ಕನಸು ನನಸು; ಹರ್ಲಿಗೆ 'ಮೇಡ್ ಇನ್ ಇಂಡಿಯಾ' ಟಚ್

By Nagaraja

ಹಿಂದೆಲ್ಲ ಭಾರತೀಯ ಗ್ರಾಹಕರಿಗೆ ಪ್ರತಿಷ್ಠಿತ ಹರ್ಲಿ ಡೇವಿಡ್ಸನ್ ಬೈಕ್ ಓಡಿಸುವುದು ಕನಸಿನ ವಿಚಾರವಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಇಡೀ ವಿಶ್ವವೇ ಬೆಳೆದು ಬರುತ್ತಿರುವ ಭಾರತದ ವಿಸ್ತಾರವಾದ ವಾಹನ ಮಾರುಕಟ್ಟೆಯನ್ನು ಬಹಳ ನಿಕಟವಾಗಿ ಗಮನಿಸುತ್ತಿದೆ.

ಇವೆಲ್ಲದಕ್ಕೂ ಕಾರಣ ಗ್ರಾಹಕರಿಂದ ದೊರಕುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆ. ಇದುವರೆಗೆ ಸ್ವದೇಶಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಓಡಿಸಿ ಮಜಾ ಉಡಾಯಿಸಿದವರಿಗೆ ಇನ್ನೊಂದು ಹೊಸ ಬೈಕ್‌ನ ಅನುಭವ ಸಿಗಲಿದೆ.

ಹೌದು, ಅಮೆರಿಕದ ಐಕಾನಿಕ್ ಕಂಪನಿಯಾಗಿರುವ ಹರ್ಲಿ ಡೇವಿಡ್ಸನ್ ಸದ್ಯದಲ್ಲೇ ಸಂಪೂರ್ಣ 'ಮೇಡ್ ಇನ್ ಇಂಡಿಯಾ' ರೂಪ ಪಡೆದುಕೊಳ್ಳಲಿದೆ. ಅಂದರೆ ಇದುವರೆಗೆ ಹರಿಯಾಣದ ಮಾನೇಸರ್ ಘಟಕದಲ್ಲಿ ಜೋಡಣೆಯಾಗುತ್ತಿದ್ದ ಹರ್ಲಿ ಬೈಕ್‌ಗಳು ಇನ್ನು ಮುಂದೆ ಪೂರ್ಣವಾಗಿಯೂ ದೇಶಿ ಲುಕ್ ಪಡೆದುಕೊಳ್ಳಲಿದ್ದು, ಭಾರತದಲ್ಲೇ ತಯಾರಿಯಾಗಲಿದೆ.

ಈ ಕ್ರಾಂತಿಕಾರಿ ಬೆಳವಣಿಗೆಗೆ ಸದ್ಯದಲ್ಲೇ ಭಾರತ ಮಾರುಕಟ್ಟೆ ಸಾಕ್ಷಿಯಾಗಲಿದೆ. ದೇಶೀಯ ನಿರ್ಮಿತ ಹರ್ಲಿ ಡೇವಿಡ್ಸನ್ 500 ಹಾಗೂ 750ಸಿಸಿ ನಿಕಟ ಭವಿಷ್ಯದಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ.

ಹರ್ಲಿ ಡೇವಿಡ್ಸನ್ 500 ಮತ್ತು 750ಸಿಸಿ ಬೈಕ್

ಈಗಾಗಲೇ ಯಶಸ್ವಿ ಪರೀಕ್ಷೆ ಹಂತವನ್ನು ದಾಟಿರುವ ಹರ್ಲಿ ಡೇವಿಡ್ಸನ್ 500 ಹಾಗೂ 750ಸಿಸಿ ಬೈಕ್‌ ಆಗಮನವನ್ನು ಭಾರತೀಯ ಗ್ರಾಹಕರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಈ ಪೈಕಿ 750ಸಿಸಿ ಕ್ರೂಸರ್ ಬೈಕ್ ಉಡುಗೊರೆಯಾಗಿ ಲಭಿಸಿದಂತಾಗಿದೆ.

ಹರ್ಲಿ ಡೇವಿಡ್ಸನ್ 500 ಮತ್ತು 750ಸಿಸಿ ಬೈಕ್

ನವೆಂಬರ್ ತಿಂಗಳಲ್ಲಿ ಇಟಲಿಯಲ್ಲಿ ನಡೆಯಲಿರುವ ಮಿಲಾನ್ (EICMA) ಮೋಟಾರ್ ಶೋದಲ್ಲಿ ಈ ಎರಡೂ ಬೈಕ್‌ಗಳು ಪ್ರದರ್ಶನ ಕಾಣಲಿದೆ. ಈ ಮೂಲಕ ಭಾರತ ಸೇರಿದಂತೆ ದಕ್ಷಿಣ ಪೂರ್ವ ಹಾಗೂ ಯುರೋಪ್ ಮಾರುಕಟ್ಟೆಗಳನ್ನು ಹರ್ಲಿ ಗುರಿ ಮಾಡುತ್ತಿದೆ.

ಹರ್ಲಿ ಡೇವಿಡ್ಸನ್ 500 ಮತ್ತು 750ಸಿಸಿ ಬೈಕ್

ನೂತನ ಹರ್ಲಿ ಡೇವಿಡ್ಸನ್ 500 ಹಾಗೂ 750 ಸಿಸಿ ಬೈಕ್‌ಗಳು ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

ಹರ್ಲಿ ಡೇವಿಡ್ಸನ್ 500 ಮತ್ತು 750ಸಿಸಿ ಬೈಕ್

ಸೂಪರ್‌ಲೊ 883 ಸಿಸಿ ಬೈಕ್ (69 ಎನ್‌ಎಂ ಟಾರ್ಕ್) ಹರ್ಲಿಯಿಂದ ಇದುವರೆಗೆ ಉತ್ಪಾದಿಸಿರುವ ಅತ್ಯಂತ ಕಡಿಮೆ ಎಂಜಿನ್ ಸಾಮರ್ಥ್ಯವುಳ್ಳ ಬೈಕಾಗಿದೆ. ಇದರೊಂದಿಗೆ ಇನ್ನಷ್ಟೇ ಆಗಮನವಾಗಲಿರುವ 500 ಮತ್ತು 700ಸಿಸಿ ಬೈಕ್‌ಗಳ ಮೇಲೆ ನಿರೀಕ್ಷೆ ಹೆಚ್ಚಿದೆ. ಇದು 45ರಿಂದ 47 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ನಿರೀಕ್ಷೆಯಿದೆ.

ಹರ್ಲಿ ಡೇವಿಡ್ಸನ್ 500 ಮತ್ತು 750ಸಿಸಿ ಬೈಕ್

ಭಾರತದಲ್ಲಿ ಹರ್ಲಿ ಡೇವಿಡ್ಸನ್ ಸೂಪರ್‌ಲೊ ಬೆಲೆ 5.91 ಲಕ್ಷ ರು.ಗಳಾಗಿವೆ. ಅಂದರೆ ನೂತನ 500ಸಿಸಿ ಬೈಕ್‌ಗಳು 4 ಲಕ್ಷ ರು.ಗಳ ಅಸುಪಾಸಿನಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಅದೇ ರೀತಿ 750 ಸಿಸಿ ಬೈಕ್‌ ದರ 5 ಲಕ್ಷ ರು. ಅಂದಾಜಿಸಲಾಗಿದೆ.

Most Read Articles

Kannada
English summary
Harley Davidson Street 750 and Harley Davidson Street 500. These are the very two bikes which have been spotted testing on Indian roads near Harley's facilities several times these past months.
Story first published: Monday, November 4, 2013, 14:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X