ಹೊಸ ಹೀರೊ ಎಕ್ಸ್‌ಟ್ರೀಮ್ 150ಸಿಸಿ ಬೈಕ್ ಭರ್ಜರಿ ಲಾಂಚ್

By Nagaraja

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಮಗದೊಂದು ಅತ್ಯಾಕರ್ಷಕ ಎಕ್ಸ್‌ಟ್ರೀಮ್ 150 ಸಿಸಿ ಬೈಕನ್ನು ದೇಶದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಇದರೊಂದಿಗೆ ದೇಶದಲ್ಲಿ ಹೀರೊ ದ್ವಿಚಕ್ರ ಮಾದರಿಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.

ನೂತನ ಹೀರೊ ಎಕ್ಸ್‌ಟ್ರೀಮ್ 150ಸಿಸಿ ಬೈಕ್ ಪುಣೆ ಎಕ್ಸ್ ಶೋ ರೂಂ ಪ್ರಾರಂಭಿಕ ದರ 67,364 ರು. ಗಳಾಗಿವೆ. ಅಂದ ಹಾಗೆ ನೂತನ ಎಕ್ಸ್‌ಟ್ರೀಮ್ ನಾಲ್ಕು ಅತ್ಯಾಕರ್ಷಕ ಬಣ್ಣದ ವೆರಿಯಂಟ್‌ಗಳಲ್ಲಿ ಆಗಮನವಾಗಲಿದೆ. ಅವುಗಳೆಂದರೆ ಓರೆಂಜ್, ಸಿಲ್ವರ್, ಬ್ಲ್ಯಾಕ್ ಮತ್ತು ರೆಡ್.

ಹೊಸ ಹೀರೊ ಎಕ್ಸ್‌ಟ್ರೀಮ್ 150ಸಿಸಿ ಬೈಕ್ ಭರ್ಜರಿ ಲಾಂಚ್

ಇದು ವರ್ಷದ ಆರಂಭದಲ್ಲಿ ಎಚ್‌ಎಕ್ಸ್250ಆರ್ ಜತೆಗೆ ಪ್ರದರ್ಶಿಸಿದ ಅದೇ ಎಕ್ಸ್‌ಟ್ರೀಮ್ ಬೈಕ್ ಆಗಿರಬಹುದೇ? ಎಂಬ ಸಂಶಯ ನಿಮ್ಮನ್ನು ಕಾಡಿದ್ದಲ್ಲಿ ನಮ್ಮ ಉತ್ತರ ಇಲ್ಲ ಎಂಬುದಾಗಿದೆ. ಇದು ವಿಭಿನ್ನ ಎಕ್ಸ್‌ಟ್ರೀಮ್ ವೆರಿಯಂಟ್ ಆಗಿದ್ದು, ಈ ಹಿಂದೆ ಪ್ರದರ್ಶನಗೊಂಡಿದ್ದ ಎಕ್ಸ್‌ಟ್ರೀಮ್ ಸ್ಪೋರ್ಟ್ಸ್ ಇನ್ನಷ್ಟೇ ಲಾಂಚ್ ಆಗಬೇಕಾಗಿದೆ.

ಹೊಸ ಹೀರೊ ಎಕ್ಸ್‌ಟ್ರೀಮ್ 150ಸಿಸಿ ಬೈಕ್ ಭರ್ಜರಿ ಲಾಂಚ್

ಎರಡು ವೆರಿಯಂಟ್‌ಗಳಲ್ಲಿ ಎಕ್ಸ್‌ಟ್ರೀಮ್ ಲಭ್ಯವಾಗಲಿದೆ. ಈ ಪೈಕಿ ಫ್ರಂಟ್ ಡಿಸ್ಕ್ (240 ಎಂಎಂ) ಬ್ರೇಕ್ ಹಾಗೂ ರಿಯರ್ ಡ್ರಮ್ (130ಎಂಎಂ) ಬ್ರೇಕ್ ಮತ್ತು ಫ್ರಂಟ್ ಆಂಡ್ ರಿಯರ್ ಡಿಸ್ಕ್ (220 ಎಂಎಂ) ಬ್ರೇಕ್‌ಗಳು ಲಭ್ಯವಾಗಲಿದೆ. ಎರಡನೇಯ ವೆರಿಯಂಟ್ ಪುಣೆ ಎಕ್ಸ್ ಶೋ ರೂಂ ದರ 70,678 ರು.ಗಳಾಗಿವೆ.

ಹೊಸ ಹೀರೊ ಎಕ್ಸ್‌ಟ್ರೀಮ್ 150ಸಿಸಿ ಬೈಕ್ ಭರ್ಜರಿ ಲಾಂಚ್

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದು ಸಿಬಿಝಡ್‌ ಎಕ್ಸ್‌ಟ್ರೀಮ್‌ನಲ್ಲಿರುವುದಕ್ಕೆ ಸಮಾನವಾದ 149.2ಸಿಸಿ, ಏರ್ ಕೂಲ್ಡ್, 4 ಸ್ಟ್ರೋಕ್ ಎಸ್‌ಒಎಚ್‌ಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು 14.4 ಪಿಎಎಸ್ ಪವರ್ (12.80 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ವೈಶಿಷ್ಟ್ಯಗಳೇನು?

ವೈಶಿಷ್ಟ್ಯಗಳೇನು?

ನೂತನ ಎಕ್ಸ್‌ಟ್ರೀಮ್ 150 ಸಿಸಿ ಬೈಕ್‌ನಲ್ಲಿ ರಿಯರ್ ಎಲ್‌ಇಡಿ ಲೈಟ್ಸ್ ಜತೆಗೆ ಹೊಸ ಗ್ರಾಫಿಕ್ಸ್, ನೂತನ ಹೆಡ್ ಲೈಟ್, ಹೊಸ ಟರ್ನ್ ಇಂಡಿಕೇಟರ್, ಸೈಡ್ ಸ್ಟಾಂಡ್ ಇಂಡಿಕೇಟರ್, ಸ್ಟಾಂಡರ್ಡ್ ಅಲಾಯ್ ವೀಲ್, ಸೀಟಿನಡಿಯಲ್ಲಿ ಮೊಬೈಲ್ ಚಾರ್ಜರ್, ಹಿಂಭಾಗದಲ್ಲಿ ಅಗಲವಾದ ಚಕ್ರ, ಎಂಜಿನ್ ಇಂಮೊಬಿಲೈಜರ್, ಡ್ಯುಯಲ್ ಟೋನ್ ಸೈಲನ್ಸರ್ ಮತ್ತು ಅನಾಲಾಗ್ ಪ್ಲಸ್ ಡಿಜಿಟಲ್ ಡಿಸ್‌ಪ್ಲೇ ಪ್ರಮುಖವಾಗಿರಲಿದೆ.

ಆಯಾಮ

ಆಯಾಮ

ಉದ್ದ - 2060 ಎಂಎಂ

ಅಗಲ - 765 ಎಂಎಂ

ಎತ್ತರ - 1145 ಎಂಎಂ

ವೀಲ್‌ಬೇಸ್ - 1325 ಎಂಎಂ

ಗ್ರೌಂಡ್ ಕ್ಲಿಯರನ್ಸ್ - 145 ಎಂಎಂ

ಇಂಧನ ಟ್ಯಾಂಕ್ ಸಾಮರ್ಥ್ಯ - 12.1 ಲೀಟರ್

ರಿಸರ್ವ್ - 1.5 ಲೀಟರ್

ಕರ್ಬ್ ಭಾರ - 145 ಕೆಜಿ (ರಿಯರ್ ಬ್ರೇಕ್-ಡ್ರಮ್)

146 ಕೆ.ಜಿ (ರಿಯರ್ ಬ್ರೇಕ್ - ಡಿಸ್ಕ್)

ಹೊಸ ಹೀರೊ ಎಕ್ಸ್‌ಟ್ರೀಮ್ 150ಸಿಸಿ ಬೈಕ್ ಭರ್ಜರಿ ಲಾಂಚ್

ಹೊಸ ಎಕ್ಸ್‌ಟ್ರೀಮ್‌ನಲ್ಲಿ ನಯವಾಗಿಯೂ ನುಣುಪಾಗಿಯೂ ಹೊಳಪಾದ ವಿನ್ಯಾಸ ಕಾಪಾಡಿಕೊಳ್ಳಲಾಗಿದೆ. ಅಷ್ಟಕ್ಕೂ ಇದು ಗ್ರಾಹಕರನ್ನು ಎಷ್ಟರ ಮಟ್ಟಿಗೆ ಆಕರ್ಷಿಸಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲೇ ಉತ್ತರ ದೊರಕಲಿದೆ.

Most Read Articles

Kannada
English summary
India’s largest two wheeler manufacturer, has launched yet another motorcycle in the auto industry – Xtreme 150 cc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X