ಸೈಕಲ್ ಸವಾರರು ಈ 'ಹೆಲ್ಮೆಟ್ ಇಂಡಿಕೇಟರ್' ಬಗ್ಗೆ ತಿಳ್ಕೊಳಿ

Written By:

ಸಾಮಾನ್ಯವಾಗಿ ಸೈಕಲ್ನಲ್ಲಿ ಇಂಡಿಕೇಟರ್ ತೋರಿಸುವ ವ್ಯವಸ್ಥೆ ಇಲ್ಲ, ಎಷ್ಟೋ ಬಾರಿ ಈ ವ್ಯವಸ್ಥೆ ಇಲ್ಲದೆ ಇರುವುದರಿಂದ ಸಾಕಷ್ಟು ಬಾರಿ ಅಪಘಾತದಲ್ಲೂ ಸಂಭವಿಸಿವೆ.

ಈ ರೀತಿಯ ತೊಂದರೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಲುಮೋಸ್ ಹೆಲ್ಮೆಟ್ ಎಂಬ ವಿಶಿಷ್ಟ ರೀತಿಯ ಹೆಲ್ಮೆಟ್ ಒಂದನ್ನು ಜೆಫ್ ಚಿನ್ ಮತ್ತೆ ಡಿಂಗ್ ಯು-ವೆನ್ ಎಂಬ ಇಬ್ಬರು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ಈ ರೀತಿಯ ಆವಿಷ್ಕಾರಕ್ಕೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ದೊರಕುತ್ತಿರುವುದು ಸಂತೋಷಕರ ಸಂಗತಿ.

ಸಾಮಾನ್ಯವಾಗಿ ಕತ್ತಲಲ್ಲಿ ಸೈಕಲ್ ಓಡಿಸುವಾಗ ಹಿಂಬದಿಯ ಬರುತ್ತಿರುವ ವಾಹನಗಳಿಗೆ ಸೈಕಲ್ ಗೋಚರಿಸುವುದು ತೀರಾ ಕಡಿಮೆ ಎನ್ನಬಹುದು.

ಹೆಚ್ಚು ವೇಗವಾಗಿ ಬರುವ ವಾಹನಗಳು ಕೆಲವೊಮ್ಮೆ ಸೈಕಲ್ ಸವಾರನನ್ನು ಗುರುತಿಸದೆ ಹಿಂಬದಿಯಿಂದ ಬಂದು ಅಪಘಾತ ಮಾಡಿರುವ ಎಷ್ಟೋ ಘಟನೆಗಳು ಸಂಭವಿಸಿವೆ, ಹೀಗೆ ಬಿಟ್ಟರೆ ಮುಂದೆಯೂ ಅವಘಡಗಳು ಸಂಭವಿಸುವುದು ಖಂಡಿತ.

ಈ ಲೋಪದೋಷವನ್ನು ಸರಿಪಡಿಸುವ ನಿಟ್ಟಿನಲ್ಲಿ ಇಂಡಿಕೇಟರ್ ಹೊಂದಿರುವ ಹೆಲ್ಮೆಟ್ ಅವಿಷೇರಿಸಿದ್ದು, ಈ ವಿಶೇಷ ಹೆಲ್ಮೆಟ್ ಹಿಂಬದಿಯಲ್ಲಿ ಬರುವ ವಾಹನಗಳಿಗೆ ಸೈಕಲ್ ಇರುವಿಕೆಯನ್ನು ಗೊತ್ತುಪಡಿಸುತ್ತದೆ.

ಈ ಇಬ್ಬರು ವ್ಯಕ್ತಿಗಳು ಹಾರ್ವಾರ್ಡ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾಗಿದ್ದು, ಈ ವಿಚಾರವಾಗಿ ಜನತೆಯನ್ನು ಜಾಗೃತಗೊಳಿಸುವ ಕಾರ್ಯಕ್ಕೆ ಈ ಇಬ್ಬರು ಈಗಾಗಲೇ ಕಾರ್ಯೋನ್ಮುಕವಾಗಿದ್ದಾರೆ, ಜನತೆಯಿಂದ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆ ಕಂಡು ಖುಷಿಯಾಗಿದೆ ಎನ್ನುತ್ತಾರೆ.

ಈ ಲುಮೋಸ್ ಹೆಲ್ಮೆಟ್ ಸೈಕಲ್ ಸವಾರರಿಗೆಂದೇ ನಿರ್ಮಿಸಲಾಗಿದ್ದು, ಎಡ ಮತ್ತು ಬಲಕ್ಕೆ ತಿರುಗುವಾಗ ಆಯಾ ದೀಪಗಳಿಗೆ ಸಂಬಂಧಿಸಿದ ಗುಂಡಿಗಳನ್ನು ಒತ್ತಿದರೆ ಹಿಂಬದಿಯಲ್ಲಿ ಬರುತ್ತಿರುವ ವಾಹನಗಳಿಗೆ ತಿಳಿಯಲಿದೆ.

ಸೈಕಲ್ ನ ಹಿಡಿಗೆ ಸಣ್ಣ ಗಾತ್ರದ ಎರಡು ಎಡ ಮತ್ತು ಬಲಕ್ಕೆ ಗುಂಡಿಗಳನ್ನು ನೀಡಲಾಗಿದ್ದು, ಇವು ತಂತಿಯ ಸಹಾಯವಿಲ್ಲದ ರಿಮೋಟಿನೊಂದಿಗೆ ಸಂಪರ್ಕ ಸಾಧಿಸಿ ಹಿಂಬದಿಯ ವಾಹನಗಳಿಗೆ ಹೆಲ್ಮೆಟ್ ಮುಖಾಂತರ ನಿರ್ದೇಶನ ನೀಡುತ್ತವೆ.

ಈ ಸೈಕಲ್ ಬ್ರೇಕ್ ಹಿಡಿದ ಕೂಡಲೇ ಹೆಲ್ಮೆಟ್ ಹಿಂಬದಿಯಲ್ಲಿ ಕೆಂಪು ದೀಪ ಬೆಳಗುವ ಹಾಗೆ ವಿನ್ಯಾಸ ಮಾಡಲಾಗಿದ್ದು, ಈ ಎಲ್ಲಾ ಸಹಾಯಗಳು ರಿಮೋಟ್ ಸಹಾಯದಿಂದಲೇ ನೆಡೆಯುತ್ತವೆ ಎಂಬುದು ವಿಶೇಷ.ಈ ಹೆಲ್ಮೆಟ್ ಆಪಲ್ ಕಂಪನಿಯ iOS ಅಪ್ಲಿಕೇಶನ್ ನೊಂದಿಗೆ ಸಂಪರ್ಕ ಹೊಂದಿಸಬಹುದಾಗಿದೆ.

ಈ ತಂತ್ರಾಂಶದ ಮೂಲಕ ನಿಮಗೆ ಹೆಲ್ಮೆಟ್ ಬ್ಯಾಟರಿ ಮಟ್ಟ ಮತ್ತಿತರ ವಿಚಾರಗಳನ್ನು ತಿಳಿದುಕೊಳ್ಳಬಹುದಾಗಿದೆ. ಈ ತಂತ್ರಾಂಶದ ಮೂಲಕ ಹೆಲ್ಮೆಟ್ ಬಗ್ಗೆ ತಿಳಿಯಲಿದ್ದು, ಸ್ವಲ್ಪ ದಿನಗಳಲ್ಲಿಯೇ ಆಂಡ್ರಾಯ್ಡ್ ತಂತ್ರಾಂಶ ಬಿಡುಗಡೆಗೊಳಿಸಲಾಗುವುದು.

ಸದ್ಯ ಹೆಲ್ಮೆಟ್ ಬೇಕು ಎನ್ನುವವರು 169 ಡಾಲರ್ ನೀಡಬೇಕಾಗಿದ್ದು, ಕೇವಲ ತಮಗಾಗಿ ಹೆಲ್ಮೆಟ್ ತಯಾರಿಸಲು ಹೋರಾಟ ಯುವಕರು ಇಂದು ಈ ಮಟ್ಟಕೆ ಬೆಳೆದಿರುವುದು ಖುಷಿಯ ವಿಚಾರ ಅಲ್ಲವೇ..?

English summary
The Lumos helmet is a helmet for cyclists with a prominent red brake light, as well as yellow left and right turn signals, like what you'd see on motorised vehicles.
Please Wait while comments are loading...

Latest Photos