ಹೀರೊದಿಂದ ಹೊಸ ಪ್ಯಾಶನ್ ಪ್ರೊ ಟಿಆರ್ ಅನಧಿಕೃತ ಎಂಟ್ರಿ

By Nagaraja

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್‌ನಿಂದ ಮಗದೊಂದು ಬೈಕ್‌ನ ಅಚ್ಚರಿಯ ಪ್ರವೇಶವಾಗಿದೆ. ಯಾವುದೇ ಬಿಡುಗಡೆ ಘೋಷಣೆಯಿಲ್ಲದೆ ನೂತನ ಹೀರೊ ಪ್ಯಾಶನ್ ಪ್ರೊ ಟಿಆರ್ ಬೈಕ್ ಹೀರೊ ಅಧಿಕೃತ ವೆಬ್‌ಸೈಟ್‌ನಲ್ಲಿ ಅನಧಿಕೃತ ಪ್ರವೇಶ ಪಡೆದಿದೆ.

ಒಟ್ಟಿನಲ್ಲಿ ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡಿದ್ದ ಹೀರೊ ಪ್ಯಾಶನ್ ಪ್ರೊ ಬೈಕ್ ಅನ್ನು ಸರಳ ರೀತಿಯಲ್ಲಿ ಬಿಡುಗಡೆಗೊಳಿಸಿರುವುದು ಕುತೂಹಲ ಕೆರಳಿಸಿದೆ. ಇದು ಹಿಂದಿನ ಆವೃತ್ತಿಗಿಂತಲೂ ಹೆಚ್ಚು ಆಫ್-ರೋಡ್ ಸಾಮರ್ಥ್ಯವನ್ನು ಪಡೆಯಲಿದೆ. ಸಮಗ್ರ ಮಾಹಿತಿಗಾಗಿ ಚಿತ್ರ ಸಂಪುಟದತ್ತ ಮುಂದುವರಿಯಿರಿ.

ಹೀರೊದಿಂದ ಪ್ಯಾಶನ್ ಪ್ರೊ ಅನಧಿಕೃತ ಬಿಡುಗಡೆ

ಹೊಸ ಬೈಕ್‌ನಲ್ಲಿರುವ ಪ್ರಮುಖ ವೈಶಿಷ್ಟ್ಯವೆಂದರೆ ದೃಢವಾದ ಹ್ಯಾಂಡಲ್‌ಬಾರ್‌ನಲ್ಲಿ ಕಪ್ಪು ಅಡ್ಡಪಟ್ಟಿ ಲಗತ್ತಿಸಲಾಗಿದೆ. ಇದು ಬೈಕ್‌ಗೆ ಆಫ್ ರೋಡ್ ಲುಕ್ ನೀಡಲಿದೆ. ಅದೇ ರೀತಿ ಆಫ್ ರೋಡ್ ಚಕ್ರಗಳು, ಎಂಜಿನ್ ರಕ್ಷಣೆಗಾಗಿ ಸ್ಕಿಡ್ ಪ್ಲೇಟ್ ಮತ್ತು ಹೆಡ್‌ಲೈಟ್ ರಕ್ಷಣಾ ಕವಚ ಮುಂತಾದ ಸೌಲಭ್ಯಗಳು ಲಭಿಸಲಿದೆ.

ಹೀರೊದಿಂದ ಪ್ಯಾಶನ್ ಪ್ರೊ ಅನಧಿಕೃತ ಬಿಡುಗಡೆ

ಗ್ರಾಮೀಣ ಹಾಗೂ ಸಣ್ಣ ಪುಟ್ಟ ನಗರಗಳ ಬೇಡಿಕೆಗೆ ಅನುಸಾರವಾಗಿ ಪ್ಯಾಶನ್ ಪ್ರೊ ಟಿಆರ್ ವಿನ್ಯಾಸಗೊಳಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಒರಟಾದ ರಸ್ತೆಗಳಿರುತ್ತದೆ. ಜನರು ಇವೆಲ್ಲವನ್ನು ಪಾರು ಮಾಡಿ ತಮ್ಮ ದೈನಂದಿನ ಚಟುವಟಿಕೆಗಳಿಗಾಗಿ ಪಟ್ಟಣ ಪ್ರದೇಶಕ್ಕೆ ತರಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹೊಸ ಹೀರೊ ಬೈಕ್ ಪರಿಪೂರ್ಣವೆನಿಸಲಿದೆ.

ವಿಶಿಷ್ಟತೆ

ವಿಶಿಷ್ಟತೆ

ಹೆಡ್‌ಲೈಟ್ ಗ್ರಿಲ್,

ಹ್ಯಾಂಡಲ್‌ಬಾರ್ ಜೊತೆ ಕ್ರಾಸ್‌ಬಾರ್,

ಡಿಸೈನರ್ ನಕ್ಲ್ ಗಾರ್ಡ್,

ಹೈ ಫ್ರಂಟ್ ಫೆಂಡರ್ ಜೊತೆ ಹಗ್ಗರ್,

ವಿಶಿಷ್ಟತೆ

ವಿಶಿಷ್ಟತೆ

ಉತ್ತಮ ಗ್ರಿಪ್‌ಗಾಗಿ ವಿಶೇಷ ಟೈರ್ ಥ್ರೆಡ್ ,

ಹೊಸ ಆಕರ್ಷಕ ಗ್ರಾಫಿಕ್ಸ್,

ಉತ್ತಮ ಗ್ರಿಪ್‌ಗಾಗಿ ಮೊಣಕಾಲು ಪ್ಯಾಡ್,

ಎಂಜಿನ್‌ಗೆ ಬ್ಯಾಶ್ ಪ್ಲೇಟ್,

ಎಂಜಿನ್

ಎಂಜಿನ್

ವಿಧ - ಏರ್ ಕೂಲ್ಡ್, 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಒಎಚ್‌ಸಿ

ಸಾಮರ್ಥ್ಯ - 97.2 ಸಿಸಿ

ಗರಿಷ್ಠ ಪವರ್ - 5.74 ಕೆಡಬ್ಲ್ಯು (7.8 ಪಿಎಸ್) @ 7500 ಆರ್‌ಪಿಎಂ

ಗರಿಷ್ಠ ಟಾರ್ಕ್ - 0.82 ಕೆಜಿ-ಎಂ (8.04 ಎನ್‌ಎಂ) @ 4500 ಆರ್‌ಪಿಎಂ

ಬೋರ್ ಆಂಡ್ ಸ್ಟ್ರೋಕ್ - 50.0 x 49.5 ಎಂಎಂ

ಇಗ್ನಿಷನ್ - ಡಿಸಿ ಡಿಜಿಟಲ್ ಸಿಡಿಐ

ಟ್ರಾನ್ಸ್‌ಮಿಷನ್ ಆಂಡ್ ಫ್ರೇಮ್

ಟ್ರಾನ್ಸ್‌ಮಿಷನ್ ಆಂಡ್ ಫ್ರೇಮ್

4 ಸ್ಪೀಡ್ ಕಾನ್‌ಸ್ಟಂಟ್ ಮೆಶ್

ಫ್ರೇಮ್ ವಿಧ - ಟ್ಯೂಬೂಲರ್ ಡಬಲ್ ಕ್ರಾಡಲ್ ಫ್ರೇಮ್

ಸಸ್ಪೆಷನ್

ಸಸ್ಪೆಷನ್

ಫ್ರಂಟ್ - ಟೆಲಿಸ್ಕಾಪಿಕ್ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್

ರಿಯರ್ - ಸ್ವಿಂಗ್ ಆರ್ಮ್ ಜತೆ 5 ವಿಧದಲ್ಲಿ ಹೊಂದಾಣಿಸಬಹುದಾದ ಹೈಡ್ರಾಲಿಕ್ ಶಾಕ್ ಅಬ್ಸಾರ್ಬರ್

ಹೀರೊದಿಂದ ಪ್ಯಾಶನ್ ಪ್ರೊ ಅನಧಿಕೃತ ಬಿಡುಗಡೆ

ಬ್ರೇಕ್ - ಫ್ರಂಟ್ ಡಿಸ್ಕ್, ಹಿಂದುಗಡೆ ಡ್ರಮ್

ಆಯಾಮ

ಆಯಾಮ

ಉದ್ದ - 1980 ಎಂಎಂ

ಅಗಲ - 840 ಎಂಎಂ

ಎತ್ತರ - 1085 ಎಂಎಂ

ವೀಲ್ ಬೇಸ್ - 1235 ಎಂಎಂ

ಗ್ರೌಂಡ್ ಕ್ಲಿಯರನ್ಸ್ - 165 ಎಂಎಂ

ಇಂಧನ ಟ್ಯಾಂಕ್ ಸಾಮರ್ಥ್ಯ - 12.8 ಲೀಟರ್

ರಿಸರ್ವ್ - 1 ಲೀಟರ್

ಕರ್ಬ್ ಭಾರ - 119 ಕೆ.ಜಿ.

ಬಣ್ಣಗಳು

ಬಣ್ಣಗಳು

ಎಲೆಕ್ಟ್ರಿಕ್ ನೀಲಿ,

ಸ್ಪೋಟ್ಸ್ ಕೆಂಪು,

ಕಪ್ಪು ಜೊತೆ ಕ್ರೀಡಾ ಕೆಂಪು

ಹೀರೊದಿಂದ ಪ್ಯಾಶನ್ ಪ್ರೊ ಅನಧಿಕೃತ ಬಿಡುಗಡೆ

ಅಂತಿಮವಾಗಿ ದರದ ಬಗ್ಗೆ ಯಾವುದೇ ಮಾಹಿತಿಗಳನ್ನು ಬಿಡುಗಡೆ ಮಾಡಿಲ್ಲ. ಅಂದ ಹಾಗೆ ನಿಮ್ಮ ಬಳಿಯೂ ಹೀರೊ ಪ್ರೊ ಬೈಕ್ ಇದೆಯೇ? ಹಾಗಿದ್ದರೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ.

Most Read Articles

Kannada
English summary
Hero MotoCorp had showcased several products at this years 2014 Auto Expo held in New Delhi. Among their various reveals was its popular Passion range with the Passion Pro TR, a motorcycle that is based on the Passion Pro by the Indian manufacturer.
Story first published: Wednesday, July 16, 2014, 10:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X