ಯಮಹಾದಿಂದ ಮಹಿಳೆ ಹಾಗೂ ಮಕ್ಕಳಿಗಾಗಿ ವಿಶೇಷ ಹೆಲ್ಮೆಟ್

By Nagaraja

ತನ್ನ ವಿಭಿನ್ನ ಬೈಕ್ ಹಾಗೂ ಸ್ಕೂಟರ್‌ಗಳಿಂದಾಗಿ ಯುವ ಜನಾಂಗದಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಯಮಹಾ ಇಂಡಿಯಾ ಸಂಸ್ಥೆಯು ಇದೀಗ ಮಹಿಳೆಯರು ಹಾಗೂ ಮಕ್ಕಳಿಗಾಗಿ ವಿಶೇಷ ಹೆಲ್ಮೆಟ್‌ಗಳನ್ನು ಬಿಡುಗಡೆಗೊಳಿಸಿದೆ.

ಸಂಸ್ಥೆಯ ಪ್ರಕಾರ ಮಹಿಳೆ ಹಾಗೂ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಡುವ ಮೂಲಕ ಹೊಸ ಹೆಲ್ಮೆಟ್ ಬಿಡುಗಡೆ ಮಾಡಲಾಗಿದೆ. ನವದೆಹಲಿಯಲ್ಲಿ ಮಹಿಳೆಯರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕೆಂಬ ನಿಯಮ ಜಾರಿಯಲ್ಲಿರುವಂತೆಯೇ ಯಮಹಾದಿಂದ ಇಂತಹದೊಂದು ಬೆಳವಣಿಗೆ ಕಂಡುಬಂದಿದೆ.

ಯಮಹಾದಿಂದ ಮಹಿಳೆ ಹಾಗೂ ಮಕ್ಕಳಿಗಾಗಿ ವಿಶೇಷ ಹೆಲ್ಮೆಟ್

ವಿಶೇಷವಾಗಿ ರೂಪಿಸಲಾಗಿರುವ ಯಮಹಾ ಹೆಲ್ಮೆಟ್‌ಗಳು 990 ರು.ಗಳಿಂದ ಆರಂಭವಾಗಿ 1,380 ರು.ಗಳಷ್ಟು ದುಬಾರಿಯೆನಿಸಲಿದೆ.

ಯಮಹಾದಿಂದ ಮಹಿಳೆ ಹಾಗೂ ಮಕ್ಕಳಿಗಾಗಿ ವಿಶೇಷ ಹೆಲ್ಮೆಟ್

ದೆಹಲಿ ಸರಕಾರ ಇತ್ತೀಚೆಗಷ್ಟೇ ಹೊರಡಿಸಿರುವ ಆದೇಶದಲ್ಲಿ ಸಹ ಪ್ರಯಾಣಿಕದಂತೆ ಮಹಿಳೆಯರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಆದೇಶ ಹೊರಡಿಸಿತ್ತು. ಇದನ್ನು ಸ್ವಾಗತಿಸಿರುವ ಯಮಹಾ ಸಂಸ್ಥೆಯು ಗರಿಷ್ಠ ಸುರಕ್ಷತೆಯ ನಿಟ್ಟಿನಲ್ಲಿ ಮಕ್ಕಳಿಗೂ ಹೆಲ್ಮೆಟ್ ಬಳಕೆ ಕಡ್ಡಾಯಗೊಳಿಸಬೇಕು ಎಂದಿದೆ.

ಯಮಹಾದಿಂದ ಮಹಿಳೆ ಹಾಗೂ ಮಕ್ಕಳಿಗಾಗಿ ವಿಶೇಷ ಹೆಲ್ಮೆಟ್

ಇದಾದ ಬಳಿಕ ರಾಷ್ಟ್ರ ರಾಜಧಾನಿಯ ಅನೇಕ ಮಹಿಳಾ ಸವಾರರು ದಂಡನೆಗೊಳಗಾಗಿದ್ದರು. ಅಲ್ಲದೆ ಮಹಿಳೆಯರಿಗೆ ಹೊಂದಿಕೆಯಾಗುವಂತಹ ಹೆಲ್ಮೆಟ್‌ಗಳ ಅಭಾವವಿದೆ ಎಂಬ ಕೂಗು ಕೇಳಿ ಬಂದಿತ್ತು.

ಯಮಹಾದಿಂದ ಮಹಿಳೆ ಹಾಗೂ ಮಕ್ಕಳಿಗಾಗಿ ವಿಶೇಷ ಹೆಲ್ಮೆಟ್

ಇದನ್ನು ಗಂಭೀರವಾಗಿ ಪರಿಗಣಿಸಿರುವ ಯಮಹಾ ಸಂಸ್ಧೆಯು ಹೊಸತಾದ ಐಎಸ್‌ಐ ಮಾನ್ಯತೆ ಪಡೆದಿರುವ ಶಿರಸ್ತ್ರಾಣಗಳನ್ನು ಅಭಿವೃದ್ಧಪಡಿಸಿದೆ.

Most Read Articles

Kannada
English summary
Yamaha Motor India Sales Pvt. Ltd. (YMIS) launches its ‘cool’ and ‘stylish’ helmets for women and kids in India. 
Story first published: Tuesday, September 23, 2014, 16:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X