ಹರ್ಲಿ...ಹರ್ಲಿ...ಹರ್ಲಿ...ಇದೇ ಬೇಬಿ ಹರ್ಲಿ

By Nagaraja

ಹರ್ಲಿ...ಹರ್ಲಿ...ಹರ್ಲಿ...ಹೌದು, ಇದೇ ಹರ್ಲಿ ಡೇವಿಡ್ಸನ್‌ನಿಂದ ದೇಶಕ್ಕೆ ಪರಿಚಯವಾಗಲಿರುವ ನೂತನ 500ಸಿಸಿ ಬೇಬಿ ಬೈಕ್. ಸಂಪೂರ್ಣವಾಗಿ ದೇಶಿಯವಾಗಿ ನಿರ್ಮಿಸಲ್ಪಡುತ್ತಿರುವ ಹರ್ಲಿ ಡೇವಿಡ್ಸನ್ 500ಸಿಸಿ ಬೈಕ್ 'ಮೇಡ್ ಇನ್ ಇಂಡಿಯಾ' ಎನಿಸಿಕೊಳ್ಳಲಿದೆ.

ಈಗಾಗಲೇ ಟೆಸ್ಟಿಂಗ್ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆಸಿಕ್ಕಿರುವ 500ಸಿಸಿ ಬೈಕ್, ಐಕಾನಿಕ್ ಹರ್ಲಿ ಡೇವಿಡ್ಸನ್‌ನಿಂದ ಉತ್ಪಾದನೆಯಾಗುತ್ತಿರುವ ಕಡಿಮೆ ಎಂಜಿನ್ ಸಾಮರ್ಥ್ಯದ ಬೈಕಾಗಿದೆ. ಇದು ಸ್ಮರ್ಧಾತ್ಮಕ ದರಗಳಲ್ಲಿ ದೇಶದ ಮಾರುಕಟ್ಟೆಗೆ ಪರಿಚಯಿಸಲು ನೆರವಾಗಲಿದ್ದು, ಇದರೊಂದಿಗೆ ಹರ್ಲಿ ಡೇವಿಡ್ಸನ್ ಬೈಕ್ ಹೊಂದಿರಬೇಕೆಂಬ ದೇಶದ ಬೈಕ್ ಪ್ರಿಯರ ಕನಸು ನನಸಾಗಲಿದೆ.

ಟೆಸ್ಟಿಂಗ್

ಟೆಸ್ಟಿಂಗ್

ನೂತನ ಹರ್ಲಿ ಡೇವಿಡ್ಸನ್ 500ಸಿಸಿ ಬೈಕ್ ಗುರ್ಗಾಂವ್ ಮತ್ತು ಫರಿದಾಬಾದ್ ಹೈವೇನಲ್ಲಿ ಪರೀಕ್ಷೆ ನಡೆಸುತ್ತಿರುವ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆಸಿಕ್ಕಿವೆ.

ಹರ್ಲಿ ಲೊಗೊದ ಅಭಾವ

ಹರ್ಲಿ ಲೊಗೊದ ಅಭಾವ

ಇಲ್ಲಿ ವಿಶೇಷವೆಂದರೆ ಇದರಲ್ಲಿ ಹರ್ಲಿ ಡೇವಿಡ್ಸನ್ ಕಂಪನಿಯ ಲೆಗೊ ಲಗತ್ತಿಸಲಾಗಿಲ್ಲ. ಅಷ್ಟೇ ಯಾಕೆ ಬೈಕ್ ವಿನ್ಯಾಸವನ್ನು ಕ್ಯಾಮೆರಾ ಕಣ್ಣುಗಳಿಂದ ಮರೆಮಾಚುವ ಪ್ರಯತ್ನ ಸಹ ಮಾಡಿರಲಿಲ್ಲ.

ಹರ್ಲಿ ವಿನ್ಯಾಸ

ಹರ್ಲಿ ವಿನ್ಯಾಸ

ಆದರೆ ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ನಿಸ್ಸಂಶಯವಾಗಿಯೂ ಇದು ಹರ್ಲಿ ಬೈಕಾಗಿದೆ. ಇದ ಸದ್ಯ ಮಾರುಕಟ್ಟೆಯಲ್ಲಿರುವ ಹರ್ಲಿ ವಿನ್ಯಾಸವನ್ನು ಪಡೆದುಕೊಂಡಿದೆ.

ಹರ್ಲಿ ಸ್ಪೋರ್ಟ್‌ಸ್ಟರ್

ಹರ್ಲಿ ಸ್ಪೋರ್ಟ್‌ಸ್ಟರ್

500ಸಿಸಿ ಎಂಜಿನ್ ಆಳವಡಿಸಲಾಗಿದೆ ಎಂಬುದರ ಹೊರತಾಗಿ ಇತರ ಯಾವುದೇ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಇದು 35ರಿಂದ 45 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಅಗ್ಗದ ಬೈಕ್

ಅಗ್ಗದ ಬೈಕ್

ಬೇಬಿ ಹರ್ಲಿ ಎಂದೇ ಬಣ್ಣಿಸಲ್ಪಟ್ಟಿರುವ ನೂತನ 500ಸಿಸಿ ಬೈಕ್ ಭಾರತ ಸೇರಿದಂತೆ ಇತರ ಏಷ್ಯಾ ಮಾರುಕಟ್ಟೆಗಳನ್ನು ಗುರಿಯಾಗಿರಿಸಿಕೊಂಡಿದೆ. ಇದದ ದರ 4.5ರಿಂದ 5 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ ಎಂದು ಅಂದಾಜಿಸಲಾಗಿದೆ.

Most Read Articles

Kannada
English summary
Harley Davidson is developing a small displacement motorcycle especially for India. This exciting piece of news was revealed to the world straight from the mouth of company COO Matthew Levatich during the 110th anniversary celebrations in Milwaukee, USA. You can read more about that story here.
Story first published: Tuesday, September 10, 2013, 10:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X