ಸೂಪರ್ ಸ್ಪ್ಲೆಂಡರ್ ಸೂಪರೋ ಸೂಪರ್

By Nagaraja

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ತನ್ನ ಜನಪ್ರಿಯ ಸೂಪರ್ ಸ್ಪ್ಲೆಂಡರ್‌ಗೆ ಕೆಲವೊಂದು ಸಣ್ಣ ರೀತಿಯ ಪರಿಷ್ಕರಣೆಗಳನ್ನು ಮಾಡಿಕೊಂಡಿದೆ. ಈ ಮೂಲಕ ಮಾರಾಟವನ್ನು ಇನ್ನಷ್ಟು ಉತ್ತೇಜಿಸುವ ನಿರೀಕ್ಷೆಯಲ್ಲಿದೆ.

ಸ್ಪ್ಲೆಂಡರ್ ದೇಶದ ಅತ್ಯಂತ ಯಶಸ್ವಿ ಪ್ರಯಾಣಿಕ ಮಾದರಿಗಳಲ್ಲಿ ಒಂದಾಗಿದೆ. ಈ ನಿಟ್ಟಿನಲ್ಲಿ ಸೂಪರ್ ಸ್ಪ್ಲೆಂಡರ್ ಹೆಚ್ಚಿನ ಸಂಖ್ಯೆಯ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಸದ್ಯ ಸೂಪರ್ ಸ್ಪ್ಲೆಂಡರ್‌ನಲ್ಲಿರುವ ಬದಲಾವಣೆಗಳನ್ನು ತಿಳಿದುಕೊಳ್ಳಲು ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಸೂಪರ್ ಸ್ಪ್ಲೆಂಡರ್ ಸೂಪರೋ ಸೂಪರ್

ನೂತನ ಸೂಪರ್ ಸ್ಪ್ಲೆಂಡರ್ ಹೊಸತಾದ ಬಾಡಿ ಗ್ರಾಫಿಕ್ಸ್ ಜೊತೆ ರೆಡ್, ಬ್ಲ್ಯಾಕ್, ಗ್ರೇ ಹಾಗೂ ಬ್ಲೂ ಬಣ್ಣಗಳನ್ನು ಪಡೆಯಲಿದೆ.

ಸೂಪರ್ ಸ್ಪ್ಲೆಂಡರ್ ಸೂಪರೋ ಸೂಪರ್

ಇನ್ನುಳಿದಂತೆ ಬ್ಲ್ಯಾಕ್ ಅಲಾಯ್ ವೀಲ್ ಸ್ಟಾಂಡರ್ಡ್ ಆಗಿ ಲಭ್ಯವಾಗಲಿದೆ. ಅಷ್ಟೇ ಅಲ್ಲದೆ ಸ್ಪ್ಲೆಂಡರ್ ಐ-ಸ್ಮಾರ್ಟ್‌ನಲ್ಲಿರುವಂತಹ ಸೈಡ್ ಸ್ಟಾಂಡ್ ವಾರ್ನಿಂಗ್ ಇಂಡಿಕೇಟರ್ ಸಹ ಪಡೆದುಕೊಳ್ಳಲಿದೆ.

ಸೂಪರ್ ಸ್ಪ್ಲೆಂಡರ್ ಸೂಪರೋ ಸೂಪರ್

ಹಾಗಿದ್ದರೂ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಇದು ಫೋರ್ ಸ್ಟ್ರೋಕ್, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ 124.7 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 9 ಬಿಎಚ್‌ಪಿ ಉತ್ಪಾದಿಸಲಿದೆ. ಹಾಗೆಯೇ ಫೋರ್ ಸ್ಪೀಡ್ ಗೇರ್ ಬಾಕ್ಸ್ ಸಹ ಪಡೆದುಕೊಳ್ಳಲಿದೆ.

ಸೂಪರ್ ಸ್ಪ್ಲೆಂಡರ್ ಸೂಪರೋ ಸೂಪರ್

ಇದೇ ಸಂದರ್ಭದಲ್ಲಿ ಬೇಡಿಕೆ ಕುಸಿತದ ಹಿನ್ನಲೆಯಲ್ಲಿ ಸೂಪರ್ ಸ್ಪ್ಲೆಂಡರ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ನಿಲ್ಲಿಸಲು ಹೀರೊ ನಿರ್ಧರಿಸಿದೆ. ಬದಲಾಗಿ ಎರಡು ಬದಿಗಳಲ್ಲೂ 130 ಎಂಎಂ ಡ್ರಮ್ ಬ್ರೇಕ್ ಪಡೆಯಲಿದೆ.

ಸೂಪರ್ ಸ್ಪ್ಲೆಂಡರ್ ಸೂಪರೋ ಸೂಪರ್

ಅಂದ ಹಾಗೆ ಪರಿಷ್ಕೃತ ಹೀರೊ ಸೂಪರ್ ಸ್ಪ್ಲೆಂಡರ್ ದೆಹಲಿ ಎಕ್ಸ್ ಶೋ ರೂಂ ದರ 51.250 ರು.ಗಳಾಗಿವೆ.

Most Read Articles

Kannada
English summary
Hero MotoCorp has given its Super Splendor a minor upgrade.
Story first published: Friday, May 9, 2014, 17:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X