ಸುಜುಕಿ ಆಕ್ಸೆಸ್ 'ಬೀಯಿಂಗ್ ಹ್ಯೂಮನ್' ವಿಶೇಷ ಆವೃತ್ತಿ ಲಾಂಚ್

By Nagaraja

ಜಪಾನ್‌ನ ಆಟೋ ದೈತ್ಯ ಸುಜುಕಿ ಅಂಗಸಂಸ್ಥೆಯಾಗಿರುವ ಸುಜುಕಿ ಮೋಟಾರ್ ಸೈಕಲ್ಸ್ ಇಂಡಿಯಾ, ನೂತನ ಆಕ್ಸೆಸ್ 125 ಆಟೋಮ್ಯಾಟಿಕ್ ಸ್ಕೂಟರಿನ ವಿಶೇಷ ಆವೃತ್ತಿಯನ್ನು ಲಾಂಚ್ ಮಾಡಿದೆ. ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಂಡು ಬರುತ್ತಿರುವ ಸರ್ಕಾರೇತರ ಸಹಯಾರ್ಥ ಸಂಸ್ಥೆ (ಎನ್‌ಜಿಒ) 'ಬೀಯಿಂಗ್ ಹ್ಯೂಮನ್' ಜತೆಸೇರಿಕೊಂಡು ಈ ನೂತನ ಸ್ಕೂಟರನ್ನು ಬಿಡುಗಡೆಗೊಳಿಸಲಾಗಿದೆ.

ನೂತನ ಆಕ್ಸೆಸ್ ವಿಶೇಷ ಆವೃತ್ತಿಯ ತಾಂತ್ರಿಕ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಬದಲಾಗಿ ಅಂದತೆ ಹೆಚ್ಚಿಸುವ ಸಲುವಾಗಿ ಕಾಸ್ಮೆಟಿಕ್ ಟಚ್ ನೀಡಲಾಗಿದೆ. ನೂತನ ಸ್ಕೂಟರ್ ಬೀಯಿಂಗ್ ಹ್ಯೂಮನ್ ಟ್ಯಾಗ್ ಲೈನ್ ಹೊಂದಿರಲಿದ್ದು, ಬದಿಯಲ್ಲಿ ಆಪ್ನಾ ವೇ ಆಫ್ ಲೈಫ್ ಸ್ಟಿಕ್ಕರ್ ಕಾಣಿಸಿಕೊಳ್ಳಲಿದೆ. ಹಾಗೆಯೇ ಲೆಥರ್ ಸೀಟು ಕವರು ಜತೆಗೆ ರಿಯರ್ ವ್ಯೂ ಮಿರರ್ ಕೂಡಾ ಲಗತ್ತಿಸಲಿರಲಿದೆ.

ಸುಜುಕಿ ಆಕ್ಸೆಸ್ ಸಾಮಾನ್ಯ ವರ್ಷನ್ ಒಟ್ಟು ಐದು ವೆರಿಯಂಟ್‌ಗಳಲ್ಲಿ ಲಭ್ಯವಿದ್ದರೆ ವಿಶೇಷ ಆವೃತ್ತಿಯು ಪಿಯರ್ಲ್ ಮೈರೇಜ್ ವೈಟ್ ಕಲರ್‌ನಲ್ಲಿ ಮಾತ್ರ ಆಗಮನವಾಗಲಿದೆ.

ಎಂಜಿನ್

ಎಂಜಿನ್

ಪ್ರಸ್ತುತ ಸ್ಕೂಟರ್ ಫೋರ್ ಸ್ಟ್ರೋಕ್, ಏರ್ ಕೂಲ್ಡ್ ಒಎಚ್‌ಸಿ 124 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು 8.58 (9.8 ಟಾರ್ಕ್) ಬಿಎಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ದರ ಮಾಹಿತಿ

ದರ ಮಾಹಿತಿ

ಸಾಮಾನ್ಯ ಆವೃತ್ತಿಗಳಿಗೆ ಹೋಲಿಸಿದರೆ ಸ್ಪೆಷಲ್ ಎಡಿಷನ್ 1000 ರು.ಗಳಷ್ಟು ದುಬಾರಿಯಾಗಲಿದ್ದು, ಮುಂಬೈ ಎಕ್ಸ್ ಶೋ ರೂಂ ದರ 58,975 ರು.ಗಳಾಗಿವೆ.

ಮಾರಾಟ

ಮಾರಾಟ

ಕಂಪನಿಯು ಒಟ್ಟು 40,000 ಯುನಿಟ್ ಸುಜುಕಿ ಆಕ್ಸೆಸ್ ಮಾರಾಟ ಮಾಡುವ ಗುರಿ ಹೊಂದಿದ್ದು, ಈ ಮುಖಾಂತರ 3 ಕೋಟಿ ರು.ಗಳ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಸಲ್ಮಾನ್ ಖಾನ್

ಸಲ್ಮಾನ್ ಖಾನ್

ನಿಮ್ಮ ಮಾಹಿತಿಗಾಗಿ ಸಲ್ಮಾನ್ ಖಾನ್, ಪ್ರಮುಖ ಪ್ರಚಾರ ರಾಯಭಾರಿಯಾಗಿದ್ದು, ಟಿ ಶರ್ಟ್ ಹಾಗೂ ಹೆಲ್ಮೆಟ್‌ಗಳಂತಹ ಇತರೆ ಆಕ್ಸೆಸರಿಗಳಿಂದ ಸಂಗ್ರಹವಾಗುವ ಮೊತ್ತವನ್ನು ಹೃದಯ ಶಸ್ತ್ರಚಿಕಿತ್ಸೆ ಹಾಗೂ ಬಡಜನರ ವಿದ್ಯಾಭ್ಯಾಸಕ್ಕಾಗಿ ಬಳಕೆ ಮಾಡುವ ಗುರಿ ಹೊಂದಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಕ್ಲಾಸಿ ಬೀಯಿಂಗ್ ಹ್ಯೂಮನ್ ಚಿಹ್ನೆ

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಸ್ಟ್ರೈಲಿಷ್ ಕ್ರೋಮ್ ಗ್ರಾಬ್ ರೈಲ್

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಐಷಾರಾಮಿ ಲೆಥರ್ ಸೀಟು

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಟ್ರೆಂಡಿ ಆಪ್ನ ವೇ ಆಫ್ ಲೈಫ್ ಲೊಗೊ

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಬೆರಗುಗೊಳಿಸುವಂತಹ ಕ್ರೋಮ್ ರಿಯರ್ ವ್ಯೂ ಮಿರರ್

Most Read Articles

Kannada
English summary
In, what is a sort of role reversal, Suzuki two wheelers India has associated itself with brand ambassador Salman Khan's Being Human foundation. As part of the the team up the Japanese company has launched a special edition Access 125 ‘Being Human' edition automatic scooter.
Story first published: Monday, October 7, 2013, 14:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X