ಸ್ಪ್ಲೆಂಡರ್ ಹಿಂದಿಕ್ಕಿದ ಆಕ್ಟಿವಾ ದೇಶದ ನಂ.1 ದ್ವಿಚಕ್ರ ವಾಹನ

By Nagaraja

ಹೋಂಡಾ ಆಕ್ಟಿವಾ ದೇಶದ ನಂ.1 ದ್ವಿಚಕ್ರ ವಾಹನ ಎಂಬುದು ಮಗದೊಮ್ಮ ಸಾಬೀತಾಗಿದೆ. ಇನ್ನೊಂದೆಡೆ ದಶಕಗಳಷ್ಟು ಕಾಲ ರಸ್ತೆಯನ್ನು ಆಳಿದ್ದ ದೇಶದ ನಂ. 1 ವಾಹನ ತಯಾರಕ ಸಂಸ್ಥೆಯಾದ ಹೀರೊ ಮೊಟೊಕಾರ್ಪ್‌ನ ಜನಪ್ರಿಯ ಸ್ಪ್ಲೆಂಡರ್ ಓಟ ಕುಂಠಿತವಾಗುತ್ತಿದೆ.

ದೇಶದ ಅತ್ಯುತ್ತಮ 150ಸಿಸಿ ಬೈಕ್‌ಗಳು

ಶರವೇಗದಲ್ಲಿ ಮುನ್ನುಗ್ಗುತ್ತಿರುವ ಹೋಂಡಾ ಆಕ್ಟಿವಾ ಸ್ಕೂಟರ್, ಮಾರ್ಚ್ ತಿಂಗಳ ಮಾರಾಟದಲ್ಲಿ ಮಗದೊಮ್ಮ ಅಗ್ರಸ್ಥಾನ ದಾಖಲಿಸಿಕೊಂಡಿದೆ. ಇದು ಎರನಡೇ ಬಾರಿಗೆ ಆಕ್ಟಿವಾ ಇಂತಹದೊಂದು ಸಾಧನೆ ಮಾಡುತ್ತಿದೆ. ಈ ಹಿಂದೆ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಆಕ್ಟಿವಾ ಇದೇ ಸಾಧನೆ ಮಾಡಿತ್ತು.

ಸ್ಪ್ಲೆಂಡರ್ ಹಿಂದಿಕ್ಕಿದ ಆಕ್ಟಿವಾ ದೇಶದ ನಂ.1 ದ್ವಿಚಕ್ರ ವಾಹನ

ಹೋಂಡಾ ಆಕ್ಟಿವಾ ಆಟೋಮ್ಯಾಟಿಕ್ ಸ್ಕೂಟರ್‌ನ ಸುಲಭ, ಸರಳ ಹ್ಯಾಂಡ್ಲಿಂಗ್ ವ್ಯವಸ್ಥೆಯು ಗ್ರಾಹಕರನ್ನು ಹೆಚ್ಚು ಆಕರ್ಷಿಸುವಲ್ಲಿ ನೆರವಾಗಿದೆ. ಕೇವಲ ನಗರ ಪ್ರದೇಶ ಮಾತ್ರವಲ್ಲದೆ ಸಣ್ಣ ಪುಟ್ಟ ಪಟ್ಟಣ ಪ್ರದೇಶಗಳಲ್ಲಿ ಆಕ್ಟಿವಾ ಜನಮನ್ನಣೆಗೆ ಪಾತ್ರವಾಗುತ್ತಿದೆ.

ಸ್ಪ್ಲೆಂಡರ್ ಹಿಂದಿಕ್ಕಿದ ಆಕ್ಟಿವಾ ದೇಶದ ನಂ.1 ದ್ವಿಚಕ್ರ ವಾಹನ

2014 ಮಾರ್ಚ್ ತಿಂಗಳಲ್ಲಿ 100ಸಿಸಿ ಹೀರೊ ಸ್ಪ್ಲೆಂಡರ್ 163,778 ಯುನಿಟ್ ಮಾರಾಟ ಕಂಡಿದ್ದರೆ ಹೋಂಡಾ ಆಕ್ಟಿವಾ 177,928 ಯುನಿಟ್ ಮಾರಾಟ ಸಾಧಿಸುವ ಮೂಲಕ ದೇಶದ ನಂ.1 ದ್ವಿಚಕ್ರ ವಾಹನ ಎನಿಸಿಕೊಂಡಿದೆ.

ಸ್ಪ್ಲೆಂಡರ್ ಹಿಂದಿಕ್ಕಿದ ಆಕ್ಟಿವಾ ದೇಶದ ನಂ.1 ದ್ವಿಚಕ್ರ ವಾಹನ

ಅಷ್ಟೇ ಅಲ್ಲ 2014 ಆರ್ಥಿಕ ಸಾಲಿನಲ್ಲಿ ಸ್ಪ್ಲೆಂಡರ್ ಮಾರಾಟವು ಶೇಕಡಾ 5ರಷ್ಟು ಕುಸಿತ ಕಂಡಿದೆ. ಇದೇ ಅವಧಿಯಲ್ಲಿ ಆಕ್ಟಿವಾ ಶೇಕಡಾ 39ರಷ್ಟು ಹೆಚ್ಚು ಏರಿಕೆ ಕಾಯ್ದುಕೊಂಡಿದೆ. ಇದು ಹೋಂಡಾ ಆಕ್ಟಿವಾ ಬೆಳವಣಿಗೆಗೆ ಪೂರಕವಾಗಿದೆ.

ಸ್ಪ್ಲೆಂಡರ್ ಹಿಂದಿಕ್ಕಿದ ಆಕ್ಟಿವಾ ದೇಶದ ನಂ.1 ದ್ವಿಚಕ್ರ ವಾಹನ

ನಗರ ಪ್ರದೇಶದ ವಿಪರೀತ ವಾಹನ ದಟ್ಟಣೆಯಲ್ಲಿ ಸುಲಭ ಹ್ಯಾಂಡ್ಲಿಂಗ್ ಪ್ರದಾನ ಮಾಡುವುದೇ ಆಕ್ಟಿವಾ ಯಶಸ್ಸಿನ ಗುಟ್ಟಾಗಿದೆ. ಇದನ್ನು ಹೆಣ್ಮಕ್ಕಳು ಸೇರಿದಂತೆ ಪುರಷರ ಸಹ ನೆಚ್ಚಿನ ಆಯ್ಕೆಯಾಗಿದೆ.

ಸ್ಪ್ಲೆಂಡರ್ ಹಿಂದಿಕ್ಕಿದ ಆಕ್ಟಿವಾ ದೇಶದ ನಂ.1 ದ್ವಿಚಕ್ರ ವಾಹನ

ಮೇಲೆ ಕೊಡಲಾಗಿರುವ ಪಟ್ಟಿಯಿಂದ 125 ಸಿಸಿ ಸೂಪರ್ ಸ್ಲ್ಫೆಂಡರ್ ಮಾರಾಟವನ್ನು ಕಡೆಗಣಿಸಲಾಗಿತ್ತು. ಇದನ್ನು ಸೇರಿಸಿದ್ದಲ್ಲಿ ಸ್ಪ್ಲೆಂಡರ್ ಮಾರಾಟ 190000 ಯುನಿಟ್‌ಗಳಿಗೆ ಏರಿಕೆಯಾಗಲಿದೆ.

ಸ್ಪ್ಲೆಂಡರ್ ಹಿಂದಿಕ್ಕಿದ ಆಕ್ಟಿವಾ ದೇಶದ ನಂ.1 ದ್ವಿಚಕ್ರ ವಾಹನ

ಅಂದ ಹಾಗೆ ಆಕ್ಟಿವಾ 125 ಸದ್ಯದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ. ಇದು ಹೋಂಡಾವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ಎರಡು ಮಾದರಿಗಳ ಮಾರಾಟವನ್ನು ಜಂಟಿಯಾಗಿ ತುಲನೆ ಮಾಡಲಾಗುವುದು.

Most Read Articles

Kannada
English summary
Honda Activa has already beat the Splendor (100cc) twice in the financial year 2013-14. The first time was in September 2013 and then once again in March 2014.
Story first published: Saturday, April 19, 2014, 15:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X