ಹೋಂಡಾದಿಂದ ಅತಿ ಅಗ್ಗದ ಡ್ರೀಮ್ ಸಿಡಿ 110 ಬೈಕ್ ಬಿಡುಗಡೆ

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ ಟು ವೀಲರ್ಸ್, ಮಗದೊಂದು ಆಕರ್ಷಕ ಬೈಕ್ ದೇಶದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಅದುವೇ ಹೋಂಡಾ ಡ್ರೀಮ್ ಸಿಡಿ 110.

ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಹೊಸ ಡ್ರೀಮ್ ಸಿಡಿ 110 ಬಿಡುಗಡೆ ಮಾಡಿರುವುದು ವಿಶೇಷವೆನಿಸಿದೆ. ಇದು ಹೋಂಡಾದಿಂದ ಆಗಮನವಾಗಿರುವ ಅತಿ ಅಗ್ಗದ ಬೈಕಾಗಿರಲಿದೆ. ಇದರ ದೆಹಲಿ ಎಕ್ಸ್ ಶೋ ರೂಂ ದರ 41,000 ರು.ಗಳಾಗಿವೆ. ಈ ಮೂಲಕ ಹೋಂಡಾ ಡ್ರೀಮ್ ಶ್ರೇಣಿಗೆ ಹೊಸತೊಂದು ಬೈಕ್ ಸೇರ್ಪಡೆಯಾಗಿದೆ. ಈಗಾಗಲೇ ಡ್ರೀಮ್ ನಿಯೋ ಹಾಗೂ ಡ್ರೀಮ್ ಯುಗಾ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದೆ.

ಅಗ್ಗದ ಬೈಕ್

ಅಗ್ಗದ ಬೈಕ್

ಪ್ರಮುಖವಾಗಿಯೂ ಜನ ಸಾಮಾನ್ಯರನ್ನು ಗುರಿಯಾಗಿರಿಸಿಕೊಂಡು ಹೋಂಡಾ ಹೊಸ ಬೈಕ್ ಲಾಂಚ್ ಮಾಡಿದೆ. ಇದು ಹೋಂಡಾ ಶ್ರೇಣಿಯ ಅತ್ಯಂತ ಅಗ್ಗದ ಬೈಕ್ ಆಗಿರಲಿದೆ.

ಎಂಜಿನ್

ಎಂಜಿನ್

ಹೊಸ ಡ್ರೀಮ್ ಸಿಡಿ 110 ಬೈಕ್‌ನಲ್ಲಿ ಏರ್ ಕೂಲ್ಡ್ 109 ಸಿಸಿ ಎಸ್‌ಐ ಎಂಜಿನ್ ಇರಲಿದೆ. ಇದು 8.25 ಅಶ್ವಶಕ್ತಿ (8.63 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ 4 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರಲಿದೆ.

ಮೈಲೇಜ್

ಮೈಲೇಜ್

ಜಪಾನ್ ಮೂಲದ ದೈತ್ಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆ ಹೋಂಡಾ ಪ್ರಕಾರ ಹೊಸ ಡ್ರೀಮ್ ಸಿಡಿ 110 ಬೈಕ್ ಪ್ರತಿ ಲೀಟರ್‌ಗೆ ಗರಿಷ್ಠ 74 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಪ್ರತಿಸ್ಪರ್ಧಿ

ಪ್ರತಿಸ್ಪರ್ಧಿ

ಅಂದ ಹಾಗೆ ಹೊಸ ಬೈಕ್‌ನ ವಿತರಣೆ ಪ್ರಕ್ರಿಯೆ ಆಗಸ್ಟ್ ತಿಂಗಳಲ್ಲಿ ಆರಂಭವಾಗಲಿದೆ. ಇದು ಪ್ರಮುಖವಾಗಿಯೂ ಹೀರೊ ಎಚ್‌ಎಫ್ ಡಿಲಕ್ಸ್ ಹಾಗೂ ಟಿವಿಎಸ್ ಸ್ಟಾರ್ ಸಿಟಿ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

ಬಣ್ಣಗಳು

ಬಣ್ಣಗಳು

ಹಾಗಿದ್ದರೂ ಡಿಸ್ಕ್ ಬ್ರೇಕ್ ಕೊರತೆಯು ಗ್ರಾಹಕರನ್ನು ಕಾಡಲಿದೆ. ಆದರೆ ನೀಲಿ, ಕಪ್ಪು ಜೊತೆ ಬೂದು ಹಾಗೂ ಕಪ್ಪು ಜೊತೆ ಕೆಂಪು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನುಳಿದಂತೆ ಸೆಲ್ಫ್ ಸ್ಟಾರ್ಟ್ ಸಹ ಮಿಸ್ ಮಾಡಿಕೊಳ್ಳಲಿದೆ. ಅಂದರೆ ಕಿಕ್ ಸ್ಟಾರ್ಟರ್‌ನಲ್ಲಿ ಮಾತ್ರ ಲಭ್ಯವಾಗಲಿದೆ.

ವಿನ್ಯಾಸ

ವಿನ್ಯಾಸ

ವಿನ್ಯಾಸದ ಬಗ್ಗೆ ಮಾತನಾಡುವುದಾದ್ದಲ್ಲಿ ಡ್ರೀಮ್ ಶ್ರೇಣಿಯ ವಿನ್ಯಾಸವನ್ನು ಡ್ರೀಮ್ ಸಿಡಿ 110 ಆವೃತ್ತಿಗೂ ಆಮದು ಮಾಡಿಕೊಳ್ಳಲಾಗಿದೆ. ಹೊಸ ಬೈಕ್‌ನ ಗ್ರೌಂಡ್ ಕ್ಲಿಯರನ್ಸ್‌ನಲ್ಲಿ ಸುಧಾರಣೆ ಕಂಡುಬಂದಿದೆ. ಇದು ಟ್ಯೂಬ್‌ಲೆಸ್ ಟೈರ್ ಜೊತೆ ಬೆಳ್ಳಿ ಅಲಾಯ್ ವೀಲ್‌ಗಳನ್ನು ಪಡೆದುಕೊಂಡಿದೆ.

ವೈಶಿಷ್ಟ್ಯತೆಗಳು

ವೈಶಿಷ್ಟ್ಯತೆಗಳು

  • ಉದ್ದವಾದ ಆಸನ,
  • ಶ್ರೇಷ್ಠ ಎಂಜಿನ್,
  • ಮೈಲೇಜ್,
  • ಉದ್ದವಾದ ವೀಲ್‌ಬೇಸ್,
  • ಗರಿಷ್ಠ ಗ್ರೌಂಡ್ ಕ್ಲಿಯರನ್ಸ್,
  • ಹೋಂಡಾ ಇಕೊ ತಂತ್ರಗಾರಿಕೆ
  • ಆಯಾಮ

    ಆಯಾಮ

    • ಭಾರ - 105 ಕೆ.ಜಿ
    • ಉದ್ದ - 2009 ಎಂಎಂ
    • ಅಗಲ - 737 ಎಂಎಂ
    • ವೀಲ್ ಬೇಸ್ - 1258 ಎಂಎಂ
    • ಗ್ರೌಂಡ್ ಕ್ಲಿಯರನ್ಸ್ - 179 ಎಂಎಂ
    • ಇಂಧನ ಟ್ಯಾಂಕ್ ಸಾಮರ್ಥ್ಯ - 8 ಲೀಟರ್

Most Read Articles

Kannada
English summary
Honda two wheeler section in India had promised to get a more affordable motorcycle for the masses. The Japanese manufacturer has done exactly that by launching its new Dream CD 110 at an attractive price of INR 41,00 ex-showroom Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X