊಳ್ಳುತ್ತವೆ. ರೈತರು ತಮ್ಮ ತಮ್ಮ ಹೊಲಗದ್ದೆಗಳಿಗೆ ತೆರಳಿ ಅಲ್ಲಿ ಪೂಜೆಗಳನ್ನು ನೆರವೇರಿಸುತ್ತಾರೆ. ಫಸಲು ಉತ್ತಮವಾಗಿ ನೀಡಿದ್ದಕ್ಕೆ ದೇವರಿಗೆ ಕೃತಜ್ಞತೆ ಅರ್ಪಿಸುವುದರ ಜತೆಗೆ ಭವಿಷ್ಯ ಉಜ್ವಲವಾಗಿಸೆಂದು ಪ್ರಾರ್ಥಿಸುತ್ತಾರೆ. ಆದರೆ, ಈ ಪೂಜೆ, ಪುನಸ್ಕಾರಗಳಲ್ಲಿ ಯಾವುದೇ ಶಬ್ದ ಮಾಲಿನ್ಯವಿರುವುದಿಲ್ಲ. ಯಾವುದೇ ಆಡಂಬರವಿರುವುದಿಲ್ಲ.

ಪೊಂಗಲ್‌ಗೂ ಮೊದಲು ತಮಿಳುನಾಡು ವಿಹರಿಸಿದ ವಿಗೋ

ನಿಶಬ್ದವಾದ , ಹಚ್ಚ ಹಸುರಿನ ಪರಿಸರದಲ್ಲಿ, ಆ ಪೂಜಾ ಕ್ರಮವನ್ನು ನೋಡುವುದೇ ಚೆಂದ. ನಗರಗಳೆಂಬ ಕಾಂಕ್ರೀಟ್ ಕಾಡುಗಳ, ಟ್ರಾಫಿಕ್ ಕಿರಿಕಿರಿಗಳ, ಕಿವಿ ತಮಟೆ ಹರಿದುಹೋಗುವಂಥ ಶಬ್ದ ಮಾಲಿನ್ಯಗಳಿಂದ ದೂರ, ಬಲುದೂರ ಸಾಗಿ ಬಂದ ಮನಸುಗಳಿಗೆ ಇಲ್ಲಿನ ಪರಿಸರ ಶಕ್ತಿ ತುಂಬುತ್ತದೆ. ಈ ನಿಸರ್ಗವು ರೈತರಿಗೆ ನೀಡುವ ಚೈತನ್ಯವನ್ನೇ ಟಿವಿಎಸ್ ವೆಗೋ ಸಹ ತನ್ನ ತಾಂತ್ರಿಕ ಕೌಶಲ್ಯದೊಂದಿಗೆ ಸವಾರರಿಗೆ ಹೊಸ ಅನುಭವ ನೀಡುತ್ತದೆ.

ಪೊಂಗಲ್‌ಗೂ ಮೊದಲು ತಮಿಳುನಾಡು ವಿಹರಿಸಿದ ವಿಗೋ

ಇದರ ಟೆಲಿಸ್ಕೋಪಿಕ್ ಫ್ರಂಟ್ ಸನ್ಪೆನ್ಷನ್, ಸಿಂಕ್ ಬ್ರೇಕ್ ಸಿಸ್ಟಂಗಳಿಂದ, ಎಂಥ ಖರಾಬು ರಸ್ತೆಯಲ್ಲೂ ಮುಂದಿನ ಹಾಗೂ ಹಿಂಬದಿಯ ಗಾಲಿಗಳ ಸಮತೋಲಿತ ಬ್ರೇಕಿಂಗ್ ನೀಡುತ್ತದಲ್ಲದೆ, ಟೆಲಿಸ್ಕೋಪಿಕ್ ಸನ್ಪೆನ್ಷನ್, ಆರಾಮದಾಯಕ ಸವಾರಿಯ ಅನುಭವವನ್ನು ನೀಡುತ್ತದೆ. ಕೇವಲ ನಗರಗಳಿಗಷ್ಟೇ ಅಲ್ಲದೆ, ಹಳ್ಳಿಗಳಲ್ಲಿನ ರಸ್ತೆಗಳಿಗೂ ಇದು ಯೋಗ್ಯವನ್ನಾಗಿಸಿರುವುದು ಇದರಲ್ಲಿನ ಅತ್ಯಾಧುನಿಕ ತಂತ್ರಜ್ಞಾನವಷ್ಟೇ.

ಪೊಂಗಲ್‌ಗೂ ಮೊದಲು ತಮಿಳುನಾಡು ವಿಹರಿಸಿದ ವಿಗೋ

ತಂಜಾವೂರು ಪರಿಸರಕ್ಕೆ ಬರುವುದಾದರೆ, ದಿನಪೂರ್ತಿ ಅಡ್ಡಾಡಿದ ನಮಗೆ, ಸಂಜೆಯ ವೇಳೆ ನಡೆಯುವ ರೈತರ ಪ್ರಕೃತಿ ಆರಾಧನೆ ಹಾಗೂ ಪೂಜೆಗಳನ್ನು ನೋಡುವ ತವಕ.

ಪೊಂಗಲ್‌ಗೂ ಮೊದಲು ತಮಿಳುನಾಡು ವಿಹರಿಸಿದ ವಿಗೋ

ಮುಂದೇನಾಯ್ತು ಎಂಬುದನ್ನು ಅರಿಯಲು #WegoPongal ಜತೆ ಕಾತುರದಿಂದ ಕಾಯುತ್ತಿರಿ.

ಪೊಂಗಲ್‌ಗೂ ಮೊದಲು ತಮಿಳುನಾಡು ವಿಹರಿಸಿದ ವಿಗೋ

'ಕ್ವೀನ್ ಆಫ್ ಅರೇಬಿಯನ್ ಸೀ' ಕೊಚ್ಚಿಯಲ್ಲಿ ಮನಮೆಚ್ಚಿದ ವಿಗೊ

ಪುಣೆಯಲ್ಲಿ #WeGo ಜೊತೆ ದೀಪಗಳ ಹಬ್ಬದ ಸಂಭ್ರಮ

ಐತಿಹಾಸಿಕ ಕೋಲ್ಕತ್ತಾ ನಗರದಲ್ಲಿ ಟಿವಿಎಸ್ ವಿಗೊ ಜೊತೆ ದುರ್ಗಾ ಪೂಜೆ ಸಂಭ್ರಮ

Most Read Articles

Kannada
Read more on ಟಿವಿಎಸ್
English summary
Here Wego exploring Tamil Nadu as the state prepares for the festival of harvest, Pongal, on the TVS Wego.
Story first published: Tuesday, January 17, 2017, 18:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X