ಅತಿ ಶೀಘ್ರದಲ್ಲೇ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಲಾಂಚ್

By Nagaraja

ದೇಶದ ಬೈಕ್ ಪ್ರಿಯರಿಗೆ ಮಗದೊಂದು ಖುಷಿ ಸುದ್ದಿ ಬಂದಿದೆ. ಭಾರತದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಗಳಲ್ಲಿ ಒಂದಾಗಿರುವ ಟಿವಿಎಸ್ ಮೋಟಾರು ಇಂಡಿಯಾ ಸಂಸ್ಥೆಯು, ಅತಿ ಶೀಘ್ರದಲ್ಲೇ ನೂತನ ಸ್ಟಾರ್ ಸಿಟಿ ಪ್ಲಸ್ ಬೈಕನ್ನು ಲಾಂಚ್ ಮಾಡಲಿದೆ.

ದೇಶದ ಟಾಪ್ 10 ಜನಪ್ರಿಯ ಸ್ಕೂಟರ್, ಬೈಕ್‌ಗಳು

ವರದಿಗಳ ಪ್ರಕಾರ ನೂತನ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಮುಂಬರುವ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಇದು ಸಾಮಾನ್ಯ ಸ್ಟಾರ್ ಸಿಟಿ ಬೈಕ್‌ನ ಪ್ರೀಮಿಯಂ ಆವೃತ್ತಿಯಾಗಿರಲಿದೆ.

ಅತಿ ಶೀಘ್ರದಲ್ಲೇ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಲಾಂಚ್

ಈಗಾಗಲೇ ಫೆಬ್ರವರಿ ತಿಂಗಳಲ್ಲಿ ನಡೆದಿರುವ 2014 ಆಟೋ ಎಕ್ಸ್ ಪೋ ವಾಹನ ಪ್ರದರ್ಶನ ಮೇಳದಲ್ಲಿ ಭರ್ಜರಿ ಪ್ರದರ್ಶನ ಕಂಡಿರುವ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್, ತಮಿಳುನಾಡಿನ ಹೊಸೂರು ಘಟಕದಲ್ಲಿ ನಿರ್ಮಾಣವಾಗಲಿದೆ.

ಅತಿ ಶೀಘ್ರದಲ್ಲೇ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಲಾಂಚ್

ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಮೇ ತಿಂಗಳ ಮೊದಲ ವಾರದಲ್ಲಿ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಲಾಂಚ್ ಆಗಲಿದೆ. ಈ 110 ಸಿಸಿ ಬೈಕ್, ಪ್ರಾರಂಭದಲ್ಲಿ ರಾಜಸ್ತಾನ, ಮಧ್ಯ ಪ್ರದೇಶ, ಉತ್ತರ ಪ್ರದೇಶ ಮತ್ತು ಬಿಹಾರಗಳಂತಹ ರಾಜ್ಯಗಳಲ್ಲಿ ಮಾತ್ರ ದೊರಕಲಿದೆ. ಹಾಗೆಯೇ ಜೂನ್ ತಿಂಗಳ ವೇಳೆ ದೇಶದ್ಯಾಂತ ಲಭ್ಯವಾಗಲಿದೆ.

ಮುಖ್ಯಾಂಶಗಳು

ಮುಖ್ಯಾಂಶಗಳು

  • 110 ಸಿಸಿ ಇಕೊಥ್ರಸ್ಟ್ ಡಿಎಲ್‌ಐ ಎಂಜಿನ್,
  • ಬೆಸ್ಟ್ ಇನ್ ಕ್ಲಾಸ್ ಮೈಲೇಜ್,
  • ಡೈನಾಮಿಕ್ ಸ್ಟೈಲಿಂಗ್,
  • ಡಿಜಿಟಲ್ ಸ್ಪೀಡೋಮೀಟರ್ ಜತೆ ಇಕೊನೊಮೀಟರ್,
  • ಸರ್ವೀಸ್ ರಿಮೈಂಡರ್,
  • ಆಲ್ ಗೇರ್ ಎಲೆಕ್ಟ್ರಿಕ್ ಸ್ಟಾರ್ಟ್,
  • ಹೈ ಕಂಫರ್ಟ್ ಸೀಟು
  • ಅತಿ ಶೀಘ್ರದಲ್ಲೇ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಲಾಂಚ್

    ವಿನ್ಯಾಸದ ಬಗ್ಗೆ ಮಾತನಾಡುವುದಾದಲ್ಲಿ ಹಿಂದಿನ ಆವೃತ್ತಿಗಿಂತ ಕೆಲವೊಂದು ಕಾಸ್ಮೆಟಿಕ್ ಬದಲಾವಣೆ ಪಡೆದುಕೊಳ್ಳಲಿದ್ದು, ಪ್ರೀಮಿಯಂ ಸ್ಪರ್ಶ ಪಡೆದುಕೊಳ್ಳಲಿದೆ. ಅಂದರೆ ಹಿಂದಿನ ಸ್ಟಾರ್ ಸಿಟಿಗಿಂತಲೂ ಹೆಚ್ಚು ತೀಕ್ಷ್ಣವಾದ ಲುಕ್ ಗಿಟ್ಟಿಸಿಕೊಳ್ಳಲಿದೆ.

    ಅತಿ ಶೀಘ್ರದಲ್ಲೇ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಲಾಂಚ್

    ಪರಿಷ್ಕತ ಗ್ರಾಫಿಕ್ಸ್ ಜತೆ, ಪರಿಷ್ಕೃತ ಹೆಡ್‌ಲೈಟ್, ಇಂಧನ ಟ್ಯಾಂಕ್, ದೊಡ್ಡದಾದ ಹಾಗೂ ಹೆಚ್ಚು ಆರಾಮದಾಯಕ ಸೀಟುಗಳು, ಹೊಸತಾದ ಎಕ್ಸಾಸ್ಟ್ ಪೈಪ್ ವಿನ್ಯಾಸ ಹಾಗೂ ಡ್ಯುಯಲ್ ಟೋನ್ ಮಡ್‌ಗಾರ್ಡ್ ಸೌಲಭ್ಯವಿರಲಿದೆ.

    ಅತಿ ಶೀಘ್ರದಲ್ಲೇ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಲಾಂಚ್

    ಕೇವಲ ವಿನ್ಯಾಸ ಮಾತ್ರವಲ್ಲ, ಮೆಕ್ಯಾನಿಕಲ್ ಘಟಕದಲ್ಲೂ ಬದಲಾವಣೆ ಕಂಡುಬರಲಿದೆ. ಇದು ಐದು ಹಂತದ ಹೊಂದಾಣಿಸಬಹುದಾದ ರಿಯರ್ ಸಸ್ಪೆಷನ್ ಪಡೆದುಕೊಳ್ಳಲಿದೆ. ಸ್ಟಾರ್ ಸಿಟಿಯಲ್ಲಿ ಇದು ಟು ಸ್ಟೆಪ್ ಹೊಂದಾಣಿಸಬಹುದಾದ ಘಟಕ ಆಗಿದೆ.

    ಅತಿ ಶೀಘ್ರದಲ್ಲೇ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಲಾಂಚ್

    ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿದೆ. ಇದು 110ಸಿಸಿ ಇಕೊಥ್ರಸ್ಟ್ ಡ್ಯುರಲೈಫ್ (ಡಿಎಲ್‌ಐ) ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 8.3 ಅಶ್ವಶಕ್ತಿ (8.7 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಹೆಚ್ಚು ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ ಎಂದು ಸಹ ಸಂಸ್ಥೆ ಅಭಿಪ್ರಾಯಪಟ್ಟಿದೆ.

    ಅತಿ ಶೀಘ್ರದಲ್ಲೇ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಲಾಂಚ್

    ಹಾಗಿದ್ದರೂ ದರದ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ. ಬಿಡುಗಡೆ ವೇಳೆ ಸಂಪೂರ್ಣ ಮಾಹಿತಿಯನ್ನು ನಿಮ್ಮ ಮುಂಡಿಡಲಿದ್ದೇವೆ. ಇದಕ್ಕಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ.

Most Read Articles

Kannada
English summary
TVS Star City+ is a more premium version of the regular Star City and was first showcased at the Auto Expo 2014 in February. The first production units have now reportedly rolled out of the manufacturing plant in Hosur, Tamil Nadu.
Story first published: Thursday, April 24, 2014, 16:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X