ಡೀಸೆಲ್ ಕಾರುಗಳ ಬದಲಿಗೆ ಪೆಟ್ರೋಲ್ ಕಾರುಗಳತ್ತ ಗ್ರಾಹಕರ ಒಲವು

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯು ತನ್ನ ಜನಪ್ರಿಯ ಡೀಸೆಲ್ ಕಾರುಗಳನ್ನು ಸ್ಥಗಿತಗೊಳಿಸಲಾಗಿದೆ. ಡೀಸೆಲ್ ಮಾದರಿಗಳಿಗೆ ಬೇಡಿಕೆಯು ಕಡಿಮೆಯಾಗುತ್ತಿದೆ ಮತ್ತು ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುವುದರಿಂದ ಮಾರುತಿ ಸುಜುಕಿ ಕಂಪನಿಯು ಡೀಸೆಲ್ ಕಾರುಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿತು.

ಡೀಸೆಲ್ ಕಾರುಗಳ ಬದಲಿಗೆ ಪೆಟ್ರೋಲ್ ಕಾರುಗಳತ್ತ ಗ್ರಾಹಕರ ಒಲವು

ಕಳೆದ ವರ್ಷ ಮಾರುತಿ ಸುಜುಕಿ ಜನಪ್ರಿಯ ಡೀಸೆಲ್ ಮಾದರಿಗಳ ಒಟ್ಟು ಮಾರಾಟವು ದೊಡ್ಡ ಪ್ರಮಾಣದಲ್ಲಿ ಕುಸಿತವನ್ನು ಕಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಹ್ಯಾಚ್‌ಬ್ಯಾಕ್‌ಗಳಾದ ಮಾರುತಿ ಸ್ವಿಫ್ಟ್ ಮತ್ತು ಬಲೆನೊ ಡೀಸೆಲ್ ಮಾದರಿಗಳಿಗೆ ಹೋಲಿಸಿದರೆ ಪೆಟ್ರೋಲ್ ಮಾದರಿಗಳಿಗೆ ಹೆಚ್ಚು ಬೇಡಿಕೆಯನ್ನು ಹೊಂದಿದೆ. ಕಳೆದ ವರ್ಷ‌ ಮಾರುತಿ ಸ್ವಿಫ್ಟ್ ಡೀಸೆಲ್ ಆವೃತ್ತಿಯು ಕೇವಲ ಶೇ.20 ರಷ್ತು ಮಾತ್ರ ಮಾರಾಟವಾಗಿವೆ. ಇನ್ನು ಮಾರುತಿ ಸುಜುಕಿ ಬಲೆನೊ ಕಾರಿನ ಡೀಸೆಲ್ ಆವೃತ್ತಿಯು ಶೇ.7 ರಷ್ಟು ಮಾತ್ರ ಮಾರಾಟವಾಗಿವೆ.

ಡೀಸೆಲ್ ಕಾರುಗಳ ಬದಲಿಗೆ ಪೆಟ್ರೋಲ್ ಕಾರುಗಳತ್ತ ಗ್ರಾಹಕರ ಒಲವು

ಮಾರುತಿ ಸುಜುಕಿ ಕಂಪನಿಯು ಕಳೆದ ವರ್ಷ ತನ್ನ ಸ್ವಿಫ್ಟ್ ಕಾರಿನ 191,901 ಯು‍‍ನಿ‍‍ಟ್‍ಗಳನ್ನು ಮಾರಾಟ ಮಾಡಿವೆ. ಇದರಲ್ಲಿ ಸ್ವಿಫ್ಟ್ ಡೀಸೆಲ್ ಆವೃತ್ತಿಯ 39,095 ಯು‍‍ನಿ‍‍ಟ್‍ಗಳನ್ನು ಮಾರಾಟ ಮಾಡಿವೆ.

ಡೀಸೆಲ್ ಕಾರುಗಳ ಬದಲಿಗೆ ಪೆಟ್ರೋಲ್ ಕಾರುಗಳತ್ತ ಗ್ರಾಹಕರ ಒಲವು

ಇನ್ನು ಮಾರುತಿ ಸುಜುಕಿ ಕಂಪನಿಯು ಬಲೆನೊ ಕಾರಿನ 183,862 ಯು‍‍ನಿ‍‍ಟ್‍ಗಳನ್ನು ಮಾರಾಟ ಮಾಡಿವೆ. ಇದರಲ್ಲಿ ಬಲೆನೊ ಡೀಸೆಲ್ ಆವೃತ್ತಿಯ 12,809 ಯು‍‍ನಿ‍‍ಟ್‍ಗಳನ್ನು ಮಾರಾಟ ಮಾಡಿವೆ.

ಡೀಸೆಲ್ ಕಾರುಗಳ ಬದಲಿಗೆ ಪೆಟ್ರೋಲ್ ಕಾರುಗಳತ್ತ ಗ್ರಾಹಕರ ಒಲವು

ಮಾರುತಿ ಸುಜುಕಿ ಸ್ವಿಫ್ಟ್ ಮತ್ತು ಬಲೆನೊ ಕಾರಿನಲ್ಲಿ ಎರಡು ರೀತಿಯ ಡೀಸೆಲ್ ಎಂಜಿನ್ ಗಳನ್ನು ಅಳವಡಿಸಲಾಗಿದೆ. ಈ ಎಂಜಿನ್ 75 ಬಿ‍‍ಹೆಚ್‍‍‍ಪಿ ಪವರ್ 190 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತದೆ.

ಡೀಸೆಲ್ ಕಾರುಗಳ ಬದಲಿಗೆ ಪೆಟ್ರೋಲ್ ಕಾರುಗಳತ್ತ ಗ್ರಾಹಕರ ಒಲವು

ಇನ್ನು ಸ್ವಿಫ್ಟ್ ಮತ್ತು ಬಲೆನೊ ಕಾರುಗಳಲ್ಲಿರುವ ಇನ್ನೊಂದು ಡೀಸೆಲ್ ಎಂಜಿನ್ ಆಯ್ಕೆ 1.2-ಲೀಟರ್ ಕೆ-ಸೀರೀಸ್ ಎಂಜಿನ್‌ ಆಗಿದೆ. ಈ ಎಂಜಿನ್ 83 ಬಿ‍‍ಹೆಚ್‍‍‍ಪಿ ಪವರ್ 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಎಂಟಿ ಮತ್ತು 5-ಸ್ಪೀಡ್ ಎಎಂಟಿ ಗೇರ್‍‍ಬಾಕ್ಸ್ ಅನ್ನು ಸ್ಟಾಂಡರ್ಡ್ ಆಗಿ ಜೋಡಿಸಲಾಗಿದೆ.

MOST READ: ಭಾರತದಲ್ಲಿ ಬಿಡುಗಡೆಯಾಗಲಿರುವ ಬಹುನೀರಿಕ್ಷಿತ ಮಾರುತಿ ಸುಜುಕಿ ಜಿಮ್ನಿ ಹೀಗಿರಲಿದೆ

ಡೀಸೆಲ್ ಕಾರುಗಳ ಬದಲಿಗೆ ಪೆಟ್ರೋಲ್ ಕಾರುಗಳತ್ತ ಗ್ರಾಹಕರ ಒಲವು

ಮಾರುತಿ ಸುಜುಕಿ ಸಂಸ್ಥೆಯು ಶೀಘ್ರದಲ್ಲೇ ತನ್ನ ಜನಪ್ರಿಯ ಸ್ವಿಫ್ಟ್ ಕಾರಿನಲ್ಲಿ ಹೊಸ ಪೆಟ್ರೋಲ್ ಎಂಜಿನ್ ಆಯ್ಕೆಯೊಂದನ್ನು ಬಿಡುಗಡೆಗೊಳಿಸಲಿದೆ. ಇದೀಗ ಬಿಡುಗಡೆಗೆ ಸಿದ್ದವಾಗುತ್ತಿರುವ ಸ್ವಿಫ್ಟ್ ಹೊಸ ಕಾರಿನಲ್ಲಿ ಬಲೆನೊ ಫೇಸ್‌ಲಿಫ್ಟ್‌ನಲ್ಲಿರುವಂತಹ 1.2-ಲೀಟರ್ ಫೋರ್ ಸಿಲಿಂಡರ್ ಕೆ12ಸಿ ಡ್ಯುಯಲ್‌ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಬಹುದು.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್

ಡೀಸೆಲ್ ಕಾರುಗಳ ಬದಲಿಗೆ ಪೆಟ್ರೋಲ್ ಕಾರುಗಳತ್ತ ಗ್ರಾಹಕರ ಒಲವು

ಮೆಡ್ ಇನ್ ಇಂಡಿಯಾ ಬಲೆನೊ ಕಾರು ಮೊದಲ ಬಾರಿಗೆ ಜಪಾನ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಮೊದಲ ಹ್ಯಾಚ್‌ಬ್ಯಾಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಲೆನೊ ಕಾರಿನ ಪ್ರೀಮಿಯಂ ವಿನ್ಯಾಸವು ಯುವ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ.

MOST READ: ಹೊಸ ಐ20 ಕಾರಿನ ವಾಕ್‍ರೌಂಡ್ ವೀಡಿಯೋ ಬಿಡುಗಡೆಗೊಳಿಸಿದ ಹ್ಯುಂಡೈ

ಡೀಸೆಲ್ ಕಾರುಗಳ ಬದಲಿಗೆ ಪೆಟ್ರೋಲ್ ಕಾರುಗಳತ್ತ ಗ್ರಾಹಕರ ಒಲವು

ಕೈಗೆಟುಕುವ ಬೆಲೆ ಮತ್ತು ಕಡಿಮೆ ನಿರ್ವಹಣೆಯು ಸುಲಭವಾಗಿರುವುದರಿಂದ ಭಾರತದಲ್ಲಿ ಬಿಡುಗಡೆಯಾಗಿರುವ ಬಹುತೇಕ ಮಾರುತಿ ಸುಜುಕಿ ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯತೆಯೊಂದಿಗೆ ಗ್ರಾಹಕರ ಗಮನಸೆಳೆಯುವಲ್ಲಿ ಯಶ್ವಸಿಯಾಗಿದೆ.

Most Read Articles

Kannada
English summary
Only 7% Of Maruti Baleno, 20% Swift Buyers Opted For Diesel Last Year. Read in kannada.
Story first published: Monday, March 30, 2020, 10:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X