ಹೊಸ ಸುಜುಕಿ ಜಿಕ್ಸರ್ 150 ಸಿಸಿ ಬೈಕ್ ಭರ್ಜರಿ ಎಂಟ್ರಿ

By Nagaraja

ದೇಶದ ದ್ವಿಚಕ್ರ ವಾಹನ ಪ್ರೇಮಿಗಳು ಕಾತರದಿಂದ ಕಾದು ಕುಳಿತಿದ್ದ ಸುಜುಕಿ ಜಿಕ್ಸರ್ 150 ಸಿಸಿ ಬೈಕ್ ದೇಶದ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಪಡೆದುಕೊಂಡಿದೆ. ಈ ಸಂಬಂಧ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೇಳಿಕೆ ಕೊಟ್ಟಿರುವ ಸುಜುಕಿ ಮೋಟಾರುಸೈಕಲ್ ಇಂಡಿಯಾ ಸಂಸ್ಥೆಯು, ಹೊಸ ಜಿಕ್ಸರ್ ಬೈಕ್ ದೆಹಲಿ ಎಕ್ಸ್ ಶೋ ರೂಂ ಬೆಲೆ 72,199 ರು.ಗಳಾಗಿರಲಿದೆ ಎಂದಿದೆ.

ಹೊಸ ಸುಜುಕಿಯಲ್ಲಿ ಆಳವಡಿಸಲಾಗಿರುವ ಸುಜುಕಿ ಇಕೊ ನಿರ್ವಹಣೆ (ಎಸ್‌ಇಪಿ) ತಂತ್ರಜ್ಞಾನವು ಇತರ ಸ್ಪರ್ಧಿಗಳಿಂದ ಜಪಾನ್ ಮೂಲದ ಈ ಬೈಕನ್ನು ವಿಭಿನ್ನವಾಗಿಸಲಿದೆ. ಇದರ 155ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಂಗಲ್ ಕಾರ್ಬ್ಯುರೇಟರ್ ಎಂಜಿನ್‌ 14.8 ಪಿಎಸ್ ಪವರ್ (14 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಇದರಲ್ಲಿ ಫೈವ್ ಸ್ಪೀಡ್ ಗೇರ್ ಬಾಕ್ಸ್ ಸಹ ಇರಲಿದೆ.

ಸುಜುಕಿ ಜಿಕ್ಸರ್ 150 ಸಿಸಿ ಬೈಕ್ ಬಿಡುಗಡೆ

ಸಂಸ್ಥೆಯ ಪ್ರಕಾರ ಹೊಸ ಜಿಕ್ಸರ್ ಪ್ರತಿ ಲೀಟರ್‌ಗೆ 63.2 ಕೀ.ಮೀ. ಮೈಲೇಜ್ ನೀಡಲು ಸಕ್ಷಮವಾಗಿರಲಿದೆ. ಅಲ್ಲದೆ 12 ಲೀಟರ್ ಇಂಧನ ಸಾಮರ್ಥ್ಯ ಹೊಂದಿರುವ ಜಿಕ್ಸರ್ 135 ಕೆ.ಜಿ ತೂಕವನ್ನು ಹೊಂದಿರಲಿದೆ.

ಸುಜುಕಿ ಜಿಕ್ಸರ್ 150 ಸಿಸಿ ಬೈಕ್ ಬಿಡುಗಡೆ

ಮುಂದುಗಡೆ ಸಿಂಗಲ್ ಡಿಸ್ಕ್ ಯುನಿಟ್ ಮತ್ತು ಹಿಂದುಗಡೆ ಡ್ರಮ್ ಬ್ರೇಕ್ ವ್ಯವಸ್ಥೆ ಜೋಡಣೆ ಮಾಡಲಾಗಿದೆ. ಹಾಗೆಯೇ ಎರಡು ರಂಧ್ರಗಳ ವೃತ್ತಾಕಾರದ ಎಕ್ಸಾಸ್ಟ್ ಸಿಸ್ಟಂ ಬೈಕ್‌ಗೆ ಇನ್ನಷ್ಟು ಕ್ರೀಡಾತ್ಮಕ ಲುಕ್ ಪ್ರದಾನ ಮಾಡುತ್ತಿದೆ. ಇನ್ನು ಡಿಜಿಟಲ್ ಕ್ಲಸ್ಟರ್ ಬಗ್ಗೆ ಮಾತನಾಡುವುದಾದ್ದಲ್ಲಿ ಇದು ನೇರ ನಿಖರ ಮಾಹಿತಿಯನ್ನು ಸವಾರರಿಗೆ ಒದಗಿಸಲಿದೆ.

ಸುಜುಕಿ ಜಿಕ್ಸರ್ 150 ಸಿಸಿ ಬೈಕ್ ಬಿಡುಗಡೆ

ಅಂದ ಹಾಗೆ ಹೊಸ ಜಿಕ್ಸರ್ ಐದು ಬಣ್ಣಗಳ ಆಯ್ಕೆಗಳನ್ನು ಗ್ರಾಹಕರಿಗೆ ನೀಡಲಿದೆ. ಮೆಟ್ಯಾಲಿಕ್ ಓರ್ಟ್ ಗ್ರೇ, ಕ್ಯಾಂಡಿ ಆಂಟರೆಸ್ ರೆಡ್, ಗ್ಲಾಸ್ ಸ್ಪಾರ್ಕಲ್ ಬ್ಲ್ಯಾಕ್, ಮೆಟ್ಯಾಲಿಕ್ ಟ್ರೈಟಾನ್ ಬ್ಲೂ ಮತ್ತು ಪಿಯರ್ಲ್ ಮೈರೇಜ್ ವೈಟ್.

ಸುಜುಕಿ ಜಿಕ್ಸರ್ 150 ಸಿಸಿ ಬೈಕ್ ಬಿಡುಗಡೆ

ಇನ್ನು ವಿಶೇಷವೆಂದರೆ ಸುಜುಕಿ ಮೊಟೊ ಜಿಪಿ ಸೂಪರ್ ಬೈಕ್ ಪ್ರೋಗ್ರೋನಲ್ಲಿ ಕೆಲಸ ಮಾಡುತ್ತಿರುವ ಎಂಜಿನಿಯರ್‌ಗಳೇ ಹೊಸ ಜಿಕ್ಸರ್ ಬೈಕನ್ನು ಅಭಿವೃದ್ಧಿಪಡಿಸಿದ್ದಾರೆ. ಅಂದರೆ ನಿರ್ಹಹಣೆ ಹಾಗೂ ಕ್ರೀಡಾತ್ಮಕ ನೋಟದಲ್ಲಿ ಯಾವುದೇ ರಾಜಿಗೂ ತಯಾರಾಗಿಲ್ಲ.

ಸುಜುಕಿ ಜಿಕ್ಸರ್ 150 ಸಿಸಿ ಬೈಕ್ ಬಿಡುಗಡೆ

ಇದು ಯಮಹಾ ಎಫ್‌ಝಡ್ ಎಫ್ ವಿ2 0, ಹೀರೊ ಎಕ್ಸ್‌ಟ್ರೀಮ್ ಮತ್ತು ಹೋಂಡಾ ಸಿಬಿ ಟ್ರಿಗರ್‌ಗಳಂತಹ ಬೈಕ್‌ಗಳಿಗೆ ಜಿಕ್ಸರ್ ಪ್ರತಿಸ್ಪರ್ಧಿಯಾಗಿರಲಿದೆ.

ದರ ಮಾಹಿತಿ (ಆನ್ ರೋಡ್ ಕರ್ನಾಟಕ)

ದರ ಮಾಹಿತಿ (ಆನ್ ರೋಡ್ ಕರ್ನಾಟಕ)

ಬೆಂಗಳೂರು ಹೊರತುಪಡಿಸಿ ಕರ್ನಾಟಕದ ಇತರೆಲ್ಲ ಭಾಗಗಳಲ್ಲಿ ಸಮಾನ ಬೆಲೆ ಇರಲಿದೆ.

ಬೆಂಗಳೂರು: 87074 ರು.

ಬೆಳಗಾವಿ, ರಾಯಚೂರು, ಬಿದರ್, ಬಿಜಾಪುರ, ಚಿತ್ರದುರ್ಗ, ದೇವನಗೆರೆ, ಗುಲ್ಬರ್ಗ, ಹಾಸನ, ಹುಬ್ಲಿ, ಮಂಗಳೂರು, ಮೈಸೂರು, ರಾಯಚೂರು, ಶಿಮೊಗ್ಗ ಮತ್ತು ತುಮಕೂರು: 87058 ರು.

ಎಂಜಿನ್

ಎಂಜಿನ್

ವಿಧ: 4 ಸ್ಟ್ರೋಕ್, 1 ಸಿಲಿಂಡರ್, ಏರ್ ಕೂಲ್ಡ್,

ವಾಲ್ವ್ ಸಿಸ್ಟಂ: ಸಿಒಎಚ್‌ಸಿ, 2 ವಾಲ್ವ್,

ಸಿಸಿ: 154.9 ಸಿಸಿ

ಎಂಜಿನ್ ಔಟ್‌ಪುಟ್: 14.8 ಪಿಎಸ್ @ 8000 ಆರ್‌ಪಿಎಂ,

ಟಾರ್ಕ್: 14 ಎನ್‌ಎಂ @ 6000 ಆರ್‌ಪಿಎಂ

ಇಂಧನ ಸಿಸ್ಟಂ: ಕಾರ್ಬ್ಯೂರೇಟರ್,

ಸ್ಟಾರ್ಟರ್ ಸಿಸ್ಟಂ: ಎಲೆಕ್ಟ್ರಿಕ್

ಟ್ರಾನ್ಸ್‌ಮಿಷನ್ ವಿಧ: 5 ಸ್ಪೀಡ್, ಎಂಟಿ

ಬ್ರೇಕ್

ಬ್ರೇಕ್

ಮುಂಭಾಗ: ಸಿಂಗಲ್ ಡಿಸ್ಕ್,

ಹಿಂಭಾಗ: ಡ್ರಮ್

 ಆಯಾಮ

ಆಯಾಮ

ವೀಲ್ಸ್: ಕಾಸ್ಟ್,

ಉದ್ದ: 2,050 ಎಂಎಂ,

ಅಗಲ: 785 ಎಂಎಂ

ಎತ್ತರ: 1,030 ಎಂಎಂ,

ವೀಲ್ ಬೇಸ್: 1,330 ಎಂಎಂ,

ಗ್ರೌಂಡ್ ಕ್ಲಿಯರನ್ಸ್: 160 ಎಂಎಂ,

ಸೀಟು ಎತ್ತರ: 780 ಎಂಎಂ

ಭಾರ: 135 ಕೆ.ಜಿ

ಇಂಧನ ಟ್ಯಾಂಕ್ ಸಾಮರ್ಥ್ಯ: 12 ಲೀಟರ್

ಸಸ್ಪೆಷನ್

ಸಸ್ಪೆಷನ್

ಮುಂಭಾಗ: ಟೆಲಿಸ್ಕಾಪಿಕ್

ರಿಯರ್: ಸ್ವಿಂಗ್ ಆರ್ಮ್, ಮೊನೊ ಸಸ್ಪೆಷನ್

Most Read Articles

Kannada
English summary
Much awaited Suzuki Gixxer 155cc motorcycle launched in India at a price of Rs 72,199 (ex-showroom Delhi).
Story first published: Tuesday, September 9, 2014, 14:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X