ಇಂಡಿಯಾ ಬೈಕ್ ವೀಕ್ ರಂಜಿಸಿದ ಇಂಡಿಯನ್ ಮೋಟಾರ್‌ಸೈಕಲ್ಸ್

By Nagaraja

ಕೆಲವು ತಿಂಗಳುಗಳ ಹಿಂದೆಯಷ್ಟೇ ತನ್ನದೇ ಆದ ವಿಶಿಷ್ಟ ಶೈಲಿಯೊಂದಿಗೆ ಭಾರತ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದ್ದ ಇಂಡಿಯನ್ ಮೋಟಾರ್‌ಸೈಕಲ್ಸ್, ಈಗ ಗೋವಾದಲ್ಲಿ ನಡೆದ ಮೂರನೇ ಆವೃತ್ತಿಯ ಇಂಡಿಯಾ ಬೈಕ್ ವೀಕ್‌ನಲ್ಲೂ ನೆರದ ಪ್ರೇಕ್ಷಕರನ್ನು ರಂಜಿಸಿದೆ.

ಅಮೆರಿಕ ಮೂಲದ ದೈತ್ಯಾಕಾರಾದ ಇಂಡಿಯನ್ ಮೋಟಾರ್‌ಸೈಕಲ್‌ಗಳನ್ನು ಪೊಲರಿಸ್ ಇಂಡಸ್ಟ್ರೀಸ್ ಭಾರತಕ್ಕೆ ಪರಿಚಯಿಸಿದೆ. ಇದರಂತೆ ಸಮುದ್ರ ತಟ ಗೋವಾದಲ್ಲಿ ಇಂಡಿಯನ್ ಮೋಟಾರ್‌ಸೈಕಲ್‌ಗಳ ಭರ್ಜರಿ ಪ್ರದರ್ಶನ ಕಂಡಿದೆ.

ಇಂಡಿಯಾ ಬೈಕ್ ವೀಕ್ ರಂಜಿಸಿದ ಇಂಡಿಯನ್ ಮೋಟಾರ್‌ಸೈಕಲ್ಸ್

ಗೋವಾದ ವ್ಯಾಗಟಾರ್‌ನಲ್ಲಿ ಇಂಡಿಯಾ ಬೈಕ್ ವೀಕ್ 2015 ಫೆಬ್ರವರಿ 20 ಹಾಗೂ 21ರಂದು ಆಯೋಜನೆಯಾಗಿತ್ತು. ಇಲ್ಲಿ ಇಂಡಿಯನ್ ಮೋಟಾರ್ ಸೈಕಲ್ ಮಾತ್ರವಲ್ಲದೆ ಹರ್ಲಿ ಡೇವಿಡ್ಸನ್, ಎಪ್ರಿಲಿಯಾ, ಟ್ರಯಂಪ್ ಮೋಟಾರ್ ಸೈಕಲ್ಸ್, ಮೊಟೊ ಗುಝಿ, ಡಿಎಸ್‌ಕೆ ಮೊಟೊವೀಲ್ಸ್ ಹಾಗೂ ವೆಸ್ಪಾ ಐಕಾನಿಕ್ ಸ್ಕೂಟರ್‌ಗಳು ಪ್ರದರ್ಶನ ಕಂಡಿದ್ದವು.

ಇಂಡಿಯನ್ ಮೋಟಾರ್‌ಸೈಕಲ್ ಚೀಫ್ ಕ್ಲಾಸಿಕ್

ಇಂಡಿಯನ್ ಮೋಟಾರ್‌ಸೈಕಲ್ ಚೀಫ್ ಕ್ಲಾಸಿಕ್

ಇಂಡಿಯಾ ಬೈಕ್ ವೀಕ್‌ನಲ್ಲಿ ಪ್ರದರ್ಶನಗೊಳಿಸಿರುವ ಮಾದರಿಗಳ ಪೈಕಿ ಚೀಫ್ ಕ್ಲಾಸಿಕ್ ಕೂಡಾ ಒಂದಾಗಿದೆ. ರೆಡ್, ಥಂಡರ್ ಬ್ಲ್ಯಾಕ್ ಅಥವಾ ಥಂಡರ್ ರೆಡ್ ಬಣ್ಣಗಳಲ್ಲಿ ಲಭ್ಯವಿರುವ ಚೀಫ್ ಕ್ಲಾಸಿಕ್ ದೆಹಲಿ ಎಕ್ಸ್ ಶೋ ಬೆಲೆ 25.50 ಲಕ್ಷ ರು.ಗಳಿಷ್ಟಿದೆ.

ಇಂಡಿಯನ್ ಮೋಟಾರ್‌ಸೈಕಲ್ ಚೀಫ್ಟೈನ್

ಇಂಡಿಯನ್ ಮೋಟಾರ್‌ಸೈಕಲ್ ಚೀಫ್ಟೈನ್

ಸಾಂಪಾದ್ರಾಯಿಕ ರೆಟ್ರೊ ಶೈಲಿಯನ್ನು ಹೊಂದಿರುವ ಇಂಡಿಯನ್ ಮೋಟಾರ್ ಸೈಕಲ್ ಚೀಫ್ಟೈನ್ ದೆಹಲಿ ಎಕ್ಸ್ ಶೋ ರೂಂ ಬೆಲೆ 31.99 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ. ಇದು ಬ್ಲೂಯ ಐವರಿ ಕ್ರೀಮ್, ಇಂಡಿಯನ್ ರೆಡ್ ಥಂಡರ್ ಬ್ಲ್ಯಾಕ್, ಇಂಡಿಯನ್ ರೆಡ್ ಐವರಿ ಕ್ರೀಮ್, ಥಂಡರ್ ಬ್ಲ್ಯಾಕ್ ಮತ್ತು ಇಂಡಿಯನ್ ರೆಡ್ ಪೈಂಟ್ ಬಣ್ಣಗಳಲ್ಲಿ ಲಭ್ಯವಿರಲಿದೆ.

 ಇಂಡಿಯನ್ ಮೋಟಾರ್ ಸೈಕಲ್ ಸ್ಕೌಟ್

ಇಂಡಿಯನ್ ಮೋಟಾರ್ ಸೈಕಲ್ ಸ್ಕೌಟ್

ಆಧುನಿಕ ನೋಟದ ಕ್ರೂಸರ್ ವಿನ್ಯಾಸವನ್ನು ಇಂಡಿಯನ್ ಮೋಟಾರ್ ಸೈಕಲ್ ಸ್ಕೌಟ್ ಪಡೆದುಕೊಂಡಿದೆ. ಇದು 1133ಸಿಸಿ ವಿ ಟ್ವಿನ್ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದ್ದು, 100 ಅಶ್ವಶಕ್ತಿ (97.7 ತಿರುಗುಬಲ) ಉತ್ಪಾದಿಸಲಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 11.99 ಲಕ್ಷ ರು.ಗಳಾಗಿದೆ.

ಇಂಡಿಯನ್ ಮೋಟಾರ್ ಸೈಕಲ್ ಚೀಫ್ ವಿಂಟೇಜ್

ಇಂಡಿಯನ್ ಮೋಟಾರ್ ಸೈಕಲ್ ಚೀಫ್ ವಿಂಟೇಜ್

ತನ್ನ ಹೆಸರಿಗೆ ತಕ್ಕಂತೆ ಸೌಂದರ್ಯವನ್ನು ಹೊಂದಿರುವ ಇಂಡಿಯನ್ ಮೋಟಾರ್ ಸೈಕಲ್ ಚೀಪ್ ವಿಂಟೇಜ್ ಬೈಕ್ ಕ್ರೂಸರ್ ಮಿಶ್ರಿತ ಪ್ರೀಮಿಯಂ ನೋಟವನ್ನು ಹೊಂದಿದೆ. ಇದರಲ್ಲಿ ಹೆಚ್ಚಿನ ಲೆಥರ್ ಸ್ಪರ್ಶವನ್ನು ಕಾಣಬಹುದಾಗಿದ್ದು, ದೆಹಲಿ ಎಕ್ಸ್ ಶೋ ರೂಂ 28.49 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.

ಇಂಡಿಯನ್ ಮೋಟಾರ್ ಸೈಕಲ್ ಥಂಡರ್ ಸ್ಟ್ರೋಕ್ 111 ಎಂಜಿನ್

ಇಂಡಿಯನ್ ಮೋಟಾರ್ ಸೈಕಲ್ ಥಂಡರ್ ಸ್ಟ್ರೋಕ್ 111 ಎಂಜಿನ್

ಇದೇ ಸಂದರ್ಭದಲ್ಲಿ ಗರಿಷ್ಠ 1811 ಸಿಸಿ ಸಾಮರ್ಥ್ಯದ ಇಂಡಿಯನ್ ಮೋಟಾರ್ ಸೈಕಲ್ ಥಂಡರ್ ಸ್ಟ್ರೋಕ್ 111 ಎಂಜಿನ್ ಕೂಡಾ ಪ್ರದರ್ಶಿಸಲಾಗಿತ್ತು. ಇದು ಬರೋಬ್ಬರಿ 100 ಅಶ್ವಶಕ್ತಿ (138.9 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಎಂಜಿನ್ ಅನ್ನು ಚೀಫ್ ಕ್ಲಾಸಿಕ್, ಚೀಫ್ ವಿಂಟೇಜ್, ಚೀಫ್ಟೈನ್, ರೋಡ್ ಮಾಸ್ಟರ್ ಮತ್ತು ಹೊಸತಾಗಿ ಬಿಡುಗಡೆಯಾದ ಚೀಫ್ ಡಾರ್ಕ್ ಹಾರ್ಸ್‌ನಲ್ಲಿ ಬಳಕೆ ಮಾಡಲಾಗಿದೆ.

Most Read Articles

Kannada
English summary
Indian Motorcycles Showcased At India Bike Week
Story first published: Wednesday, February 25, 2015, 17:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X