ಭರ್ಜರಿ 96.9 ಮೈಲೇಜ್ ನೀಡುವ ಬಜಾಜ್ ಪ್ಲಾಟಿನಾ ಇಎಸ್ ಲಾಂಚ್

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಬಜಾಜ್ ಆಟೋ, ಮಗದೊಂದು ಆಕರ್ಷಕ ಮಾದರಿಯನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಿದೆ.

ಬೆಲೆ ಮಾಹಿತಿ - 45,290 (ಎಕ್ಸ್ ಶೋ ರೂಂ ಬೆಂಗಳೂರು)

ದೇಶದ ಪ್ರಯಾಣಿಕ ದ್ವಿಚಕ್ರ ವಾಹನ ವಿಭಾಗದಲ್ಲಿ ತನ್ನದೇ ಆದ ಸಾನಿಧ್ಯವನ್ನು ಹೊಂದಿರುವ ಬಜಾಜ್, ಜನಪ್ರಿಯ ಪ್ಲಾಟಿನಾ ಇಎಸ್ ಮಾದರಿಯನ್ನು ಬಿಡುಗಡೆ ಗೊಳಿಸಿದೆ. ಮೈಲೇಜ್ ಇತ್ಯಾದಿ ಸಂಪೂರ್ಣ ಮಾಹಿತಿಗಾಗಿ ಮುಂದುವರಿಯಿರಿ...

ತಾಂತ್ರಿಕತೆ

ತಾಂತ್ರಿಕತೆ

ನೂತನ ಬಜಾಜ್ ಪ್ಲಾಟಿನಾ ಇಎಸ್, ಎಕ್ಸಾಸ‌್‌ಟೆಕ್ (ExhausTEC) ಜೊತೆಗೆ ಸಿಂಗಲ್ ಸಿಲಿಂಡರ್ 102 ಸಿಸಿ ಡಿಟಿಎಸ್-ಐ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 12.75 ತಿರುಗುಬಲದಲ್ಲಿ ಗರಿಷ್ಠ 8.08 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, 4 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಇದರಲ್ಲಿರಲಿದೆ.

ಮೈಲೇಜ್

ಮೈಲೇಜ್

ಭಾರತ ವಾಹನ ಅಧ್ಯಯನ ಸಂಸ್ಥೆಯ (ಎಆರ್‌ಎಐ) ಮಾನ್ಯತೆಯ ಪ್ರಕಾರ ಹೊಸ ಬಜಾಜ್ ಪ್ಲಾಟಿನಾ ಇಎಸ್ ಮಾದರಿಯು ಪ್ರತಿ ಲೀಟರ್‌ಗೆ 96.9 ಕೀ.ಮೀ. ಮೈಲೇಜ್ ನೀಡಲಿದೆ. ಹಾಗಿದ್ದರೂ ನೈಜ ರಸ್ತೆ ಪರಿಸ್ಥಿತಿಯಲ್ಲಿ ಇದು ಎಷ್ಟು ಇಂಧನ ಕ್ಷಮತೆ ಕಾಪಾಡಿಕೊಳ್ಳಲಿದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಇಂಧನ ಟ್ಯಾಂಕ್

ಇಂಧನ ಟ್ಯಾಂಕ್

ಇನ್ನು ಹೊಸ ಬಜಾಜ್ ಪ್ಲಾಟಿನಾ ಇಎಸ್ 11.5 ಲೀಟರ್ ಇಂಧನ ಟ್ಯಾಂಕ್ ಹೊಂದಿದ್ದು, ಏಕ ಮಾತ್ರ ಟ್ಯಾಂಕ್‌ನಲ್ಲಿ 1,114 ಕೀ.ಮೀ. ವ್ಯಾಪ್ತಿಯ ವರೆಗೆ ಸಂಚರಿಸಬಹುದಾಗಿದೆ.

ಗರಿಷ್ಠ ವೇಗ: 90 kmph

ವಿನ್ಯಾಸ

ವಿನ್ಯಾಸ

ಇದರಲ್ಲಿ ಕನಿಷ್ಠ ವಿನ್ಯಾಸ ತಂತ್ರಗಾರಿಕೆಯನ್ನು ಅನುಸರಿಸಲಾಗಿದ್ದು, ಗ್ರಾಹಕರಿಗೆ ಕೈಗೆಟುಕುವ ದರಗಳಲ್ಲಿ ಬೈಕ್ ತಲುಪಿಸುವ ಪ್ರಯತ್ನ ಮಾಡಲಾಗಿದೆ. ಕನಿಷ್ಠ ಬೆಲೆಯಲ್ಲಿ ಪಯಣಿಕರಿಗೆ ಹೆಚ್ಚು ದೂರ ಪ್ರಯಾಣಿಸುವುದಕ್ಕೆ ಹೆಚ್ಚು ಆದ್ಯತೆ ಕೊಡಲಾಗಿದೆ.

ವಿಶಿಷ್ಟತೆಗಳು

ವಿಶಿಷ್ಟತೆಗಳು

ಎಸ್‌ಎನ್‌ಎಸ್ ಸಸ್ಫೆಷನ್,

ಸೆಗ್ಮೆಂಟ್ ಬೆಸ್ಟ್ ಗ್ರೌಂಡ್ ಕ್ಲಿಯರನ್ಸ್,

ಕಿಕ್ ಮತ್ತು ಎಲೆಕ್ಟ್ರಿಕ್ ಸ್ಟಾರ್ಟ್,

ಸೆಗ್ಮೆಂಟ್ ಬೆಸ್ಟ್ ಚಕ್ರ,

ಉದ್ದವಾದ ಸೀಟು,

ಅಲಾಯ್ ವೀಲ್ಸ್,

ಶೂನ್ಯ ನಿರ್ವಹಣೆಯ ಬ್ಯಾಟರಿ,

ಆಕರ್ಷಕ ಗ್ರಾಫಿಕ್ಸ್.

ಬಣ್ಣಗಳು

ಬಣ್ಣಗಳು

ಎಬನಿ ಬ್ಲ್ಯಾಕ್,

ಎಲೆಕ್ಟ್ರಾನ್ ಬ್ಲೂ,

ಕ್ಯಾಂಡಿ ರೆಡ್

ಸಸ್ಪೆಷನ್, ಬ್ರೇಕ್

ಸಸ್ಪೆಷನ್, ಬ್ರೇಕ್

ಸಸ್ಪೆಷನ್

ಮುಂಭಾಗ: ಹೈಡ್ರಾಲಿಕ್, ಟೆಲಿಸ್ಕಾಪಿಕ್, 125 ಎಂಎಂ ಟ್ರಾವೆಲ್,

ಹಿಂಭಾಗ: ಟ್ರೈಲಿಂಗ್ ಆರ್ಮ್ ಜೊತೆಗೆ ಕೊ ಆಕ್ಸಿಯಲ್ ಹೈಡ್ರಾಲಿಕ್ ಶಾಕ್ ಅಬ್ಸಾಬರ್ ಆಂಡ್ ಕಾಯಿಲ್ ಸ್ಪ್ರಿಂಗ್ಸ್. ಎಸ್‌ಎನ್‌ಎಸ್

ಬ್ರೇಕ್

ಮುಂಭಾಗ ಹಾಗೂ ಹಿಂಭಾಗ - 110 ಡ್ರಮ್

 ಆಯಾಮ

ಆಯಾಮ

ಉದ್ದ: 2000 ಎಂಎಂ

ಅಗಲ: 840 ಎಂಎಂ

ಎತ್ತರ: 1060 ಎಂಎಂ

ವೀಲ್ ಬೇಸ್: 1255 ಎಂಎಂ

ಸ್ಯಾಡಲ್ ಎತ್ತರ: 798 ಎಂಎಂ

ಗ್ರೌಂಡ್ ಕ್ಲಿಯರನ್ಸ್: 190 ಎಂಎಂ

ಕರ್ಬ್ ಭಾರ (ಡ್ರಮ್/ಡಿಸ್ಕ್): 108 ಕೆ.ಜಿ

Most Read Articles

Kannada
English summary
Bajaj Auto has launched its all new Platina ES in India . The Indian manufacturer had a strong hold over the commuter segment of motorcycles with its predecessor models.
Story first published: Tuesday, January 27, 2015, 17:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X