ಬಿಡುಗಡೆಗೆ ಸಜ್ಜಾದ ಯುಎಂ ವಿ-ಟ್ವಿನ್ ಸಾಹಸಿ ಬೈಕ್- ರಾಯಲ್ ಎನ್‌ಫೀಲ್ಡ್‌ಗೆ ಮೊದಲ ಸ್ಪರ್ಧೆ..!!

Written By:

ಕಳೆದ ವರ್ಷ ಸಾಹಿಸಿ ಬೈಕ್ ಒಂದನ್ನು ಬಿಡುಗಡೆಗೊಳಿಸಿದ್ದ ಅಮೆರಿಕನ್ ಮೋಟಾರ್‌ ಸೈಕಲ್ ಉತ್ಪಾದನಾ ಸಂಸ್ಥೆ ಯುಎಂ, ಇದೀಗ ಮತ್ತೊಂದು ಹೊಸ ಮಾದರಿಯನ್ನು ಪರಿಚಯಿಸಲು ಸಜ್ಜಾಗಿದೆ. ಈ ಹಿಂದೆ ಹೊಸ ಬೈಕ್ ಬಿಡುಗಡೆಗೆ ಬಗೆಗೆ ಹೇಳಿಕೊಂಡಿದ್ದ ಯುಎಂ ಸಂಸ್ಥೆ, 350 ಸಿಸಿ ಬೈಕ್ ಬದಲಾಗಿ 500ಸಿಸಿ ಸಾಮರ್ಥ್ಯದ ಸಾಹಿಸಿ ಬೈಕ್ ಹೊರತರುವ ಸುಳಿವು ನೀಡಿತ್ತು.

ಆದ್ರೆ 500ಸಿಸಿ ಬದಲಾಗಿ 400ಸಿಸಿ ಸಾಹಿಸಿ ಬೈಕ್ ಅಭಿವೃದ್ಧಿ ಮಾಡಿರುವ ಯುಎಂ ಸಂಸ್ಥೆ, ವಿ-ಟ್ವಿನ್ ಮಾದರಿಯನ್ನು ಹೊರತಂದಿದೆ. ಈ ಬಗ್ಗೆ ಖಚಿತ ಮಾಹಿತಿ ನೀಡಿರುವ ಯುಎಂ ಇಂಡಿಯಾ ಪ್ರವೈಟ್ ಲಿಮಿಟೆಡ್ ಸಿಇಓ ರಾಜೀವ್ ಮಿಶ್ರಾ, ವಿನೂತನ ಬೈಕ್ ಬಿಡುಗಡೆ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ.

ವಾಟರ್ ಕೂಲ್ಡ್ 400ಸಿಸಿ ಎಂಜಿನ್ ಸಾಮರ್ಥ್ಯದೊಂದಿಗೆ ಅಭಿವೃದ್ಧಿ ಹೊಂದಿರುವ ವಿ-ಟ್ಪಿನ್, ಸಾಹಸಕ್ಕೆ ಹೇಳಿ ಮಾಡಿಸಿದ ಬೈಕ್. ಹೀಗಾಗಿ ಆಪ್-ರೋಡಿಂಗ್ ಪ್ರಿಯರಿಗೆ ಇದು ಹೆಚ್ಚು ಇಷ್ಟವಾಗಲಿದ್ದು, ವಿನೂತನ ವೈಶಿಷ್ಟ್ಯತೆಗಳು ಬೈಕಿನ ಗ್ಲ್ಯಾಮರಸ್ ಹೆಚ್ಚಿಸಿವೆ.

ಈ ಹಿಂದೆ 2016ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡಿದ್ದ ಯುಎಂ ಸಾಹಿಸಿ ಬೈಕ್, ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಇದೇ ವರ್ಷ ಏಪ್ರಿಲ್‌ನಲ್ಲಿ ಬುಕ್ಕಿಂಗ್ ಆರಂಭವಾಗಲಿದ್ದು, ಮೇ ಹೊತ್ತಿಗೆ ಗ್ರಾಹಕರ ಕೈಸೇರಲಿವೆ.

ಯುಎಂ ಇಂಡಿಯಾ ಪ್ರವೈಟ್ ಲಿಮಿಟೆಡ್ ಸಿಇಓ ರಾಜೀವ್ ಮಿಶ್ರಾ ಪ್ರಕಾರ, 400ಸಿಸಿ ಸಾಮರ್ಥ್ಯದ ವಿ-ಟ್ವಿನ್ ಬೈಕ್ ಜೊತೆಗೆ ರಿನೆಗೆಡ್ ಕ್ಲಾಸಿಕ್ ಬೈಕ್ ಕೂಡಾ ಬಿಡುಗಡೆಗೆ ಸಿದ್ಧಗೊಂಡಿದೆಯಂತೆ.

ನಾಲ್ಕನೇ ತ್ರೈಮಾಸಿಕ ವೇಳೆಗೆ ರಿನೆಗೆಡ್ ಕ್ಲಾಸಿಕ್ ಕೂಡಾ ಲಭ್ಯವಿರಲಿದ್ದು, ಒಂದು ವೇಳೆ ಬಿಡುಗಡೆ ಸಾಧ್ಯವಾಗದ ಪಕ್ಷದಲ್ಲಿ 2018 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡುವ ಬಗೆಗೆ ಯುಎಂ ಸಂಸ್ಥೆ ಯೋಜನೆ ರೂಪಿಸಿದೆ.

ವಿನೂತನ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ರಿನೆಗೆಡ್ ಕ್ಲಾಸಿಕ್ ಕೂಡಾ 400 ಸಿಸಿ ಸಾಮರ್ಥ್ಯ ಎಂಜಿನ್ ಹೊಂದಿದೆ. ಒಟ್ಟಿನಲ್ಲಿ ಮುಂಬರುವ ಆಟೋ ಎಕ್ಸ್‌ಪೋ ಪ್ರದರ್ಶನಗೊಳ್ಳುವ ಸಾಧ್ಯತೆಗಳಿದ್ದು, ಆಪ್-ರೋಡಿಂಗ್ ಪ್ರಿಯರಿಗೆ ವಿ-ಟ್ವಿನ್ ಹೊಸ ಕ್ರೇಜ್ ನೀಡುವುದಂತೂ ಸುಳ್ಳಲ್ಲ.

ಬೈಕ್ ರೇಸ್ ಪ್ರಿಯರಾಗಿದ್ದರೆ ಡಾಕರ್ ರ‍್ಯಾಲಿ ಚಿತ್ರಗಳ ವಿಕ್ಷಣೆಗಾಗಿ ಕೆಳಗಿನ ಗ್ಯಾಲರಿಯನ್ನು ಕ್ಲಿಕ್ ಮಾಡಿ.

Read more on ಯುಎಂ um
Story first published: Saturday, February 25, 2017, 11:31 [IST]
English summary
The new 400cc motor is a water-cooled V-Twin unit that will power the upcoming UM Adventure motorcycle.
Please Wait while comments are loading...

Latest Photos