ಆಕ್ಟಿವಾ ಓಟಕ್ಕೆ ಕಡಿವಾಣ ಹಾಕಿತೇ ಸ್ಪ್ಲೆಂಡರ್?

ದೇಶದ ಅತಿದೊಡ್ಡ ದ್ವಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ತನ್ನ ಜನಪ್ರಿ ಸ್ಪ್ಲೆಂಡರ್ ಮಾದರಿಯ ಪ್ರಯಾಣಿಕ ಬೈಕ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿದೆ.

ಸ್ಟಾರ್ಟ್-ಸ್ಟಾಪ್-ಸ್ಟಾರ್ಟ್; ಹೀರೊ ಸ್ಪ್ಲೆಂಡರ್ ಐಸ್ಮಾರ್ಟ್ ಲಾಂಚ್

ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಕಂಡುಬಂದಿರುವ ಹಿನ್ನಲೆಯಲ್ಲಿ ಹೀರೊದಿಂದ ಇಂತಹದೊಂದು ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ಈ ಮೂಲಕ ಹೋಂಡಾದ ಆಕ್ಟಿವಾ ಓಟಕ್ಕೆ ಬ್ರೇಕ್ ಹಾಕುವ ಪ್ರಯತ್ನದಲ್ಲಿದೆ. ದೇಶದ ಅತ್ಯಂತ ಜನಪ್ರಿಯ ಬ್ರಾಂಡ್‌ಗಳಲ್ಲಿ ಒಂದಾಗಿರುವ ಸ್ಪ್ಲೆಂಡರ್ ಕಳೆದ ಕೆಲವು ಸಮಯಗಳಿಂದ ತನ್ನ ಆವೇಗವನ್ನು ಕಳೆದುಕೊಳ್ಳುತ್ತಿದೆ. ಹಾಗಾಗಿ ಐಸ್ಮಾರ್ಟ್‌ಗಳಂತಹ ನೂತನ ಆವೃತ್ತಿ ಮೂಲಕ ತಿರುಗೇಟು ನೀಡುವ ಇರಾದೆಯಲ್ಲಿದೆ.

ಆಕ್ಟಿವಾ ಓಟಕ್ಕೆ ಕಡಿವಾಣ ಹಾಕಿತೇ ಸ್ಪ್ಲೆಂಡರ್?

ಕಳೆದ ಒಂದು ವರ್ಷದೊಳಗೆ ಎರಡು ಬಾರಿ (2013 ಸೆಪ್ಟೆಂಬರ್, 2014 ಮಾರ್ಚ್) ಮಾಸಿಕ ಮಾರಾಟದಲ್ಲಿ ಸ್ಪ್ಲೆಂಡರ್ ಮಾರಾಟವನ್ನು ಆಕ್ಟಿವಾ ಹಿಂದಿಕ್ಕಿತ್ತು. ಇದು ಸ್ಪ್ಲೆಂಡರ್ ಖ್ಯಾತಿಗೆ ಚ್ಯುತಿ ತಂದಿತ್ತು.

ಆಕ್ಟಿವಾ ಓಟಕ್ಕೆ ಕಡಿವಾಣ ಹಾಕಿತೇ ಸ್ಪ್ಲೆಂಡರ್?

ಇದರಂತೆ ಇತ್ತೀಚೆಗಷ್ಟೇ ಪರಿಚಯವಾಗಿರುವ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನದ ಸ್ಪ್ಲೆಂಡರ್ ಐಸ್ಮಾರ್ಟ್ ಉತ್ಪಾದನಾ ಸಾಮರ್ಥ್ಯವನ್ನು 800 ಯುನಿಟ್‌ಗಳಿಂದ 1200 ಯುನಿಟ್‌ಗಳಿಗೆ ಏರಿಸಲು ನಿರ್ಧರಿಸಲಾಗಿದೆ.

ಆಕ್ಟಿವಾ ಓಟಕ್ಕೆ ಕಡಿವಾಣ ಹಾಕಿತೇ ಸ್ಪ್ಲೆಂಡರ್?

ಹಾಗೆಯೇ 100ಸಿಸಿ ಸ್ಪ್ಲೆಂಡರ್ ಆವೃತ್ತಿಗಳಾದ ಪ್ರೊ, ಸ್ಪ್ಲೆಂಡರ್ ಪ್ಲಸ್ ಹಾಗೂ 125 ಸಿಸಿ ಸೂಪರ್ ಸ್ಪ್ಲೆಂಡರ್ ನಿರ್ಮಾಣ ಸಾಮರ್ಥ್ಯ ಸಹ ವೃದ್ಧಿಯಾಗಲಿದೆ.

ಆಕ್ಟಿವಾ ಓಟಕ್ಕೆ ಕಡಿವಾಣ ಹಾಕಿತೇ ಸ್ಪ್ಲೆಂಡರ್?

ರಾಜಸ್ತಾನದಲ್ಲಿರುವ ನೀಮ್‌ರಾನಾ ಘಟಕದ ಕಾರ್ಯಾಚರಣೆ ಆರಂಭದ ಬಳಿಕ ನಿರ್ಮಾಣ ಸಾಮರ್ಥ್ಯ ಉತ್ತೇಜನ ತುಂಬಲಿದೆ. ಈ 7.5 ಲಕ್ಷದ ಘಟಕದ ಜತೆಗೆ ಗುರ್ಗಾಂವ್, ದಾರುಹೇರಾ ಹಾಗೂ ಹರಿದ್ವಾರಗಳಲ್ಲೂ ಹೀರೊ ಘಟಕ ಕಾರ್ಯಾಚರಿಸಲಿದೆ.

ಆಕ್ಟಿವಾ ಓಟಕ್ಕೆ ಕಡಿವಾಣ ಹಾಕಿತೇ ಸ್ಪ್ಲೆಂಡರ್?

ಈ ನಡುವೆ ಆಕ್ಟಿವಾ 125 ಸಹ ಬಿಡುಗಡೆಯಾಗಿರುವುದು ಸ್ಪ್ಲೆಂಡರ್‌ಗೆ ಎಚ್ಚರಿಕೆಯ ಕರೆಗಂಟೆಯಾಗಿ ಪರಿಣಮಿಸಿದೆ. ಈ ಹಿನ್ನಲೆಯಲ್ಲಿ ಹೊಸತಾದ ಐಸ್ಮಾರ್ಟ್ ಮುಖಾಂತರ ತಿರುಗೇಟು ನೀಡುವ ಇರಾದೆಯಲ್ಲಿದೆ.

Most Read Articles

Kannada
English summary
Hero MotoCorp, India's largest two wheeler manufacturer, has decided to ramp up production of its Splendor models to cater to increased demand and to fend off Honda's resilient automatic scooter, the Activa.
Story first published: Thursday, May 29, 2014, 10:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X