ಮುಂಬರುವ ಬೈಕ್ ಹಾಗೂ ಸ್ಕೂಟರುಗಳು

By Nagaraja

ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನಗಳಿಗೆ ಭಾರಿ ಬೇಡಿಕೆಯಿದೆ. ಜನರು ತಮ್ಮ ದೈನಂದಿನ ಬಳಕೆಗಾಗಿ ಬೈಕ್ ಹಾಗೂ ಸ್ಕೂಟರುಗಳನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ.

ಇದನ್ನೇ ಗುರಿಯಾಗಿರಿಸಿಕೊಂಡಿರುವ ವಾಹನ ತಯಾರಕ ಕಂಪನಿಗಳು ತಮ್ಮ ವ್ಯಾಪಾರವನ್ನು ಕುದುರಿಸಿಕೊಳ್ಳುವ ನಿಟ್ಟಿನಲ್ಲಿ ನಿರಂತರ ಅಂತರಾಳದಲ್ಲಿ ನೂತನ ಮಾದರಿ ಹಾಗೂ ಪರಿಷ್ಕೃತ ಆವೃತ್ತಿಗಳನ್ನು ಲಾಂಚ್ ಮಾಡುತ್ತಿವೆ.

ದೇಶದ ಪ್ರಯಾಣಿಕ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೀರೊ ಹಾಗೂ ಹೋಂಡಾ ಕಂಪನಿಗಳು ಪ್ರಾಬಲ್ಯ ಸಾಧಿಸಿದ್ದರೂ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ದ್ವಿಚಕ್ರ ವಾಹನಗಳ ಆಗಮನದೊಂದಿಗೆ ಪ್ರತಿಸ್ಪರ್ಧೆಯ ಸಂಖ್ಯೆಯು ವೃದ್ಧಿಯಾಗತೊಡಗಿದೆ.

ಮುಂಬರುವ ಬೈಕ್ ಹಾಗೂ ಸ್ಕೂಟರುಗಳು

ಸ್ಲೈಡರ್‌ ಮುಖಾಂತರ ದೇಶದಲ್ಲಿ ನಿಕಟ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಬೈಕ್ ಹಾಗೂ ಸ್ಕೂಟರುಗಳ ಬಗ್ಗೆ ವಿವರ ನೀಡಲಿದ್ದೇವೆ. ನಿಮ್ಮ ನಿರೀಕ್ಷೆ ಮಾಡಿಕೊಂಡಿರುವ ಬೈಕ್ ಪಟ್ಟಿಯಲ್ಲಿದೆಯೇ ಎಂಬುದನ್ನು ಗಮನಿಸಿ...

ಟಿವಿಎಸ್ ಜೆಸ್ಟ್

ಟಿವಿಎಸ್ ಜೆಸ್ಟ್

ನಿರೀಕ್ಷಿತ ಲಾಂಚ್: ಜನವರಿ 2014

ನಿರೀಕ್ಷಿತ ದರ: ರು. 40,000-45,000

ದೇಶದ ಸ್ಕೂಟರ್ ಸೆಗ್ಮೆಂಟ್‌ನಲ್ಲಿ ಹೆಚ್ಚು ಬೇಡಿಕೆ ಕಾಯ್ದುಕೊಂಡಿರುವ ಟಿವಿಎಸ್, ವಿಶೇಷವಾಗಿಯೂ ಹೆಣ್ಮಕ್ಕಳಿಗಾಗಿ ಜೆಸ್ಟ್ ಎಂಬ ಹೊಸ ಸ್ಕೂಟರನ್ನು ಲಾಂಚ್ ಮಾಡಲಿದೆ. ಇದು 2014ರಲ್ಲಿ ಮಾರುಕಟ್ಟೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

ಬಜಾಜ್ ಪಲ್ಸರ್ 375

ಬಜಾಜ್ ಪಲ್ಸರ್ 375

ದೇಶದ ನಂಬರ್ ವನ್ ಸ್ಪೋರ್ಟ್ಸ್ ಬೈಕಾಗಿರುವ ಬಜಾಜ್ ಪಲ್ಸರ್, ಮೊತ್ತ ಮೊದಲ ಬಾರಿಗೆ ಫೇರ್ಡ್ ವರ್ಷನ್ ಬೈಕ್ ಪ್ರಸ್ತುತಪಡಿಸುತ್ತಿದೆ. ಇದು 375ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, ಪ್ರಸಕ್ತ ಸಾಲಿನಲ್ಲೇ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.

 ಕರಿಜ್ಮಾ ಝಡ್‌ಎಂಆರ್

ಕರಿಜ್ಮಾ ಝಡ್‌ಎಂಆರ್

ಹೀರೊ ಕರಿಜ್ಮಾ ಉತ್ತರಾಧಿಕಾರಿ ಸದ್ಯದಲ್ಲೇ ದೇಶದ ರಸ್ತೆ ಪ್ರವೇಶಿಸಲಿದೆ. 250ಸಿಸಿ ವಿಭಾಗದಲ್ಲಿ ಕಾಣಿಸಿಕೊಳ್ಳಲಿರುವ ಈ ಬೈಕ್‌ನಲ್ಲಿ ಇಬಿಆರ್ ತಂತ್ರಜ್ಞಾನ ಆಳವಡಿಕೆಯಾಗುವ ಸಾಧ್ಯತೆಯಿದೆ.

ಮಹೀಂದ್ರ ಮೊಜೊ

ಮಹೀಂದ್ರ ಮೊಜೊ

ನಿರೀಕ್ಷಿತ ಲಾಂಚ್: 2014 ವರ್ಷಾರಂಭದಲ್ಲಿ

ನಿರೀಕ್ಷಿತ ದರ: 2 ಲಕ್ಷ ರು.

ಮಹೀಂದ್ರ ಮೊಜೊ ಕಾನ್ಸೆಪ್ಟ್ ಬೈಕ್ ಮೊದಲ ಬಾರಿಗೆ 2010ರಲ್ಲಿ ಪರಿಚಯವಾಗಿತ್ತು. ಹಾಗಿದ್ದರೂ ಈ 300ಸಿಸಿ ಬೈಕಿನ ಲಾಂಚ್ ದಿನಾಂಕ ಇದುವರೆಗೆ ಮುಂದೂಡಲಾಗಿತ್ತು. ಇದೀಗ ಲಭ್ಯವಿರುವ ಮಾಹಿತಿ ಪ್ರಕಾರ ಮೊಜೊ ಹೊಸ ಆವೃತ್ತಿ 2014 ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಕಾಣಲಿದ್ದು, ಆ ಬಳಿಕ ಮಾರುಕಟ್ಟೆ ಪ್ರವೇಶಿಸಲಿದೆ.

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ

ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ

ನಿರೀಕ್ಷಿತ ಲಾಂಚ್: 2013 ಅಕ್ಟೋಬರ್

ನಿರೀಕ್ಷಿತ ದರ: 2.5 ಲಕ್ಷದಿಂದ 3 ಲಕ್ಷ ರು.

ಈಗಾಗಲೇ ಬ್ರಿಟನ್ ಪ್ರವೇಶ ಪಡೆದಿರುವ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ ಸದ್ಯದಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ.

ಹ್ಯೊಸಂಗ್ ಜಿವಿ250

ಹ್ಯೊಸಂಗ್ ಜಿವಿ250

ನಿರೀಕ್ಷಿತ ಲಾಂಚ್: 2014 ಮಧ್ಯಂತರ ಅವಧಿ

ನಿರೀಕ್ಷಿತ ದರ: 2.5 ಲಕ್ಷದಿಂದ 3 ಲಕ್ಷ ರು.

250ಸಿಸಿ ಸೆಗ್ಮೆಂಟ್‌ನಲ್ಲಿ ಈಗಾಗಲೇ ಹಲವಾರು ಬೈಕ್‌ಗಳ ಪಟ್ಟಿ ಪ್ರಕಟವಾಗಿದೆ. ಇದಕ್ಕೊಂದು ಸೇರ್ಪೆಡೆಯೆಂಬಂತೆ ಅಮೆರಿಕದ ಪ್ರಖ್ಯಾತ ಕಂಪನಿಯಾಗಿರುವ ಹ್ಯೊಸಂಗ್ ಕ್ರೂಸರ್ ಬೈಕ್ ಪ್ರಸ್ತುತಪಡಿಸಲಿದೆ. ಇದು ಸ್ಥಳೀಯವಾಗಿ ಉತ್ಪಾದನೆಯಾಗಲಿರುವುದು ಸ್ಮರ್ಧಾತ್ಮಕ ದರಗಳಲ್ಲಿ ಮಾರುಕಟ್ಟೆ ಪ್ರವೇಶಿಸಲು ನೆರವಾಗಲಿದೆ.

ಹರ್ಲಿ ಡೇವಿಡ್ಸನ್ 500ಸಿಸಿ

ಹರ್ಲಿ ಡೇವಿಡ್ಸನ್ 500ಸಿಸಿ

ನಿರೀಕ್ಷಿತ ಲಾಂಚ್: 2014

ನಿರೀಕ್ಷಿತ ದರ: 4.5 ಲಕ್ಷದಿಂದ 5 ಲಕ್ಷ ರು.

ಬೇಬಿ ಹರ್ಲಿ ಎಂದೇ ಪ್ರಚಾರ ಗಿಟ್ಟಿಸಿಕೊಂಡಿರುವ ಹರ್ಲಿ ಡೇವಿಡ್ಸನ್‌ 500ಸಿಸಿ ಬೈಕ್ ಈಗಾಗಲೇ ಬೈಕ್ ಪ್ರಿಯರಲ್ಲಿ ಹೆಚ್ಚು ಕ್ರೇಜ್ ಹುಟ್ಟಿಸಿದೆ. ಇದು ಕೂಡಾ ಸ್ಥಳೀಯವಾಗಿ ಜೋಡಣೆಯಾಗಲಿರುವುದು ಸ್ಮರ್ಧಾತ್ಮಕ ದರಗಳಲ್ಲಿ ಲಭಿಸಲು ನೆರವಾಗಲಿದೆ. ಪ್ರಸ್ತುತ ಬೈಕ್ 2014 ಆಟೋ ಎಕ್ಸ್‌ಪೋದಲ್ಲೂ ಪ್ರದರ್ಶನ ಕಾಣಲಿದೆ.

ಸುಜುಕಿ ಇನಾಜುಮಾ ಜಿಡಬ್ಲ್ಯು250ಎಸ್

ಸುಜುಕಿ ಇನಾಜುಮಾ ಜಿಡಬ್ಲ್ಯು250ಎಸ್

ನಿರೀಕ್ಷಿತ ಲಾಂಚ್: 2014 ಫೆಬ್ರವರಿ

ನಿರೀಕ್ಷಿತ ದರ: 2 ಲಕ್ಷದಿಂದ 2.5 ಲಕ್ಷ ರು.

ಎಲ್ಲವೂ ನಿರೀಕ್ಷೆಯಂತೆಯೇ ನಡೆದಿದ್ದರೆ ಸುಜುಕಿ ಇನಾಮುಜಾ ಈಗಾಗಲೇ ದೇಶದ ರಸ್ತೆ ಪ್ರವೇಶಿಸಬೇಕಾಗಿತ್ತು. ಪ್ರಸ್ತುತ ಸುಜುಕಿ ಇನಾಮುಜಾ 2014 ವರ್ಷಾರಂಭದಲ್ಲಿ ಲಾಂಚ್ ಆಗುವ ಸಾಧ್ಯತೆಯಿದೆ ಎಂದು ಆಟೋ ಮೂಲಗಳು ತಿಳಿಸಿವೆ.

ಟ್ರಯಂಪ್ ಮೋಟಾರ್‌ಸೈಕಲ್

ಟ್ರಯಂಪ್ ಮೋಟಾರ್‌ಸೈಕಲ್

ನಿರೀಕ್ಷಿತ ಲಾಂಚ್: 2014 ಜನವರಿ

ನಿರೀಕ್ಷಿತ ದರ: 6 ಲಕ್ಷ ರು.

ಟ್ರಯಂಪ್ ಮೋಟಾರ್ ಸೈಕಲ್ ಸಹ ಮುಂದಿನ ವರ್ಷಾರಂಭದಲ್ಲಿ ದೇಶಕ್ಕೆ ಲಗ್ಗೆಯಿಡಲಿದೆ. ಟ್ರಯಂಪ್ ಬೊನೆವಿಲ್ಲೆ ಆವೃತ್ತಿ 6 ಲಕ್ಷದಿಂದ ಆರಂಭವಾದರೆ ದುಬಾರಿ ರಾಕೆಟ್ IIIಗೆ 25ರಿಂದ 30 ಲಕ್ಷ ರು.ಗಳಷ್ಟು ವೆಚ್ಚ ತಗುಲಲಿದೆ. ಇದರಲ್ಲಿ ನೆಕ್ಡ್, ಸ್ಪೋರ್ಟ್ಸ್, ಕ್ರೂಸರ್, ಸ್ಟ್ರೀಟ್‌ಫೈಟರ್ ಹಾಗೂ ಟೂರಿಂಗ್ ಬೈಕ್‌ಗಳಿರಲಿದೆ.

ವಿಕ್ಟರಿ ಮೋಟಾರ್‌ಸೈಕಲ್

ವಿಕ್ಟರಿ ಮೋಟಾರ್‌ಸೈಕಲ್

ನಿರೀಕ್ಷಿತ ಲಾಂಚ್: 2014

ನಿರೀಕ್ಷಿತ ದರ: 30 ಲಕ್ಷ ರು.

ಪೊಲರಿಸ್ ಅಂಗಸಂಸ್ಥೆಯಾಗಿರುವ ವಿಕ್ಟರಿ, ಅಮೆರಿಕದ ಸಾಂಪ್ರದಾಯಸ್ಥ ಬೈಕ್ ಉತ್ಪಾದಕ ಸಂಸ್ಥೆಯಾಗಿದೆ. ಅಂದ ಹಾಗೆ ವಿಕ್ಟರಿ ಕ್ರಾಸ್ ಕಂಟ್ರಿ ಟೂರ್ ಹಾಗೂ ವಿಷನ್ ಟೂರ್ ಭಾರತ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳು ಹೆಚ್ಚಿವೆ. ಇದು ಹರ್ಲಿ ಡೇವಿಡ್ಸನ್ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.

ಮುಂಬರುವ ಬೈಕ್ ಹಾಗೂ ಸ್ಕೂಟರುಗಳು

ಈ ಎಲ್ಲ ಬೆಳವಣಿಗೆಗಳು ದೇಶದ ದ್ವಿಚಕ್ರ ವಾಹನ ವಿಭಾಗವನ್ನು ಇನ್ನಷ್ಟು ಬಲಪಡಿಸಲಿದೆ. ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

Most Read Articles

Kannada
English summary
The near future holds some exciting news for motorcycle enthusiasts in India. The rapidly maturing two wheeler scene in India will witness the launch of several bike and scooter models in all categories, ranging from small displacement scooterettes to large displacement super bikes to cruisers to quarter liter motorcycles.
Story first published: Monday, September 30, 2013, 10:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X