ಸದ್ದಿಲ್ಲದೆ ಬುಲೆಟ್ ರಾಜ 500 ಎಂಟ್ರಿ; ವೈಶಿಷ್ಟ್ಯಗಳೇನು?

'ಬುಲೆಟ್ ರಾಜ' ಎಂದೇ ಪರಿಗಣಿಸಲ್ಪಟ್ಟಿರುವ ರಾಯಲ್ ಎನ್‌ಫೀಲ್ಡ್ ಪಟ್ಟಿಗೆ ಮತ್ತೊಂದು ಅತ್ಯಾಮೋಘ ಬುಲೆಟ್ ಸೇರ್ಪಡೆಯಾಗಿದೆ. ಹೌದು, ದೇಶದಲ್ಲಿ ಅತಿ ಹೆಚ್ಚು ಬೇಡಿಕೆಯುಳ್ಳ ದ್ವಿಚಕ್ರ ವಾಹನ ತಯಾರಕರಾದ ರಾಯಲ್ ಎನ್‌ಫೀಲ್ಡ್, ತನ್ನ ಬಹುನಿರೀಕ್ಷಿತ '500 ಸಿಸಿ' ಬುಲೆಟನ್ನು ಯಾವುದೇ ಸದ್ದಿಲ್ಲದೆ ಲಾಂಚ್ ಮಾಡಿದೆ.

ಕೆಲವು ದಿನಗಳ ದಿನಗಳ ಹಿಂದೆಯಷ್ಟೇ 500 ಸಿಸಿ ಬುಲೆಟ್‌ನ ಟೀಸರ್ ಇಮೇಜ್ ರಿಲೀಸ್ ಮಾಡಲಾಗಿತ್ತು. ಇದರ ಬೆನ್ನಲ್ಲೇ ಅಧಿಕೃತ ಲಾಂಚ್ ಕೂಡಾ ಆಗಿದೆ. ನ್ಯೂ ಫಾರೆಸ್ಟ್ ಗ್ರೀನ್ ಬಣ್ಣದಲ್ಲಿ ಆಗಮನವಾಗಿರುವ ರಾಯಲ್ ಎನ್‌ಫೀಲ್ಡ್ ಸ್ಪೋರ್ಟ್ಸ್ ಹಾಗೂ ಕ್ಲಾಸಿಕ್ ವಿನ್ಯಾಸವನ್ನು ಹೊಂದಿದೆ.

ಪ್ರಮುಖ ವೈಶಿಷ್ಟ್ಯಗಳು:

  • 19 ಇಂಚು ವೀಲ್
  • ಹೆಡ್‌ಲ್ಯಾಂಪ್-ಹುಲಿ ಕಣ್ಣು
  • ಡಿಸ್ಕ್ ಬ್ರೇಕ್
  • ಎಲೆಕ್ಟ್ರಿಕ್ ಸ್ಟಾರ್ಟ್
  • ಪರಿಷ್ಕೃತ ಟ್ಯಾಂಕ್
  • ಹೊಸ ಕಲರ್ ಆಯ್ಕೆ
  • 500 ಸಿಸಿ ಎಂಜಿನ್
  • ಆರಾಮದಾಯಕ ಸಿಟ್ಟಿಂಗ್ ವ್ಯವಸ್ಥೆ
  • ನ್ಯೂ ಪಿಲ್ಲಿಯನ್ ಗ್ರಾಬ್ ರೈಲ್
  • ಕ್ಲಾಸಿಕ್ ಟೈಲ್ ಲ್ಯಾಂಪ್

ಹಾಗಿದ್ದರೂ ದರದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಈ ಹಿಂದೆ ರಾಯಲ್ ಎನ್‌ಫೀಲ್ಡ್ ಕೆಫೆ ರೇಸರ್ ಆಗಮನವಾಗಲಿದೆ ಎಂದು ತಿಳಿಸಲಾಗಿತ್ತು. ಆದರೆ ಇದೀಗ ಅಚ್ಚರಿಯೆಂಬಂತೆ ಬುಲೆಟ್ 500 ರಿಲೀಸ್ ಆಗಿದೆ. ಪ್ರಸ್ತುತ ಬೈಕ್ ಆರಂಭದಲ್ಲಿ ದೇಶದಲ್ಲಿ ಅತಿ ಹೆಚ್ಚು ಬೇಡಿಕೆಯುಳ್ಳ, ಪಂಜಾಬ್, ಕೇರಳ, ದೆಹಲಿ, ಗುರ್ಗಾಂವ್, ಚಂಡೀಗಡ ಹಾಗೂ ನೋಯ್ಡಾಗಳಲ್ಲಿ ಲಭ್ಯವಾಗಲಿದೆ. ಇದರ ಉತ್ಪಾದನಾ ಪ್ರಮಾಣ ಹೆಚ್ಚಳಗೊಂಡ ಬಳಿಕ ಇತರ ನಗರಗಳಿಗೂ ವ್ಯಾಪಿಸಲಿದೆ.

ತಾಂತ್ರಿಕ ವೈಶಿಷ್ಟ್ಯಗಳು

ತಾಂತ್ರಿಕ ವೈಶಿಷ್ಟ್ಯಗಳು

ಟೈಪ್: ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಟ್ವಿನ್ ಸ್ಪಾರ್ಕ್, ಏರ್‌ ಕೂಲ್ಡ್

ಡಿಸ್‌ಪ್ಲೇಸ್‌ಮೆಂಟ್- 499 ಸಿಸಿ

ಬೋರ್ x ಸ್ಟ್ರೋಕ್- 84ಎಂಎಂ x 90 ಎಂಎಂ

ಕಂಪ್ರೇಶನ್ ರೆಶಿಯೋ- 8.5:1

ಮಾಕ್ಸಿಮಮಂ ಪವರ್- 26.1 ಬಿಎಚ್‌ಪಿ, 5100 ಆರ್‌ಪಿಎಂ

ಮಾಕ್ಸಿಮಮಂ ಟರ್ಕ್ಯೂ- 40.9 ಎನ್‌ಎಂ, 3800 ಆರ್‌ಪಿಎಂ

ತಾಂತ್ರಿಕ ವೈಶಿಷ್ಟ್ಯಗಳು

ತಾಂತ್ರಿಕ ವೈಶಿಷ್ಟ್ಯಗಳು

ಇಗ್ನಿಷನ್ ಸಿಸ್ಟಂ- ಟಿಸಿಐ ಯುನಿಟ್, ಮಲ್ಟಿ ಕರ್ವ್

ಕ್ಲಚ್- ವೆಟ್, ಮಲ್ಟಿ-ಪ್ಲೇಟ್

ಗೇರ್ ಬಾಕ್ಸ್- 5 ಸ್ಪೀಡ್ ಕನ್‌ಸ್ಟಂಟ್ ಮೆಶ್

ಲ್ಯೂಬ್ರಿಕೇಷನ್- ವೆಟ್ ಸಂಪ್

ಎಂಜಿನ್ ಸ್ಟಾರ್ಟ್- ಎಲೆಕ್ಟ್ರಿಕ್/ಕಿಕ್

ಚಾಸೀಸ್ ಆಂಡ್ ಸಸ್ಷೆಷನ್

ಚಾಸೀಸ್ ಆಂಡ್ ಸಸ್ಷೆಷನ್

ಟೈಪ್- ಸಿಂಗಲ್ ಡೌನ್‌ಟ್ಯೂಬ್

ಫ್ರಂಟ್ ಸಸ್ಷೆಷನ್- ಟೆಲಿಸ್ಕಾಪಿಕ್, 130ಎಂಎಂ ಟ್ರಾವೆಲ್

ರಿಯರ್ ಸಸ್ಷೆಷನ್- ಟ್ವಿನ್ ಗ್ಯಾಸ್ ಚಾರ್ಜ್ಡ್ ಶಾಬ್ ಎಬ್ಸೋರ್ಬರ್, 800ಎಂಎಂ ಟ್ರಾವೆಲ್

ಬ್ರೇಕ್ ಆಂಡ್ ಟೈರ್

ಬ್ರೇಕ್ ಆಂಡ್ ಟೈರ್

ಟೈರ್ ಎಫ್‌ಆರ್- 90/90 - 19

ಟೈರ್ ಆರ್‌ಆರ್- 120/80 - 18

ಬ್ರೇಕ್ ಫ್ರಂಟ್- 280 ಎಂಎಂ ಡಿಸ್ಕ್, 2 ಪಿಸ್ತಾನ್ ಕ್ಯಾಲಿಪರ್

ಬ್ರೇಕ್ ರಿಯರ್- 153 ಎಂಎಂ ಡ್ರಮ್, ವಿಸ್ತರಿಸಬಹುದಾದ ಇಂಟರ್ನೆಲ್ ಸಿಂಗಲ್ ಲೀಡ್

ಡೈಮೆಂಷನ್

ಡೈಮೆಂಷನ್

ವೀಲ್ ಬೇಸ್- 1370 ಎಂಎಂ

ಗ್ರೌಂಡ್ ಕ್ಲೀಯರನ್ಸ್- 135 ಎಂಎಂ

ಉದ್ದ- 2140 ಎಂಎಂ

ಅಗಲ- 810 ಎಂಎಂ (ಮಿರರ್ ಹೊರತುಪಡಿಸಿ)

ಎತ್ತರ- 1110 ಎಂಎಂ (ಮಿರರ್ ಹೊರತುಪಡಿಸಿ)

ಕರ್ಬ್ ಭಾರ- 193 ಕೆ.ಜಿ.

ಇಂಧನ ಸಾಮರ್ಥ್ಯ- 13.5 ಲೀಟರ್

ಎಲೆಕ್ಟ್ರಿಕಲ್ಸ್

ಎಲೆಕ್ಟ್ರಿಕಲ್ಸ್

ಎಲೆಕ್ಟ್ರಿಕಲ್ ಸಿಸ್ಟಂ- 12 ವೋಲ್ಟ್- ಡಿಸಿ

ಬ್ಯಾಟರಿ- 12 ವೋಲ್ಟ್, 14 ಎಎಚ್

ಹೆಡ್ ಲ್ಯಾಂಪ್- 60/55 ಡಬ್ಲ್ಯು, ಹಾಲೊಗ್

ಟೈಲ್ ಲ್ಯಾಂಪ್- 12V, 21W21/5W

Most Read Articles

Kannada
English summary
Royal Enfield has added a new model to its Bullet line-up. The new Bullet 500 will be powered by the same engine as that on the Classic 500 sans fuel-injection though the price hasn't been revealed yet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X