ಎನ್‌ಫೀಲ್ಡ್‌ಗೆ ಸೆಡ್ಡು ನೀಡಲು ಬರುತ್ತಿದೆ ಹರ್ಲಿ ಬೈಕ್ಸ್

By Nagaraja

ಬೆಳೆದು ಬರುತ್ತಿರುವ ಭಾರತೀಯ ವಾಹನ ಮಾರುಕಟ್ಟೆಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಇದೇ ಕಾರಣಕ್ಕಾಗಿ ಜಗತ್ತಿನ ಬಹುತೇಕ ಎಲ್ಲ ಐಕಾನಿಕ್ ಕಂಪನಿಗಳು ಇದರತ್ತ ತಲೆಯಿತ್ತಿ ನಿಂತಿದೆ. ಇದಕ್ಕೊಂದು ಸೇರ್ಪಡೆಯೆಂಬಂತೆ ಅಮೆರಿಕದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹರ್ಲಿ ಡೇವಿಡ್ಸನ್ ಭಾರತದಲ್ಲಿ ಕಡಿಮೆ ಎಂಜಿನ್ ಸಾಮರ್ಥ್ಯದ ಬೈಕ್‌ಗಳನ್ನು ಲಾಂಚ್ ಮಾಡಲು ಸರ್ವಸನ್ನದ್ಧವಾಗಿ ನಿಂತಿದೆ.

ಕಳೆದ ದಿನವಷ್ಟೇ ಹರ್ಲಿ ಡೇವಿಡ್ಸನ್ 500 ಹಾಗೂ 750ಸಿಸಿ ಬೈಕ್‌ಗಳು ಭಾರತಕ್ಕೆ ಮುಂದಿನ ವರ್ಷಾರಂಭದಲ್ಲಿ ಆಗಮನವಾಗಲಿದೆಯೆಂಬ ಸುದ್ದಿ ಪ್ರಕಟಿಸಿದ್ದೆವು. ಇದರ ಬೆನ್ನಲ್ಲೇ ಇನ್ನಷ್ಟು ಸಿಹಿಕರ ವಾರ್ತೆ ಬಂದಿದ್ದು, ಹರ್ಲಿ ವಿಶೇಷವಾಗಿಯೂ ಭಾರತ ಮಾರುಕಟ್ಟೆ ಗುರಿಯಾಗಿರಿಸಿಕೊಂಡು 250 ಹಾಗೂ 300ಸಿಸಿ ಬೈಕ್‌ಗಳನ್ನು ಲಾಂಚ್ ಮಾಡುವ ಇರಾದೆ ಹೊಂದಿದೆ.

ಅಂದರೆ ನೂತನ 250 ಹಾಗೂ 300 ಸಿಸಿ ಬೈಕ್‌ಗಳು 2 ರಿಂದ 3 ಲಕ್ಷ ರು.ಗಳ ಅಸುಪಾಸಿನಲ್ಲಿ ಲಭ್ಯವಾಗಲಿದೆ. ಈ ಮೂಲಕ ದೇಶದಲ್ಲಿ ಭಾರಿ ಸದ್ದು ಮಾಡುತ್ತಿರುವ ಅತಿ ಬೇಡಿಕೆಯ ರಾಯಲ್ ಎನ್‌ಫೀಲ್ಡ್ ಬುಲೆಟ್‌ಗಳಿಗೆ ನೇರ ಪೈಪೋಟಿ ಹಣೆಯಲು ಸಜ್ಜಾಗುತ್ತಿದೆ.

ಹರ್ಲಿಯಿಂದ ಬರಲಿದೆ 250ಸಿಸಿ ಬೈಕ್

ನೂತನ ಬೈಕ್‌ಗಳನ್ನು ಸಂಪೂರ್ಣ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗುವುದು. ಇದು ಸ್ಮರ್ಧಾತ್ಮಕ ದರಗಳಲ್ಲಿ ಮಾರಾಟ ಮಾಡಲು ನೆರವಾಗಲಿದೆ.

ಹರ್ಲಿಯಿಂದ ಬರಲಿದೆ 250ಸಿಸಿ ಬೈಕ್

ರಾಯಲ್ ಎನ್‌ಫೀಲ್ಡ್ ಜತೆಗೆ ಬಜಾಜ್ ಪಲ್ಸರ್, ಹೀರೊ ಕರಿಜ್ಮಾ ಝಡ್‌ಎಂಆರ್‌‍ಗಳಂತಹ ಬೈಕ್‌ಗಳಿಗೆ ಪೈಪೋಟಿ ನೀಡಲಿದೆ.

ಹರ್ಲಿಯಿಂದ ಬರಲಿದೆ 250ಸಿಸಿ ಬೈಕ್

ಪ್ರಸ್ತುತ ಬೈಕ್‌ಗಳು ಅಭಿವೃದ್ಧಿ ಹಂತದಲ್ಲಿದ್ದು, ದರ ಬಗ್ಗೆ ಯಾವುದೇ ಮಾಹಿತಿ ಹೊರಬಂದಿಲ್ಲ.

ಹರ್ಲಿಯಿಂದ ಬರಲಿದೆ 250ಸಿಸಿ ಬೈಕ್

ಜಗತ್ತಿನಾದ್ಯಂತದ ಬೈಕ್ ಪ್ರೇಮಿಗಳ ಕನಸು ನನಸಾಗಿವುದು ಹರ್ಲಿ ಗುರಿಯಾಗಿದೆ. ಈ ನಿಟ್ಟಿನಲ್ಲಿ ವಿಭಿನ್ನ ಮಾರುಕಟ್ಟೆಗಳಿಗೆ ಆಧಾರವಾಗಿ ಬೈಕ್‌ಗಳನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಲ್ಲಿದೆ.

ಹರ್ಲಿಯಿಂದ ಬರಲಿದೆ 250ಸಿಸಿ ಬೈಕ್

2009ನೇ ಇಸವಿಯಲ್ಲಿ ಭಾರತಕ್ಕೆ ಲಗ್ಗೆಯಿಟ್ಟಿದ್ದ ಹರ್ಲಿ ಡೇವಿಡ್ಸನ್ ಇದುವರೆಗೆ 2000ದಷ್ಟು ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಇದು ದೇಶದಲ್ಲಿ ಹರ್ಲಿ ಬೇಡಿಕೆಗೆ ಕಾರಣವಾಗಿದೆ.

ಹರ್ಲಿಯಿಂದ ಬರಲಿದೆ 250ಸಿಸಿ ಬೈಕ್

ಒಟ್ಟಾರೆಯಾಗಿ ಜಾಗತಿಕ ಬೈಕ್ ತಯಾರಕ ಕಂಪನಿಗಳ ಪೈಪೋಟಿಗೆ ಭಾರತ ವೇದಿಕೆಯಾಗುತ್ತಿದೆ. ಯಾಕೆಂದರೆ ಅಮೆರಿಕ ತಲಹದಿಯದ್ದೇ ಆಗಿರುವ ಟ್ರಯಂಪ್ ಮೋಟಾರ್ ಸೈಕಲ್ ಸಹ ಭಾರತದಲ್ಲಿ ಭದ್ರ ನೆಲೆ ಸ್ಥಾಪಿಸುವ ನಿರೀಕ್ಷೆಯಲ್ಲಿದೆ.

ಹರ್ಲಿಯಿಂದ ಬರಲಿದೆ 250ಸಿಸಿ ಬೈಕ್

ಈ ನಡುವೆ ಕಳೆದ 14 ವರ್ಷಗಳಲ್ಲೇ ಸಂಪೂರ್ಣ ಹೊಸತಾದ ಫ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣಗೊಂಡಿರುವ ಹರ್ಲಿ 500 ಹಾಗೂ 750ಸಿಸಿ ಬೈಕ್‌ಗಳು ಭಾರತವನ್ನು ಮುಂದಿನ ವರ್ಷ ಪ್ರವೇಶಿಸಲಿದೆ. ಇದಕ್ಕೂ ಮೊದಲು 2014 ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಕಾಣಲಿದೆ.

ಹರ್ಲಿಯಿಂದ ಬರಲಿದೆ 250ಸಿಸಿ ಬೈಕ್

ಡಾರ್ಕ್ ಕಸ್ಟಮ್ ಬೈಕ್ ಎಂದೇ ವರ್ಣಿಸಲ್ಪಟ್ಟಿರುವ ಈ ಬೈಕ್‌ಗಳು ಹರಿಯಾಣದ ಬವಾಲ್‌ ಘಟಕದಲ್ಲಿ ತಯಾರುಗೊಳ್ಳಲಿದೆ.

Most Read Articles

Kannada
English summary
Harley Davidson Street 750 and Street 500, the ‘Dark Custom' cruiser bikes from the American motorcycle marquee were unveiled earlier this week at EICMA in Milan, Italy. These bikes have been developed specifically keeping in mind, the high volume Indian two wheeler market. As such, they will be manufactured in India as well, making the bikes easy to afford.
Story first published: Thursday, November 7, 2013, 17:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X