ಕೆಫೆ ರೇಸರ್ ಶೈಲಿಯ ಹೀರೊ ಸ್ಪ್ಲೆಂಡರ್ ಪ್ರೊ ಕ್ಲಾಸಿಕ್ ಲಾಂಚ್

By Nagaraja

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರಸಕ್ತ ವರ್ಷಾರಂಭದಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ ಹೀರೊ ಮೊಟೊಕಾರ್ಪ್‌ನ ಅತ್ಯಂತ ಸ್ಟೈಲಿಷ್ ಸ್ಪ್ಲೆಂಡರ್ ಪ್ರೊ ಕ್ಲಾಸಿಕ್ ಬೈಕ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ.

ನೋಡಲು ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಕೆಫೆ ರೇಸರ್ ತದ್ರೂಪದಂತಿರುವ ಹೀರೊದ ನೂತನ ಸ್ಪ್ಲೆಂಡರ್ ಪ್ರೊ ಕ್ಲಾಸಿಕ್ ಗ್ರಾಹಕರಿಗೆ ಹೊಸ ಅನುಭವ ನೀಡಲಿದೆ. ಈ ಮೂಲಕ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ, ತನ್ನ ಜನಪ್ರಿಯ ಸ್ಪ್ಲೆಂಡರ್‌ಗೆ ಹೊಸ ಆಯಾಮ ಕಲ್ಪಿಸಲಿದೆ.

ದರ ಮಾಹಿತಿ

ದರ ಮಾಹಿತಿ

ವಿನ್ಯಾಸ ಹಾಗೂ ನೋಟದಿಂದ ಎಲ್ಲ ಹೊಸತನದಿಂದ ಕೂಡಿರುವ ಹೀರೊ ಮೊಟೊಕಾರ್ಪ್, ಸ್ಪ್ಲೆಂಡರ್ ಪ್ರೊ ಕ್ಲಾಸಿಕ್ ಬೈಕ್ ದೆಹಲಿ ಆನ್ ರೋಡ್ ದರ 53.900 ರು.ಗಳಾಗಿರಲಿದೆ. ಅದರೆ ಸಾಮಾನ್ಯ ಸ್ಪ್ಲೆಂಡರ್ ಪ್ರೊಗಿಂತಲೂ 4,000 ರು. ಅಂತೆಯೇ ಸ್ಪ್ಲೆಂಡರ್ ಪ್ರೊಗಿಂತಲೂ 1000 ರು.ಗಳಷ್ಟು ದುಬಾರಿಯೆನಿಸಲಿದೆ.

ಹೊಸತೇನಿಲ್ಲ?

ಹೊಸತೇನಿಲ್ಲ?

2014 ಆಟೋ ಶೋದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿದ್ದ ಹೀರೊ ಸ್ಪ್ಲೆಂಡರ್ ಪ್ರೊ ಕ್ಲಾಸಿಕ್ ಬೈಕ್, ಕೆಫೆ ರೇಸರ್ ವಿನ್ಯಾಸವನ್ನು ಪಡೆದುಕೊಂಡಿದೆ. ಆದರೆ ನೂತನ ಬೈಕ್‌ನಲ್ಲಿ ಹೊಸತೇನಿಲ್ಲ ಎಂಬ ಟೀಕೆಗೆ ಒಳಗಾಗಿದೆ. ಆದರೆ ಐಕಾನಿಕ್ ಸ್ಪ್ಲೆಂಡರ್ ಬ್ರಾಂಡ್ ಅನ್ನು ಹೊಸ ಆಯಾಮಕ್ಕೆ ಕೊಂಡು ಹೋಗುವಲ್ಲಿ ಹೀರೊ ಯಶಸ್ವಿಯಾಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ.

ತಾಂತ್ರಿಕತೆ

ತಾಂತ್ರಿಕತೆ

ಅಂದ ಹಾಗೆ ಹೊಸ ಸ್ಪ್ಲೆಂಡರ್ ಪ್ರೊ ಕ್ಲಾಸಿಕ್ 97.2 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 7.7 ಅಶ್ವಶಕ್ತಿ (8.04 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಅಲ್ಲದೆ 4 ಸ್ಪೇಡ್ ಗೇರ್ ಬಾಕ್ಸ್ ಪಡೆಯಲಿದೆ. ಅಂದರೆ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಮುಖ್ಯಾಂಶಗಳು

ಮುಖ್ಯಾಂಶಗಳು

ಕೆಫೆ ರೇಸರ್ ಶೈಲಿಯಿಂದ ಸ್ಫೂರ್ತಿ ಪಡೆದಿರುವ ಹೊಸ ಸ್ಪ್ಲೆಂಡರ್ ಪ್ರೊ ಕ್ಲಾಸಿಕ್, ವೃತ್ತಾಕಾರಾದ ಲೈಟ್, ಕನ್ನಡಿ, ಕ್ರೋಮ್ ಮಡ್‌ಗಾರ್ಡ್ ಮತ್ತು ಸ್ಪೋಕ್ ವೀಲ್ ಪಡೆದುಕೊಂಡಿದೆ. ಇದುವೇ ಈ ಬೈಕನ್ನು ಇನ್ನಷ್ಟು ವಿಶಿಷ್ಟವಾಗಿಸಿದೆ.

ಹೊಸ ಅನುಭವ

ಹೊಸ ಅನುಭವ

ಹಾಗಿದ್ದರೂ ನಗರ ಪ್ರದೇಶಗಳಲ್ಲಿ ಹೊಸ ಸ್ಪ್ಲೆಂಡರ್ ಪ್ರೊ ಕ್ಲಾಸಿಕ್ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವ ಸಾಧ್ಯತೆಗಳಿಲ್ಲ. ಹಾಗಿದ್ದರೂ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಹೆಚ್ಚು ಹೊಸತನದ ಅನುಭವ ನೀಡುವ ಸಾಧ್ಯತೆಯಿದೆ.

ಕೆಫೆ ರೇಸರ್ ಶೈಲಿ

ಕೆಫೆ ರೇಸರ್ ಶೈಲಿ

ಒಟ್ಟಾರೆಯಾಗಿ ನಿಸ್ಸಂಶಯವಾಗಿಯೂ ವಿಶ್ವದಲ್ಲಿ ಅತಿ ಕಡಿಮೆ ದರದಲ್ಲಿ ಮಾರಾಟವಾಗುತ್ತಿರುವ ಕೆಫೆ ರೇಸರ್ ವಿನ್ಯಾಸಿತ ಬೈಕೆಂಬ ಖ್ಯಾತಿಯನ್ನು ಸ್ಪ್ಲೆಂಡರ್ ಪ್ರೊ ಕ್ಲಾಸಿಕ್ ಪಡೆದುಕೊಳ್ಳಬಹುದಾಗಿದೆ.

Most Read Articles

Kannada
English summary
Hero MotoCorp launches Splendor Pro Classic
Story first published: Wednesday, September 3, 2014, 18:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X